ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾರ್ಥೋಲಮ್ಯೂ, ಸಂತ

ವಿಕಿಸೋರ್ಸ್ದಿಂದ

ಬಾರ್ಥೋಲಮ್ಯೂ, ಸಂತ

ಹನ್ನೆರಡು ಜನ ಅಪೋಸಲರಲ್ಲಿ ಒಬ್ಬ. ನಥೇನಿಯಲ್ ಈತನೇ ಎನ್ನಲಾಗಿದೆ. ಹುಟ್ಟಿದ್ದು ಉತ್ತರ ಇಸ್ರೇಲಿನ ಗಲಲೀಯದ ಕಾಲದಲ್ಲಿ. ಯೇಸುವಿಗೆ ಫಿಲಿಪ್ ಈತನನ್ನು ಪರಿಚಯಿಸಿದ. ಯೇಸು ಶಿಲುಬೆಗೇರಿದ ಮೇಲೆ ಈತ ಇಂಡಿಯಾ, ಆರ್ಮೇನಿಯ ಮತ್ತು ಏಷ್ಯಾ ಮೈನರ್‍ಗಳಲ್ಲಿ ಕ್ರಿಸ್ತನ ಸಂದೇಶವನ್ನು ಹರಡಿದ. ಅನಂತರ ಈತನನ್ನು ಆರ್ಮೇನಿಯದ ಅಲ್ಬೊನೊಪೊಲಿಸ್‍ನಲ್ಲಿ ಜೀವಂತ ಚರ್ಮ ಸುಲಿಸಿ ಶಿಲುಬೆಗೇರಿಸಲಾಯಿತಂತೆ. ಫ್ರಾನ್ಸಿನಲ್ಲಿ ಈತನ ಹಬ್ಬವನ್ನು ಪ್ರತಿವರ್ಷ ಆಗಸ್ರ್ಟ್ 24 ರಂದು ಆಚರಿಸಲಾಗಿದೆ.