ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಾಹೂಯೀ

ವಿಕಿಸೋರ್ಸ್ದಿಂದ

ಬ್ರಾಹೂ ಹೀ :-ಉತ್ತರ ಡ್ರಾವಿಡ ಭಾಷೆ. ಪಾಕಿಸ್ತಾನ, ಬಲೂಚಿಸ್ತಾನ, ಸಿಂಧ್, ಅಫ್ಫಾನಿಸ್ತಾನ ಮತ್ತು ಇರಾನ್ ಪ್ರದೇಶಗಳಲ್ಲಿ ವಾಸವಾಗಿದ್ದು ಇದೇ ಭಾಷೆ ಮಾತಾಡುವ ಜನ ಸಮೂಹ. ಜನಸಂಖ್ಯೆ 3.65.772(1961). ಇವರ ದೈಹಿಕ ರಚನೆ ನೆರೆಹೊರೆಯವರದ್ದಕ್ಕಿಂತ ಬೇರೆಯಾಗಿದ್ದು ದಕ್ಷಿಣ ಭಾರತದ ದ್ರಾವಿಡರದ್ದನ್ನೇ ಹೋಲುತ್ತದೆ. ಮೊಹೆಂಜದಾರೊ ಸಂಸ್ಕøತಿಯೊಂದಿಗೆ ಈ ಜನ ಸಂಬಂಧ ಹೊಂದಿದ್ದರೆಂದು ಕೆಲವು ವಿದ್ವಾಂಸರ ಊಹೆ.

ಭಾಷೆ: ದ್ರಾವಿಡ ಭಾಷಾಪರಿವಾರದ ಉತ್ತರ ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆಯನ್ನು ಪ್ರಪ್ರಥಮವಾಗಿ ಗುರುತಿಸಿದವನೆಂದರೆ ಈಸ್ಟ್ ಇಂಡಿಯಾ ಕಂಪನಿಯ ಹೆನ್ರಿ ಪೊಟಿಂಗರ್ ಟ್ರಾವಲ್ಸ್ ಇನ್ ಬಲೂಚಿಸ್ತಾನ್ ಅಂಡ್ ಸಿಂಧ್ (1816). ಆರ್. ಲೀಚ್ ಈ ಭಾಷೆಯ ಮೊತ್ತಮೊದಲ ವ್ಯಾಕರಣ (1893) ಬರೆದು ಜರ್ನಲ್ ಆಫ್ ದಿ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಿದ. 1843ರಲ್ಲಿ ಚಾಲ್ರ್ಸ್ ಮೇಸóಸ್ ಈ ಭಾಷೆಯಲ್ಲಿಯ ಇರಾನಿ ಸ್ವೀಕೃತಗಳನ್ನು ಗುರುತಿಸಿದ. ಕಾಲ್ಡ್‍ವೆಲ್ ತನ್ನ ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣದ (1856) ದ್ವಿತೀಯ ಆವೃತ್ತಿ (1875) ಹಾಗೂ ತೃತೀಯ ಆವೃತ್ತಿಯಲ್ಲಿಯೂ (1913) ಈ ಭಾಷೆಯ ಬಗ್ಗೆ ಉಲ್ಲೇಖಿಸಿ ಅದು ದ್ರಾವಿಡಭಾಷಾ ವರ್ಗಕ್ಕೆ ಸೇರಿದುದು ಎಂದು ಸ್ಪಷ್ಟಪಡಿಸಿದ್ದಾನೆ. ಹೆನ್ರಿ ವಾಲ್ಟರ್ ಬೆಲ್ಯೂ ಎಂಬ ಶಸ್ತ್ರ ಚಿಕಿತ್ಸಕ 1874ರಲ್ಲಿ ಈ ಭಾಷೆಯ ಸ್ಥೂಲ ವ್ಯಾಕರಣ ಮತ್ತು ಪದಕೋಶ ಬರೆದ. 1877ರಲ್ಲಿ ಎಂ. ನಿಕೊಲ್ಸನ್ ಬರೆದ ಈ ಭಾಷೆಯ ಕೈಪಿಡಿಯನ್ನು ಬಳಸಿಕೊಂಡು ಅರ್ನೆಸ್ಟ್ ಟ್ರಂಪ್ ಎಂಬಾತ 1880ರಲ್ಲಿ ಈ ಭಾಷೆಯ ವಿವರವಾದ ವ್ಯಾಕರಣವನ್ನು ಜರ್ಮನ್ ಭಾಷೆಯಲ್ಲಿ ಬರೆದ. ಈ ಗ್ರಂಥವನ್ನು 1887ರಲ್ಲಿ ತಿಯೊಡೊರ್ ಡ್ಯೂಕಾ ಇಂಗ್ಲಿಷಿಗೆ ಅನುವಾದಮಾಡಿದ. ಬ್ರಾಹೂಹೀ ಭಾಷೆಯ ಸಂಕ್ಷಿಪ್ತ ವಿಶ್ಲೇಷಣೆ ಜಿ. ಎ. ಗ್ರಿಯರ್‍ಸನ್ ಸಂಪಾದಿಸಿದ ದಿ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ (ಸಂ. 4, 1906) ಎಂಬ ಕೃತಿಯಲ್ಲಿ ಸಿಗುತ್ತದೆ. ಡೆನಿಸ್ ಬ್ರೇ ಎಂಬಾತ 1909, 1934 ಮತ್ತು 1939ರಲ್ಲಿ ಪ್ರಕಟಿಸಿದ ಬ್ರಾಹೂಯೀ ಭಾಷೆ, ಭಾಗ 1, 2, 3 ಮತ್ತು 'ಬ್ರಾಹೂಹೀ ಕಥೆಗಳು ಮೌಲಿಕ ಕೊಡುಗೆಗಳು. ವಿ. ರಾಮಸ್ವಾಮಿ ಅಯ್ಯಂಗಾರ್, ಎಂ. ಎಚ್. ಟಟ್ಲೆ, ಟಿ. ಬರೊ, ಎಂ. ಬಿ. ಎಮೆನೋ ಮೊದಲಾದವರು ಈ ಭಾಷೆಯ ಬಗ್ಗೆ ವಿವರಣಾತ್ಮಕ ಮತ್ತು ತೌಲನಿಕ ಅಧ್ಯಯನ ನಡೆಸಿದ್ದಾರೆ.

ರಚನೆ: [ಅ ಆ ಇ ಈ ಉ ಊ ಏ ಓ]-ಇವು ಸ್ವರಗಳು. [ಒ] ಸ್ವರ ಈ ಭಾಷೆಯಲ್ಲಿಲ್ಲ. [ಎ] ಸ್ವರಾಘಾತವಿಲ್ಲದ ಪದಾದೀತರ ಧ್ವನಿಗಳಲ್ಲಿ ಮಾತ್ರ ಬರುತ್ತದೆ. ಭಾಷಾಧ್ವನಿಮಟ್ಟದಲ್ಲಿ ಇಂಡೊ ಇರಾನಿಯನ್ ಭಾಷೆಗಳ (ಮುಖ್ಯವಾಗಿ ಬಲೂಚಿ ಭಾಷೆಯ) ಪ್ರಭಾವ ಬ್ರಾಹೂಯೀಯ ಮೇಲೆ ಅಗಿದೆ.

ಪ್ರಾಕ್‍ದ್ರಾವಿಡ ರೂಪ* ಎ ಕೆಲವಡೆ |ಅ| ಎಂಬುದಾಗಿ, ಉಳಿದಡೆ |ಇ| ಎಂಬುದಾಗಿ ಪರಿವರ್ತನೆಗೊಂಡಿದೆ.

  • ಎಲಿ > ಹಲ್ 'ಇಲಿ;
  • ಪೆರ್ 'ಹಿರಿಯ > ಪಿರ್ 'ಉಬ್ಬು -ಅಂತೆಯೇ;
  • |ಒ| > |ಓ|, |ಉ| ಅಥವಾ | ಅ| ಎಂಬುದಾಗಿ ಬದಲಾವಣೆ ಹೊಂದಿದೆ.
  • ತೂಟ್ > ತೋರ್ 'ಹಿಡಿದಿಡು;
  • ಪೊತ್ | ತ್ತ್ > ಪುತುನ್ ' ಗಂಟು, ಮೂಟೆ :
  • ಕೊಲ್ > ಲ್ಲ್ 'ಕೊಲ್ಲು,

ವ್ಯಂಜನಗಳಲ್ಲಿ ಡಕಾರ ತಾಡಿತನಾಗಿಯೂ [ಢ್] ಉಚ್ಚಾರಗೊಳ್ಳುತ್ತದೆ. ಮಹಾಪ್ರಾಣಾಕ್ಷರ ಬಳಕೆ ಅಧಿಕ. ನಕಾರಕ್ಕೆ ಗಕಾರ ಪರವಾದಾಗ ಅದು ಙಕಾರವಾಗಿ ಪರಿವರ್ತನೆಗೊಳ್ಳುತ್ತದೆ. ಹ|ಕಾರ ಮೃದುವಾಗಿದೆ; ದಕ್ಷಿಣ ದ್ರಾವಿಡ ಭಾಷೆಗಳಲ್ಲಿಲ್ಲದ ಗಲೀಯ ಅಘೋಷ ಮತ್ತು ಘೋಷ ಘರ್ಷಗಳೂ ಅಘೋಷ ದಂತೌಷ್ಠ್ಯ ಘರ್ಷವಾದ ಘóಕಾರ ಧ್ವನಿಗಳೂ ಇದರಲ್ಲಿವೆ. ಬಲೂಚಿ ಭಾಷೆಯ ಪ್ರಭಾವದಿಂದ ಸಚೇತನ, ಅಚೇತನ ಲಿಂಗವ್ಯವಸ್ಥೆಯ ಸ್ಪಷ್ಟತೆಯನ್ನು ಬ್ರಾಹೂಯೀ ಭಾಷೆ ಕಳೆದುಕೊಂಡಿದೆ. ಲಿಂಗಭೇದ ತೋರಿಸಲು {ಸರ್} (ಮನುಷ್ಯ) ಮತ್ತು {ಮಾದಹ್} (ತಾಯಿ) ಎಂಬ ಪರ್ಶಿಯನ್ ಪದಗಳನ್ನು ಆದಿಪ್ರತ್ಯಯಗಳಾಗಿ ಬಳಸಲಾಗುತ್ತದೆ. ವಚನದಲ್ಲಿ ಏಕವಚನ ಮತ್ತು ಬಹುವಚನ ಎಂಬ ಎರಡು ರೂಪಗಳಿವೆ. ಬಹುವಚನ ಪ್ರತ್ಯಯ ಕೆಲವೊಂದು ಪರಿಸರಗಳಲ್ಲಿ ಐಚ್ಛಿಕ. ಬಹುವಚನ ಪ್ರತ್ಯಯ {-ಆಕ್}, |~ಕ್, ~ಆಕ್| ದೀರ್ಘಸ್ವರಗಳು ಅಥವಾ ನ, ತ ರ ಕಾರಾಂತ್ಯ ನಾಮಪ್ರಕೃತಿಗಳಿಗೆ ಬಹುವಚನ ಪ್ರತ್ಯಯ |ಕ್|; ಉಳಿದಡೆ |~ಆಕ್|. ರಕಾರದ ಹಿಂದೆ ಧೀರ್ಘ ಸ್ವರವಿದ್ದಾಗ ಅದಕ್ಕೆ |~ಕ್| ಪರವಾದಾಗ ರಕಾರಕ್ಕೆ ಲೋಪ; |~ಕ್| ವಿನ ಪೂರ್ವದ ತಕಾರಕ್ಕೂ ಲೋಪ; | ಆಫ್-ಆಕ್| 'ಕಿವಿಗಳು |ದೂ-ಕ್| ಕೈ-ಗಳು |ಅನ್-ಕ್| 'ಕಣ್ಣು-ಗಳು. |ಮಾರ್-ಕ್| > ಮಾಕ್ ಪುತ್ರ-ರು| ನತ್-ಕ್| > ನಕ್ ' ಪಾದ-ಗಳು.

ವಿಭಕ್ತಿ ರೂಪಗಳಲ್ಲಿ-ದ್ವಿತೀಯ / ಚತುರ್ಥೀ-ಎ; ತೃತೀಯ-ಅಟ್; ಪಂಚಮಿ-ಅನ್; ಷಷ್ಠಿ-ನಾ, (ಆ, ಬ, ವ, ದಲ್ಲಿ); ಸಪ್ತಮಿ-ಆಎ| ಟೀ. ತೃತೀಯ, ಪಂಚಮಿ ಮತ್ತು ಸಪ್ತಮಿ ವಿಭಕ್ತಿ ಪ್ರತ್ಯಯಗಳ ಹಿಂದೆ ಎ ಇ ಸ್ವರ ಸಾಮಾನ್ಯ. |-ಅಎ| ದಿಕ್ವಾಚಿ, ನಾಮಗುಣ ವಾಚಕಗಳು ಅವ್ಯಯಗಳಾಗಿವೆ. ಅವು ನಾಮಪದದ ಪೂರ್ವಸ್ಥಾನದಲ್ಲಿರುತ್ತವೆ. ನಾಮಗುಣವಾಚಕ ಪ್ರತ್ಯಯ: |ಅನ್ಗಾ | ~ | ಅಅ |. ಉದಾ: |ಪೀರನ್ಗಾ| 'ಮುದಿ< |ಪೀರ್| 'ಮುದುಕ |ಬೀಮಾರಅ| 'ರೋಗಿಷ್ಟ. ಸಂಖ್ಯಾ ವಾಚಗಳಲ್ಲಿ ಆರಂಭದ ಮೂರು ಮೂಲಾಂಶಗಳು ದ್ರಾವಿಡ. ಉಳಿದವು ಆರ್ಯ ಭಾಷವರ್ಗಕ್ಕೆ ಸೇರಿದವು: {ಅಸಿಟ್} ಒಂದು, {ಇರಟ್} ಎರಡು, {ಮುಸಿಟ್} ಮೂರು. ಕ್ರಮಾಂಕ ಪ್ರತ್ಯಯ |ಮಿಕೋ|~|ವೀಕೋ| ಉದಾಹರಣೆಗೆ ಇರಟ್-ಮಿಕೋ ಎರಡನೆಯ; |ಮುಸಿಟ್‍ಮಿಕೋ| ~ಮುಸ್‍ವಿಕೋ 'ಮೂರನೆಯ ಇತ್ಯಾದಿ. ಸರ್ವನಾಮಗಳು: ಈ (ನಾನು), ಸನ್ (ನಾವು); ನೀ (ನೀನು); 'ನುಮ್ (ನೀವು) ಓಫ್ó್ಕ (ಅವರು); ಆತ್ಮಾರ್ಥಕ: ತೇನ್ (ಅಟ್); ಪ್ರಶ್ನಾರ್ಥಕ: ದೇರ್ (ಯಾರು?); ದರ್ಶಕ: ಓ|ಓದ್ (ಅದು). ಕ್ರಿಯಾಪದಗಳಲ್ಲಿ ಮೂಲ ಕ್ರಿಯಾಪ್ರಕೃತಿಯನ್ನು ಸರಳ ಕ್ರಿಯಾಪ್ರಕೃತಿಯೆಂದೂ ಅದರ ಜೊತೆ ಇತರ ಪ್ರತ್ಯಯಗಳನ್ನು (ಕರ್ಮಣಿ, ನಪುಂಸಕ) ಸೇರಿಸಿದಾಗ ಸಾಧಿತವಾಗುವ ಪ್ರಕೃತಿಯನ್ನು ಸಾಧಿತ ಪ್ರಕೃತಿಯೆಂದೂ ವರ್ಗೀಕರಿಸಲಾಗಿದೆ. ಸರಳಕ್ರಿಯಾಪ್ರಕೃತಿ-ಹಡ್ಸ್ (ತಿರಗು); ಸಾಧಿತ ಕ್ರಿಯಾಪ್ರಕೃತಿ-ಹಡ್ಸಿಂಗ್(ತಿರುಗಿಸು); ಸತಿಸಪ್ತಮಿ-ಕ್ರಿಯಾಪ್ರಕೃತಿ+|-ಇಂಗ್|; ವರ್ತಮಾನ-ಕ್ರಿಯಾಪ್ರಕೃತಿ +|-ಇಸ|; ಸಂಭಾವನಾಭವಿಷ್ಯತ್ -ಕ್ರಿಯಾಪ್ರಕೃತಿ + |-ಓ| + ಪರುಷವಾಚಕ ಪ್ರತ್ಯಯ; ವಿಧಿರೂಪ-ಮಧ್ಯಮಪುರುಷ ಏಕವಚನದಲ್ಲಿ ಮೂರು ಉಪವರ್ಗಗಳು. ಅವು: ಕ್ರಿಯಾಪ್ರಕೃತಿ; ಕ್ರಿಯಾಪ್ರಕೃತಿ |-ಅ|; ಕ್ರಿಯಾಪ್ರಕೃತಿ + |-ಎ|. ಸಂಭಾವನವರ್ತಮಾನ ಕ್ರಿಯಾಪ್ರಕೃತಿ + |-ಇ|; ಕ್ರಿಯಾಪ್ರಕೃತಿ + |-ಏ|; (ಪುರುಷವಾಚಕ ಪ್ರತ್ಯಯ); ಭೂತಕ್ರಿಯಾಪ್ರಕೃತಿ : ಕ್ರಿಯಾಪ್ರಕೃತಿ + |-ಆ| -; ಕ್ರಿಯಾಪ್ರಕೃತಿ + |-ಏ|; ಕ್ರಿಯಾಪ್ರಕೃತಿ + | ಕ್ ~ ಗ್|; ಕ್ರಿಯಾಪ್ರಕೃತಿ + |ಸ್ಸ್~ಸ್~ಇಸ್|-; ನಿಷೇಧಕ್ರಿಯಾಪ್ರಕೃತಿ-ವಿಧಿರೂಪದ (ಆ) ಮತ್ತು (ಇ) ವರ್ಗದಪ್ರಕೃತಿ +|-ಇ|-; ಉಳಿದ ಕ್ರಿಯಾಪ್ರಕೃತಿ +|ಪ್|-ವರ್ತಮಾನಭವಿಷ್ಯತ್ ಮತು ನಿಷೇಧಾರ್ಥಕಳಲ್ಲಿ; |ತ್|-ಭೂತಕಾಲಗಳಲ್ಲಿ ನಿಷೇಧ ಪ್ರತ್ಯಯ |-ಅ|- (ಅಥವಾ ಅದರ ಉಪಾಕೃತಿಗಳು) ನಿಷೇಧ ಕ್ರಿಯಾ ಪ್ರಕೃತಿಯ ಉಪವರ್ಗಗಳು. ಕ್ರಿಯಾಪ್ರಕೃತಿ-: ಕ್ರಿಯಾಪ್ರಕೃತಿ- |ಇ| + (-ಪ್, -ತ್) + (-ಅ).

ಸಾಹಿತ್ಯ: ಬ್ರಾಹೂಯೀ ಜನಪದ ಸಾಹಿತ್ಯದಲ್ಲಿ ಹಾಡುಗಳೇ ಪ್ರಧಾನ. ಮಕ್ಕಳ ಹಾಡುಗಳು ಜೋಗುಳ ಹಾಡುಗಳು ಮತ್ತು ಸಂಸ್ಕಾರ ಹಾಡುಗಳೆಂದು ಮೂರು ಬಗೆಗಳಿವೆ. ಮೊದಲನೆಯದು ಶಿಶುಜನನ ಸಂದರ್ಭದಲ್ಲಿ ಶಿಶುವಿಗೂ ಹೆತ್ತವರಿಗೂ ಶುಭಾಶಯಗಳನ್ನು ಕೋರಿ ಹಾಡುವ ಹಾಡುಗಳು. ಅವು ಆನಂದಲಹರಿಯಿಂದ ತುಂಬಿ ತುಳುಕಾಡುತ್ತವೆ. ಎರಡನೆಯದು ಅಳುತ್ತಿರುವ ಮಗುವನ್ನು ಮಲಗಿಸಲು, ಸಮಾಧಾನ ಪಡಿಸಲು ಹಾಡುವ ಹಾಡುಗಳು. ಉದಾಹರಣೆಗೆ

ಜೋ ಜೋ ಜೋ ಜೋ ಚಂದ್ರಮುಖಿ ಜೋ ಈಶ ನಿನ್ನನ್ನು ಹರಸಲಿ ಆತ ನನ್ನನ್ನೂ ಹರಸಲಿ ಜೋ ಜೋ ಜೋ ಚಂದ್ರಮುಖಿ ಜೋ ಜೋ ಜೋ ಮೂರನೆಯದು ಮುಂಜಿ, ಮದುವೆ, ಅಂತ್ಯ ಸಂಸ್ಕಾರಗಳ ಸಂದರ್ಭಗಳಲ್ಲಿ ಹಾಡುವಂಥವು.

ಬ್ರಾಹೂಯೀ ಕವಿಗಳಲ್ಲಿ ರೆಕಿ ಮತ್ತು ತಾಜ್ ಮಹಮ್ಮದ್ ಬೆಂಗಲಾó್ಸಯ್ (ತಾಜಿಲ 1250-1364) ಹೆಚ್ಚು ಪ್ರಸಿದ್ಧಿಯನ್ನು ಗಳಿಸಿದವರು. ಇವರ ಕೃತಿಗಳ ಪ್ರಧಾನ ಅಂಶ ಗೇಯತೆ. ಆಧುನಿಕ ಸಾಹಿತಿಗಳಲ್ಲಿ ಅಘುಸುಲ್ತಾನ್ ಇಬ್ರಾಹಿಮ್, ಮಲಿಕ್ ಮಹಮ್ಮದ್ ಮನಹ್, ನದಿರ್ ಕಂಬರಾನಿ, ಅಬ್ದುಲ್ ರೆಹಮಾನ್ ಕೂರ್ದ್, ತುರಾಬ್ ಲರ್ಕಾನ್ವಿ, ಗುಲಾಮ್ ಮಹಮ್ಮದ್ ಶೆವಾನಿ ಮೊದಲಾದವರು ಜನಪ್ರಿಯರಾಗಿದ್ದಾರೆ. (ಡಬ್ಲ್ಯೂ.ಎಂ.)