ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೈರಿಗೆ

ವಿಕಿಸೋರ್ಸ್ದಿಂದ
Jump to navigation Jump to search

ಬೈರಿಗೆ

ಕತ್ತರಿಸಲು ಎರಡು ಅಥವಾ ಹೆಚ್ಚು ಅಲಗು ಅಥವಾ ಅಂಚು ಇದ್ದು ಗಟ್ಟಿ ವಸ್ತುವಿನ ಮೇಲೆ ಲಂಬೀಯವಾಗಿ ಒತ್ತಡ ಹೇರಿ ಆವರ್ತಿಸಿದಾಗ ಆ ವಸ್ತುವಿನಲ್ಲಿ ತೂತು ತೊರೆಯುವ ಸಲಾಗಿ ಮಾದರಿಯ ಸಾಧನ (ಡ್ರಿಲ್).

ಕಾಲಿಕ್ಸ್ ಬೈರಿಗೆ : ಅತಿ ಕಠಿಣ ಉಕ್ಕಿನ ಅಲಗು ಅಥವಾ ವಜ್ರದ ಮೊನೆ ಇರುವ ದೃಢ ಸಾಧನ. 180 ಸೆಂಮೀ ಗಿಂತಲೂ ಜಾಸ್ತಿ ವ್ಯಾಸ ಇರುವ ರಂಧ್ರ ಕೊರೆಯಬಲ್ಲದು. ಭೂಮಿಯ ಆಳಸ್ತರಗಳ ಜೀವುಂಡಿಗೆ ಪರೀಕ್ಷೆಗೆ ಬಳಸುವ ಉಪಕರಣವಿದು. ಪೆಟ್ರೋಲಿಯಮ್ ಅನ್ವೇಷಣೆಯಲ್ಲಿ ಇದರ ಉಪಯೋಗವಿದೆ.

ಎಂಪೈರ್ ಬೈರಿಗೆ : ಅದುರು ಅನ್ವೇಷಣೆಯಲ್ಲಿ ರಂಧ್ರಗಳನ್ನು ಕೊರೆಯಲು ಬಳಸುವ ಸಾಧನ. ಇದರ ಕೆಳ ತುದಿಯಲ್ಲಿ ಕತ್ತರಿಸುವ ಹಲ್ಲುಗಳೂ ಮೇಲ್ಭಾಗದ ತುದಿಯಲ್ಲಿ ಉಕ್ಕಿನ ವೇದಿಕೆಯೂ ಇವೆ. ಬೈರಿಗೆ ಸುಲಭವಾಗಿ ಆವರ್ತಿಸಲು ಅನುಕೂಲವಾಗುವಂತೆ ವೇದಿಕೆಯ ಕೆಳಗಡೆ ಸುತ್ತುವ ಕೈಪಿಡಿಯನ್ನು ಅಳವಡಿಸಿದೆ. ವೇದಿಕೆಯ ಮೇಲೆ ಸಾಕಷ್ಟು (ಸುಮಾರು 40-50 ಜನ) ಕಾರ್ಯ ನಿರತರಾಗಿರುತ್ತಾರೆ. (ಟಿ.ಟಿ.)