ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಹ್ಮಾವರ

ವಿಕಿಸೋರ್ಸ್ದಿಂದ

ಬ್ರಹ್ಮಾವರ ಕರ್ನಾಟಕದ ರಾಜ್ಯದ ಉಡುಪಿ ಜಿಲ್ಲೆಯ ಉಡುಪಿ ತಾಲ್ಲೂಕಿನ ಒಂದು ಹಳ್ಳಿ. ಉಡುಪಿಯಿಂದ ಉತ್ತರಕ್ಕೆ 13 ಕಿಮೀ ದೂರದಲ್ಲಿ ಕುಂದಾಪುರಕ್ಕೆ ಹೋಗುವ ಹೆದ್ದಾರಿಯಲ್ಲಿದೆ. ಜನಸಂಖ್ಯೆ 4702 (1971). ಮೊದಲು ಇದೊಂದು ಅಗ್ರಹಾರವಾಗಿತ್ತು. ಬ್ರಹ್ಮಪುರ ಎಂಬ ಹೆಸರಿನ ಉಲ್ಲೇಖ 12-13ನೆಯ ಶತಮಾನಗಳ ಶಾಸನಗಳಲ್ಲಿ ದೊರೆಯುತ್ತದೆ. ಇಲ್ಲಿ ಮಹಾಲಿಂಗೇಶ್ವರ, ಜನಾರ್ಧನ ಮತ್ತು ಗೋಪೀನಾಥ ದೇವಾಲಯಗಳಿವೆ.

ಬ್ರಹ್ಮಾವರದ ಆಸುಪಾಸಿನಲ್ಲಿ ಕಾಮೇಶ್ವರ ಮತ್ತು ಕಪಿಲೇಶ್ವರ ದೇವಾಲಯಗಳೂ ವಿಜಯನಗರ ಕಾಲದ ಮತ್ತು ಕೆಳದಿನಾಯಕರ ಕಾಲದ ಒಂದೊಂದು ಅಗ್ರಹಾರವೂ ಕಂಡುಬರುತ್ತವೆ. ಇಲ್ಲಿ ಸೇಂಟ್ ಮೇರೀಸ್ ಚರ್ಚ್ ಮತ್ತು ಒಂದು ಜೂನಿಯರ್ ಕಾಲೇಜ್ ಇವೆ. ಈ ಊರಿನ ಉತ್ತರ ಮತ್ತು ಪೂರ್ವ ಭಾಗದಲ್ಲಿ ಸೀತಾನದಿ ಹರಿಯುತ್ತದೆ.