ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತೀಯ ನೀತಿಶಾಸ್ತ್ರ

ವಿಕಿಸೋರ್ಸ್ದಿಂದ

ಭಾರತೀಯ ನೀತಿಶಾಸ್ತ್ರ

ಭಾರತೀಯರು ತಮ್ಮ ವೈಯಕ್ತಿಕ ಉತ್ಕರ್ಷೆ ಸಾಮಾಜಿಕ ಭದ್ರತೆ ಮತ್ತು ಆಧ್ಯಾತ್ಮಿಕ ಔನ್ನತ ಸಾಧಿಸಲು ತತ್ತ್ವಶಾಸ್ತ್ರ. ಧರ್ಮಶಾಸ್ತ್ರ ಮತ್ತು ಶ್ರುತಿ ಸ್ಮøತಿಗಳ ಆಧಾರಮೇಲೆ ರೂಪಿಸಸಿರುವ ನೀತಿಸಂಹಿತೆ. ಭಾರತದಲ್ಲಿ ಸ್ವತಂತ್ರವಾಗಿ ಅನೇಕ ತತ್ತ್ವದರ್ಶನಗಳ ಪ್ರಸ್ಥಾನಗಳಿವೆ. ಆದರೆ ನೀತಿಶಾಸ್ತ್ರ. ಮಾತ್ರ ಒಂದು ಸ್ವತಂತ್ರ ಪ್ರಕಾರವಾಗಿ ಬೆಳೆದುಬಂದಿಲ್ಲ. ಇದು ಆನುಷಂಗಿಕವಾಗಿ ತತ್ತ್ವಶಾಸ್ತ್ರ, ಧರ್ಮಶಾಸ್ತ್ರ ಮತ್ತು ಶ್ರುತಿ ಸ್ಮøತಿಗಳ ಪರಿಧಿಯಲ್ಲಿಯೇ ಪ್ರಕಟಗೊಂಡಿದೆ. ಆದ್ದರಿಂದ ನೀತಿಶಾಸ್ತ್ರ ಅಧ್ಯಾಯನ ಮಾಡುವ ಮೊದಲು ತತ್ತ್ವಶಾಸ್ತ್ರ ಧರ್ಮಶಾಸ್ತ್ರಗಳ ಚಿಂತನೆಯಲ್ಲಿ ಅಡಗಿರುವ ನೀತಿ ವಿಚಾರಗಳನ್ನು ಪ್ರತ್ಯೇಕಿಸಬೇಕು. ತತ್ತ್ವದರ್ಶನ ಬೇರೆಯಾದಂತೆ ನೀತಿಶಾಸ್ತ್ರ ವಿಚಾರವೂ ಅಷ್ಟಿಷ್ಟು ಬೇರೆಯಾಗಬಹುದು, ಆದರೂ ಮೂಲಭೂತ ವಿವೇಚನೆ ಎಲ್ಲ ದರ್ಶನಗಳಿಗೂ ಸಮಾನವಿರುವುದನ್ನು ಕಾಣಬಹುದು.

ನೀತಿಶಾಸ್ತ್ರದ ಉದಯಕ್ಕೆ ವ್ಯಕ್ತಿಯ ಇಚ್ಛಾಸ್ವಾತಂತ್ರ್ಯದ ಸ್ವೀಕಾರವೇ ಕಾರಣವೆಂದು ತತ್ತ್ವಜ್ಞಾನಿಗಳು ಭಾವಿಸುತ್ತಾರೆ. `ನೀನಿದನ್ನು ಮಾಡಲು ಮನದಂದವ; ಆದ್ದರಿಂದ ಮಾಡಲೇಬೇಕು` ಎಂಬುದು ಇಮ್ಯಾನ್ಮ್ಯಯಲ್ ಕ್ಯಾಂಟನ ವಾದ ಸರಣಿ, ಜಗತ್ತು ಮಿಥ್ಯೆ, ಜೀವವೇ ಬ್ರಹ್ಮ ಎಂಬ ಅದ್ವೈತವೇದಾಂತದ ದೃಷ್ಟಿಕೋನದಲ್ಲಿ ವ್ಯಾವಹಾರಿಕವಾದ ಇಚ್ಛಾಸ್ವಾತಂತ್ರ್ಯವಿರಬಹುದೇ ವಿನಾಪಾರಮಾರ್ಥಿಕವಾಗಿ ಕಾರ್ಯಪ್ರೇರಕವಾದ ಇಚ್ಛೆಗೆ ಸ್ಥಾನವೇ ಇಲ್ಲವೆಂದು ಪಾಶ್ಚಾತ್ಯರು ವಾದಿಸುತ್ತಾರೆ. ಅಲ್ಲದೆ ಕರ್ಮವಾದ ಒಪ್ಪಿದವರಿಗೆ ವ್ಯಕ್ತಿಯ ಕ್ರಿಯಾಸ್ವಾತಂತ್ರ್ಯ ಗಗನ ಕುಸುಮದಂತೆ ಅಸಂಭವ ಎಂದೂ ಆರೋಪಿಸಲಾಗುತ್ತದೆ. ಯಾವುದೋ ಜನ್ಮಾಂತರದಲ್ಲಿ ಗೈದ ಪ್ರಾರಬ್ದಕರ್ಮ ಒಬ್ಬನ ಇಂದಿನ ಕ್ರಿಯೆಗೆ ಕಾರಣ ಎನ್ನುವುದಾದರೆ ಇಂದು ಹಾವ ಕಾರ್ಯಕ್ಕಾಗಲಿ ಆತನಿಗೆ ಸ್ವಾತಂತ್ರ್ಯ ಎಲ್ಲಿದೆ ಎಂದು ಕೇಳಲಾಗುತ್ತದೆ. ಇದು ಯುಕ್ತ, ಇದು ಅಯುಕ್ತ ಎಂದು ನಿರ್ಣಯಿಸುವಲ್ಲಿ ವ್ಯಕ್ತಿಯ ಪ್ರಾಚೀನಕರ್ಮವೇ ಆತನ ಬುದ್ದಿಯನ್ನು ಮುಂಕಾಗಿಸಬಾರದೇಕೆ? ಅಥವಾ ಜೀವನ ಸಕಲ ಕರ್ಮಗಳಿಗೂ ಪರಮನಿಯಾಮಕ ಎಂದರೆ ಭಗವಂತನೇ ಎಂಬ ಧಾರ್ಮಿಕ ದೃಷ್ಟಿಯಲ್ಲಿ, ಕಾರ್ಯಾಕಾರ್ಯವಿವೇಚನೆಯ ವಿಷಯದಲ್ಲಿ ಜೀವನಿಗೆ ಪೂರ್ಣ ಸ್ವಾತಂತ್ರ್ಯ ಸಾಧ್ಯವಿಲ್ಲದೆ ಹೋಗುತ್ತದೆ. ಹೀಗೆ ಆಧುನಿಕ ವಿಚಾರವಾದಿಗಳು ಭಾರತೀಯರು ವೇದಾಂತ ಗರ್ಭ ನೀತಿ ಶಾಸ್ತ್ರವನ್ನು ನಾನಾ ಬಗೆಯಾಗಿ ಆಕ್ಷೇಪಿಸಬಹುದು.

ಆದರೆ ಭಾರತೀಯ ಧರ್ಮಗಳ ಹಾಗೂ ವಿಚಾರಗಳ ಇತಿಹಾಸ ಓದಿದವರಿಗೆ ಎದ್ದು ಕಾಣುವ ಒಂದು ಮುಖ್ಯ ಅಂಶವಿದೆ; ನೀತಿ ಧರ್ಮದ ಅವಿಭಾಜ್ಯ ಅಂಗವಲ್ಲ ಕಾಣುವ ಒಂದು ಮುಖ್ಯ ಅಂಶವಿದೆ; ನೀತಿ ಧರ್ಮದ ಅವಿಭ್ಯಾಜ್ಯ ಅಂಗವಲ್ಲ ಎನ್ನುವವರು ಕೂಡ ಜಗತ್ತಿನ ನಿರ್ವಹಣೆಗೆ ಆಕಸ್ಮಿಕ ಸ್ವಭಾವವೇ ಕಾರಣದಿಂದ ಭೌತಿಕ ವಾದಗಳನ್ನು ಏಕಕಂಠದಿಂದ ನಿರಾಕರಿಸುತ್ತಾರೆ. ಬೌದ್ದದಾರ್ಶನಿಕರು ಚಾರ್ವಾಕರ ಸುಖಲೋಲುಪತೆಯ ಹಾಗೂ ನೀತಿ ಅನೀತಿಗಳನ್ನು ವಿಭಜಿಸುವ ನಿಯಾಮಕ ಸೂತ್ರವಿಲ್ಲ ಮುಂತಾದ ಸ್ವೇಚ್ವಾವಾದಗಳನ್ನೂ ಸ್ಪಷ್ಟವಾಗಿ ಖಂಡಿಸುತ್ತಾರೆ. ಇವರು ಆತ್ಮವಾದಿ ವೇದಾಂತಿಗಳಲ್ಲ; ದೇವರುಂಟೆನ್ನುವ ಆಸ್ತಿಕರೂ ಅಲ್ಲ. ಮೇಲ್ನೋಟಕ್ಕೆ ವೇದಾಂತ ಜ್ಞಾನಪರವೆನಿಸಿದರೂ ಅದು ಉಪದೇಶಿಸುವ ಜ್ಞಾನ ಸದಾಚಾರಶೀಲನನ್ನಷ್ಟೇ ಉದ್ದೇಶಿಸಿರುವುದು ಭಗವದ್ಗೀತೆಯಲ್ಲಿ ಸ್ಪಷ್ಟವಾಗುತ್ತದೆ ಶಮದಮಾದಿ ಸದಾಚಾರ ಸಂಪನ್ನತೆ ವೇದಾಂತವಿಚಾರಕ್ಕೆ ಅತ್ಯವಶ್ಯವಾದ ಯೋಗ್ಯತೆಯನ್ನು ಒದಗಿಸುತ್ತದೆ. ನೀತಿಯನ್ನೇ ಧರ್ಮ ಎಂದು ಹೆಸರಿಸುವ ಗ್ರಂಥಗಳು ಎಲ್ಲ ಜನರಿಗೂ ಸಾಮಾನ್ಯವಾಗಿ ಅನ್ವಯಿಸುವ ಸಾಧಾರಣಧರ್ಮಗಳನ್ನು ಹೇಳಿರುವಂತೆ ವಿಶಿಷ್ಟ ವರ್ಣ ಅಥವಾ ಜಾತಿಯವರ ಮತ್ತು ಅವರ ವಿಭಿನ್ನ ಅವಸ್ಥೆ ಅಥವಾ ಆಶ್ರಮಗಳಿಗೆ ಅನ್ವಯಿಸುವ ವಿಶೇಷ ಧರ್ಮಗಳನ್ನು ಹೇಳಿವೆ. ಆಕಸ್ಮಿಕ ಸನ್ನಿವೇಶಗಳಿಗೆ ಅನ್ವಯಿಸುವ ಆಪದ್ದರ್ಮಗಳನ್ನೂ ಹೇಳಿವೆ. ಎಲ್ಲ ಜನರಿಗೂ ಒಂದೇ ನೀತಿ ಸಂಹಿತೆ ಅನ್ವಯಿಸಬೇಕೆನ್ನುವವರು ಮೊದಲು ವೈಧಿಕ ವರ್ಣಾಶ್ರಮ ವ್ಯವಸ್ಥೆಯನ್ನೇ ಖಂಡಿಸುವ ಪ್ರಸಂಗಬರುತ್ತದೆ. ಹೇಗೆಯೇ ಇರಲಿ, ವೇದಸಂಹಿತೆಗಳ ಕಾಲದಿಂದ ದರ್ಶನಗಳ ಮತ್ತು ಸ್ಮøತಿಗಳ ಕಾಲದತನಕವೂ ಸರ್ವಮಾನ್ಯವಾಗಬಲ್ಲ ಕೆಲವೊಂದು ನೀತಿಚಿಂತನೆ ದೊರೆಯುತ್ತಿರುವುದೇ ಒಂದು ಸೋಜಿಗವೆಂಬಂತಿದೆ. ಅವರವರ ಮತಶ್ರದ್ದೆಗಳಿಗನುಣವಾಗಿ ಅಷ್ಟಿಷ್ಟು ವ್ಯತ್ಯಾಸಗಳು ಮೂಡಿ ಬಂದರೂ ಮೂಲಭೂತ ನೀತಿಶಾಸ್ತ್ರ ಸರಣಿಗೆ ಅಪೋಹ ಬಂದಿಲ್ಲ, ವೇದಕಾಲ: ಧರ್ಮಕ್ಕೆ ಮೂಲ ಯಾವುದೆನ್ನುವುದಕ್ಕೆ ಸ್ಮøತಿ, ಸದಾಚಾರ, ಆತ್ಮಸುತಿ ಮುಂತಾಗಿ ಅನೇಕವನ್ನು ಹೇಳಿದರೂ ಎಲ್ಲಕ್ಕೂ ಮೊದಲು ವೇದವೇ ಧರ್ಮದ ಮೂಲವೆಂದು ಭಾರತೀಯ ಸ್ಮ್ರತಿ ಇತಿಹಾಸ ಪುರಾಣಗಳೆಲ್ಲ ಏಕಕಂಠದಿಂದ ಒಪ್ಪುತ್ತವೆ. ವೇದವನ್ನೊಪ್ಪದವರು ಸದಾಚಾರಸಂಪನ್ನರಿದ್ದರೂ ಅವರು ನಾಸ್ತಿಕರೆನಿಸುವರು.

ಋಗ್ವೇದ, ಯಜುರ್ವೀದ ಸಾಮವೇದ ಮೂರರಲ್ಲೂ ವಿಶ್ವನಿಯಾಮಕವಾದ ನೀತಿತತ್ತ್ವವೊಂದಿದೆ. ಅದಕ್ಕೆ ಋತು ಎಂದು ಹೆಸರು. ಅದರ ಇನ್ನೊಂದು ಪಾಶ್ರ್ವವೇ ಸತ್ಯ. ಋತು ಸತ್ಯಗಳ ನಿಷ್ಠೆಯೇ ವ್ರತ. ದೇವತೆಗಳೂ ಇದನ್ನು ಆಚರಿಸುತ್ತಾರೆ. ತಪಸ್ಯ ಸತ್ಯಗಳ ನಿಷ್ಟೆಯೇ ವ್ರತ. ದೇವತೆಗಳೂ ಇದನ್ನು ಆಚರಿಸುತ್ತಾರೆ. ತಪಸ್ಯೆ ಎಂಬುದು ಅದರ ಇನ್ನೊಂದು ಹೆಸರು. ನಿಯಮೋಪಾಸನೆಯೇ ತಪಸ್ಯೆ ಈ ಋತಸತ್ಯ, ವ್ರತನಿಷ್ಠೆ ಅಥವಾ ನಿಯತತ್ವವೇ ಮುಂದೆ ಕರ್ಮವೆನಿಸಿ ಬೆಳೆಯುತ್ತದೆ. ದೈವಿಕವಾದ ವಿಶ್ವ ನಿಯಮಕ್ಕೆ ವಿರುದ್ದವಾದ ವರ್ತನೆ ಪಾಪಕರ. ಇದಕ್ಕೆ ಹೇಗಾದರೂ ಪರಿಹಾರವೊದಗುವಂತೆ ದೇವತೆಗಳಿಗೆ ಶರಣಾಗುವುದೂ ವೇದ ಸೂಕ್ತಗಳಲ್ಲಿ ಕಾಣಬರುತ್ತದೆ. ಮಿತ್ರಾವರುಣರ ಕಣ್ಣಿಗೆ ಕಾಣದ ಯಾವ ಗುಟ್ಟಿನ ಮೋಸವಂಚನೆಗಳೂ ಶಕ್ಯವಿಲ್ಲವೆಂಬ ಭಾವನೆಯಿತ್ತು. ಪ್ರಾರ್ಥನೆಯಿಂದ ಅವರು ದೇವತೆಗಳ ಕ್ಷಮೆ ಪಡೆಯಬೇಕಾಗಿತ್ತು. ಹಾಗೆಯೇ ಸದ್ವರ್ತನೆಯಿಂದ ದೇವತೆಗಳ ಸ್ನೇಹ ಪ್ರಾಪ್ತಿಯಾಗುವುದೆಂಬ ನಂಬಿಕೆಯೂ ಇತ್ತು. ಪಾಪವೆಂಬುದು ನೈತಿಕ ದೋಷಮಾತ್ರವೇ ಅಲ್ಲದೆ ಶಾರೀರಿಕ ದೋಷದಷ್ಟೆ ಪ್ರಬಲ ಹಾಗೂ ಮೂರ್ತ ಎಂಬ ಭಾವನೆ ವೇದಕಾಲದ ವೈಶಿಷ್ಟ್ಯ.

ಬ್ರಾಹ್ಮಣ ಗ್ರಂಥಗಳಲ್ಲಿ ಈ ವಿಚಾರ ಇನ್ನಷ್ಟು ವಿಕಸಿತವಾಗಿದೆ. ಧಾರ್ಮಿಕ ಜೀವನವೇ ಹಾಸುಹೊಕ್ಕಾಗಿದ್ದ ಆ ಯುಗದಲ್ಲಿ ಶ್ರದ್ದೆ ಭಕ್ತಿಗಳಿಗೆ ಪ್ರಥಮ ಪ್ರಾಶಸ್ತ್ಯವಿದ್ದುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಶುದ್ದಿ. ಪಾವಿತ್ರ್ಯಗಳಿಗೆ ಎಲ್ಲಿಲ್ಲದ ಮಹತ್ತ್ವ ಬರುತ್ತದೆ. ಆಧ್ಯಾತ್ಮಿಕ ಸಾಧನೆಗೂ ಅದೇ ಮೊದಲ ಸಾಧನವೆನ್ನಲಾಗುತ್ತಿತ್ತು. ಆದರೆ ವಿಶೇಷವಾದ ಒಂದು ಪ್ರಗತಿಯೆಂದರೆ ಯಜ್ಞಾದಿ ಕರ್ಮಗಳಿಗೂ ಅವುಗಳ ಮೂಲಕ ಉಂಟಾಗುವ ಸ್ವರ್ಗಾದಿ ಫಲಗಳಿಗೂ ನಿಶ್ಚಿತ ಸಂಬಬಂಧವುಂಟೆಂಬ ಕಲ್ಪನೆ. ಮಂತ್ರೋಚ್ಚಚಾರಣೆ ಹಾಗೂ ಯಜ್ಞಕ್ರಿಯೆಗಳಲ್ಲಿ ಯಾಂತ್ರಿಕ ಕರ್ಮಕ್ಕಿಂತ ಹೆಚ್ಚಾಗಿ ಫಲವಿಷಯಕವಾದ ಶ್ರದ್ದೆಗೂ ಎಡೆ ದೊರೆಯಿತು. ಹೀಗೆ ಧಾರ್ಮಿಕ ಆಚರಣೆಯ ವಲಯದಲ್ಲಿ ಕೂಡ ಬಾಹ್ಯಚಾರಕ್ಕಿಂತ ಅಂತಃಕರಣದ ಶುದ್ದಿ ಮತ್ತು ಸದ್ಭಾವನೆಗಳಿಗೆ ಸ್ಥಾನವಿರುವುದು ನೀತಿತತ್ತ್ವದ ಪುರಸ್ಕಾರಕ್ಕೆ ಪ್ರಯೋಜಕ ಎನ್ನಬಹುದು.

ಭಾರತೀಯ ಆಧ್ಯಾತಿಕ ಚಿಂತನೆಯಲ್ಲಿ ಉಪನಿಷತ್ತುಗಳಿಗೆ ಉನ್ನತ ಸ್ಥಾನವಿದೆ. ಉಪನಿಷತ್ಕಾಲದಲ್ಲಿ ಜನ್ಮಾಂತರಗಳ ಚಕ್ರದಲ್ಲಿ ಜೀವನವನ್ನು ಸ್ತುತಿಸುವ ಕರ್ಮವಾದ ಪ್ರಬಲವಾಗುತ್ತದೆ. ಸ್ವಲ್ಪ ಹೆಚ್ಚು ಕಡಿಮೆ ಅದೇ ಕಾಲದಲ್ಲಿ ಜನಿಸಿದ ಬೌದ್ಧ ಜೈನ ಧರ್ಮಗಳಲ್ಲೂ ಈ ಕರ್ಮಸಂಸಾರಗಳ ವಿಚಾರ ಧಾರೆ ಏಕರೀತಿಯಾಗಿರುವುದನ್ನು ನೋಡಬಹುದು.

ಜೈನ ಬೌದ್ಧ ಧರ್ಮಗಳಲ್ಲಿರಲಿ, ಕೆಲವು ಉಪನಿಷತ್ತುಗಳಲ್ಲಿ ಕೂಡ ಹಿಂದಿನ ವೈದಿಕ ದೇವತೆಗಳ ಪ್ರಾಬಲ್ಯ ಅದೃಶ್ಯವಾಗುತ್ತದೆ. ಅವರಿಗೆ ಸಲ್ಲುವ ಸ್ಥಾನ ಸರ್ವೇಸಾಧಾರಣ ಎಂಬ ರೀತಿಯದು. ಭಾರತೀಯರ ಸಂಹಿತೆ ದೇವತೆಗಳ ಭಯಕಾರಣದಿಂದ ಹುಟ್ಟಿದ್ದಾಗಿದ್ದರೆ ಈ ದೇವತಾಪ್ರಾಬಲ್ಯ ಕುಗ್ಗಿದ ಯುಗದಲ್ಲಿ ನೀತಿ ನಿಷ್ಠೆಯ ಮಹತ್ತ್ವಕ್ಕೆ ಕುಂದು ಬರಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಈ ಎಲ್ಲ ಆಧ್ಯಾತ್ಮಿಕ ಪಂಥಗಳಲ್ಲೂ ಮೊದಲಿಗಿಂತ ಹೆಚ್ಚಿನ ಶಮದವಾದಿ ಸಂಯಮ ಸಂಹಿತೆಗೆ ಅಗ್ರಸ್ಥಾನ ಲಭಿಸುತ್ತದೆ. ವೈರಾಗ್ಯ ಸಂನ್ಯಾಸಗಳಿಗೆ ಆಧಿಕತರ ಪ್ರಾಶಸ್ತ್ಯ ಬರುತ್ತದೆ. ಎಲ್ಲ ಬಗೆಯ ಆಸೆ ಕಾಮನೆಗಳನ್ನು ಕಟುವಾಗಿ ನಿಗ್ರಹಿಸಬೇಕೆನ್ನಲಾಗುತ್ತದೆ. ದೇವರ ಭಯವಿಲ್ಲದಾಗ ಸದಾಚಾರಕ್ಕೆ ಆಧಾರವೇ ಸಡಿಲವಾಗಿ ಅನೀತಿ ಹೆಚ್ಚುತ್ತದೆ ಎಂಬ ಆಧುನಿಕ ತಜ್ಞರ ವಾದಸರಣಿಗೆ ಭಾರತದ ಈ ಮನೋವೃತ್ತಿಗೆ ಒಂದು ಅಪವಾದದಂತಿದೆ. ದೇವತಾಭಕ್ತಿಯ ಸ್ಥಾನದಲ್ಲಿ ಆಧ್ಯಾತಿಕ ಸಾಧಗೆಗೆ ಅವಕಾಶ ಕಲ್ಪಿಸಿದ ವೈಶಿಷ್ಟ್ಯ ಭಾರತಿಯರು ಸಂಸ್ಸøತಿಯದು, ಪುಣ್ಯಕರ್ಮಗಳಿಂದ ಸುಖಮಯವಾದ ಸ್ವರ್ಗಪ್ರಾಪ್ತಿಯಾಗುವುದೆಂದು ಹಿಂದಿನವರು ತಿಳಿಯುತ್ತಿದ್ದರು ಆದರೆ ಹೊಸ ವಿಚಾರಧಾರೆಯಂತೆ ಆ ಸ್ವರ್ಗವನ್ನು ಬಯಸದೆಯೇ ಕೇವಲ ಆಧ್ಯಾತ್ಮಿಕ ಸಾಧನೆಯಿಂದ ಸ್ವರ್ಗಕ್ಕೂ ಹೆಚ್ಚಿನ ಆತ್ಮಾನಂದವನ್ನು ಅಥವಾ ಶಾಶ್ವತ ಮೋಕ್ಷವನ್ನು ಪಡೆಯಲು ಮಾನವರಿಗೆ ಶಕ್ಯ ಎಂಬ ಭಾವನೆ ಬೇರೊರಿತು. ಸಂಸಾರದ ದುಃಖ ದಾಟುವುದೇ ಸ್ವರ್ಗಸುಖಕ್ಕಿಂತ ಹೆಚ್ಚಿನ ಗುರಿ ಎಂಬಂತಾಯಿತು. ವಿಷಯಸುಖಗಳೆಲ್ಲ ಕ್ಷಣಿಕ; ಅವು ಶಾಶ್ವತವಲ್ಲ. ಶಾಶ್ವತವಾದ ಆನಂದಲಾಭವೊಂದೇ ನಿಜವಾದ ಪುರುಷಾರ್ಥ. ಅದನ್ನು ಪಡೆಯಲು ಕ್ಷಣಿಕಸುಖವೆಲ್ಲ ಹೇಯ. ವೈರಾಗ್ಯವೇ ಅಭಯ. ಪ್ರಪಂಚದ ಕರ್ತವ್ಯದಿಂದ ವಿಮುಖರಾದವರು ಪಲಾಯನ ಮಾಡುವ ಮನೋವೃತ್ತಿ ಎಂದು ಇದನ್ನು ಪಾಶ್ವಾತ್ಯರು ಟೀಕಿಸುತ್ತಾರೆ. ಆದರೆ ವಸ್ತುತಃ ಬೌದ್ದರ ವಿವಿಧಪಂಥಗಳಲ್ಲಿಯೂ ಸತ್ಯ. ಅಸ್ತೇಯ, ಅಪರಿಗ್ರಹ, ಶೌಚ, ಅಹಿಂಸೆ ಮುಂತಾದ ಶೀಲಗಳಿಗೆ ಪ್ರಥಮ ಪ್ರಾಶಸ್ತ್ಯವೀಯಲಾಗಿದೆ. ಇವು ನಿರ್ವಾಣಸಾಧಕನಿಗೆ ಆತ್ಯಗತ್ಯವಾದ ನೀತಿನಿಷ್ಠೆಗಳು. ನಿರ್ವಾಣವೆಂದರೆ ಸಂಸಾರ ಕ್ಲೇಶದಿಂದ ಎಂದರೆ ದುಃಖದಿಂದ ಅತ್ಯಂತ ವಿಮುಕ್ತಿ. ಪರಾರ್ಥವಾದ ಕಾರ್ಯವೆಲ್ಲ ಒಳ್ಳೆಯದೆಂದೂ ಸ್ವಾರ್ಥ ಪರಕಾರ್ಯವೆಲ್ಲ ಕೆಟ್ಟದೆಂದೂ ಸ್ಪಷ್ಟ ವಿವೇಚನೆ ಇಲ್ಲಿ ಕಾಣಸಿಗುತ್ತದೆ.

ಹಾಗೆಯೇ ಜೈನಧರ್ಮದಲ್ಲಿ ಸತ್ಕರ್ಮ ಮಾಡುವುದರಿಂದ ಉದ್ಭವಿಸುವ ಪುದ್ಗಲಗಳನ್ನು ಎಂದರೆ ಅಣ್ವಂಶಗಳನ್ನು ಪುಣ್ಯವೆಂದೂ ಅಕಾರ್ಯದಿಂದ ಬರುವ ಭೌತಿಕ ಅಣುಗಳನ್ನು ಪಾಪವೆಂದೂ ಹೇಳುತ್ತಾರೆ. ಅವು ಕೊಳೆಯಂತೆ ಜೀವವನ್ನು ಮುಸುಕುತ್ತವೆ. ಕರ್ಮಾಣುಗಳ ಲೇಪವನ್ನು ಆಸ್ರವ ಎನ್ನುತ್ತಾರೆ. ತತ್ತ್ವಜ್ಞಾನದಿಂದ ಮೋಕ್ಷ. ಮೋಕ್ಷಕ್ಕೆ ಸಮ್ಯಕ್‍ಜ್ಞಾನ, ದರ್ಶನಗಳಂತೆ ಸಮ್ಯಕ್ ಚಾರಿತ್ರವೂ ಸಾಧನವೇ, ಜೈನರಲ್ಲಿಯೂ ಬಲ, ಭೋಗ, ಇಂದ್ರಿಯ ಸುಖ, ದಾನ, ಲಾಭ, ಅಂತರಾಯ, ನಿದ್ರೆ, ಭಯ, ಅಜ್ಞಾನ, ಜುಗುಪ್ಸೆ ಈ ಹೆದಿನೆಂಟನ್ನೂ ದೋಷಗಳು ಎನ್ನಲಾಗಿದೆ. ಹೆಚ್ಚಾಗಿ ಇವೆಲ್ಲ ನೀತಿಸಂಹಿತೆಯಲ್ಲಿಯೇ ಅಡಕವಾಗುವಂಥವು. ಒಟ್ಟಿನಲ್ಲಿ ಐಹಿಕ ಶ್ರೇಯಸ್ಸಿಗಿಂತ ಆತ್ಯಂತಿಕವಾದ ಶ್ರೇಯಸ್ಸೇ ಪರಮಪುರುಷಾರ್ಥ ಎಂಬುದು ಭಾರತೀಯ ನೀತಿಶಾಸ್ತ್ರದ ಒಮ್ಮತ. ವೈದಿಕ ಪರಂಪರೆಯಲ್ಲಿದ್ದ ಜಾತಿ ಮಹತ್ವವನ್ನು ಅಲ್ಲಗಳೆದರೂ ಆತ್ಮಜ್ಞಾನಕ್ಕೆ ಅಥವಾ ನಿರ್ವಾಣಕ್ಕೆ ಸಾಪೇಕ್ಷವಾಗಿ ಜೈನಬೌದ್ದರು ಕೂಡ ಜೀವನದಲ್ಲಿ ನೀತಿಯ ಮಹತ್ವವನ್ನು ಸಾರಿದರು.


ವೈದಿಕಪರಂಪರೆಯ ವಿವರಣೆಗೆಂದೇ ಹೊರಟ ಪೂರ್ವಮೀಮಾಂಸಕರು ವೇದದಲ್ಲಿ ವಿಹಿತವಾದುದಷ್ಟೇ. ಧರ್ಮ (ಚೋದನಾಲಕ್ಷಣೋಧರ್ಮ) ಎಂದು ಧರ್ಮದ ವ್ಯಾಖ್ಯೆ ಹೇಳಿದರು. ವೇದೋಕ್ತವಾದ ಯಾವುದೇ ವಿಧಿಯಿರಲಿ, ಅದಕ್ಕೆ ಕಾರಣ ಹೇಳಿರಲಿ ಹೇಳದಿರಲಿ ಅದನ್ನು ಮಾಡುವುದು ಪುಣ್ಯ; ಬಿಡುವುದು ಪಾಪ. ವೇದೋಕ್ತ ಕರ್ಮವೆಲ್ಲ ನಿತ್ಯಕರ್ಮವೇ, ಆದರೆ ಕೆಲವೊಮ್ಮೆ ಇಂಥ ಫಲಾಪೇಕ್ಷೆಯಿದ್ದಾಗ ಇಂಥ ಕರ್ಮಗೈಯಬೇಕು ಎಂದು ಬಿಡಿಸಿ ಹೇಳಿದಾಗ ಅವು ಕಾಮ್ಯಕರ್ಮಗಳು, ಅಪೇಕ್ಷೆಯಿಲ್ಲದ್ದಾಗ ಅವನ್ನು ಬಿಟ್ಟರೆ ಅಡ್ಡಿಯಿಲ್ಲ. ಜನನ, ಮರಣ ಮುಂತಾದ ಪ್ರಸಂಗಗಳಲ್ಲಿ ಮಾತ್ರ ಮಾಡಬೇಕಾದಂಥವು ನೈಮಿತ್ತಿಕಕರ್ಮಗಳು. ಜೈನಬೌದ್ಧರಂತೆ ಮೀಮಾಂಸಕರೂ ಆಳವಾದ ವಿಮರ್ಶಮಾಡಿ ಈ ಕರ್ಮಗಳಿಗೆ ಪ್ರಾಬ್ಯಲ ನೀಡುವ ಶಕ್ತಿ ಬರಿಯ ವೇದವಚನ ಇಲ್ಲವೇ ಆಚಾರಪರಂಪರೆ ಎಂದರೆ ಸಾಲದು, ಬದಲು ಕರ್ಮದಲ್ಲಿಯೇ ಒಂದು ಶಕ್ತಿ ಸ್ವಯಂ ಹುದುಗಿದೆ ಎಂಬ ರೀತಿಯ ನಿರ್ಣಯಕ್ಕೆ ಬಂದರು. ಕರ್ಮವೇ ಒಂದು ಸ್ವಯಂಪೂರ್ಣ ಶಕ್ತಿಯಿಂದ ಸಂಪನ್ನವಾಗಿದೆ. ಮಾಡಿದ ಕರ್ಮಕ್ಕೆ ಫಲ ನೀಡುವ ತನಕ ಸ್ವಯಂ ಅಂತರ್ಗತವಾದ ಸಾಮಥ್ರ್ಯವಿದೆ. ಒಳಿತಾಗಲಿ, ಕೆಡಕಾಗಲಿ ಒಬ್ಬ ವ್ಯಕ್ತಿಗೆ ಬಂದರೆ ಅದಕ್ಕೆ ತಾನು ಮಾಡಿದ ಕರ್ಮವೇ ಎಂದರೆ ತಾನೇ ಕಾರಣ ಭಗವಂತನಾಗಲಿ ಮತ್ತೊಬ್ಬನಾಗಲಿ ಅಲ್ಲ ಎಂಬುದೇ ಸಾಂಪ್ರದಾಯಿಕ ಕರ್ಮಮೀಮಾಂಸೆ. ನೈಯಾಯಿಕರು ಭಗವಂತ ಕರ್ಮನಿಯಾಮಕ, ಕರ್ಮದಲ್ಲಿ ಸ್ವಯಂಶಕ್ತಿ ಇರಲಾರದು ಎಂಬುದಾಗಿ ಸಾಧಿಸಲು ಶ್ರಮಿಸಿದರೂ ಅವರ ವಾದ ವ್ಯಾಪಕವಾಗಿ ಹರಡಲಿಲ್ಲ. ಸ್ವೀಕಾರ್ಯವೂ ಆಗಲಿಲ್ಲ,

ಭಗವಂತನಿಗೆ ಕರ್ಮಶಕ್ತಿಯನ್ನು ಮೀರುವ ಅನಂತ ಸಾಮಥ್ರ್ಯವಿರುವುದೆಂಬ ಅಂಶವನ್ನು ರಾಮಾನುಜಾಚಾರ್ಯರ ಮತದಲ್ಲಿ ಮಾತ್ರ ಒಪ್ಪಲಾಗುತ್ತದೆ. ಎಂಥ ಪಾಪಕರ್ಮವಿದ್ದರೂ ಶರಣಾಗತವಾದ ಭಕ್ತನ ಕರ್ಮಬಂಧ ಹರಿದು ಅವನನ್ನು ಉದ್ದರಿಸುವ ಅಪಾರ ಮಹಿಮೆ ಭಗವಂತನಿಗೆ ಉಂಟೆಂಬುದು ಆ ಧಾರ್ಮಿಕ ಪಂಥದ ಗ್ರಹಿಕೆ,

ಮೀಮಾಂಸಕರು ವಿಧಿಗಳಂತೆ ವೇದೋಕ್ತ ನಿಷೇಧಗಳನ್ನೂ ಪ್ರಶ್ನಾತೀತವೆಂದು ಭಾವಿಸುತ್ತಾರೆ. ಮಾನವ ಪ್ರಲೋಭನಗಳು ಹೆಚ್ಚು; ಮನಃಸ್ಥೈರ್ಯ ಕಡಿಮೆ. ಆದ್ದರಿಂದ ನೀತಿಶಾಸ್ತ್ರಕಾರರು ಸಾಮಾಜಿಕ ಸಮಸ್ಥಿತಿ ಕಾಯ್ದುಕೊಳ್ಳಲು ವ್ಯಕ್ತಿ ಕೆಟ್ಟ ಪ್ರಲೋಭಗಳಿಗೆ ಒಳಗಾಗದಂತೆ ಕಠಿಣವಾಗಿ ನೀತಿನಡಾವಳಿಯನ್ನೂ ಕೆಟ್ಟ ಕೆಲಸಮಾಡದಂತೆ ನಿಷೇಧಗಳನ್ನೂ ಒತ್ತಿಹೇಳಿದ್ದಾರೆ. ಒಳ್ಳೆಯ ಕೆಲಸಮಾಡಲು ಸದಾಚಾರದ ನೇರ ಹಾದಿಯಲ್ಲಿ ಸಾಗಲು ದುಮಾರ್ಗದಿಂದ ದೂರವಿರುವುದು ಬಲು ಮುಖ್ಯ ಜನ್ಮತಃ ಮಾನವ ಕೆಟ್ಟವನೆಂದು ಭಾರತೀಯರು ಭಾವಿಸುವುದಿಲ್ಲ. ಅಜ್ಞಾನದಿಂದ ಆವೃತನಾಗಿ ಆತ ಕೆಟ್ಟಕೆಲಸಕ್ಕಿಳಿಯುತ್ತಾನೆ ಅಷ್ಟೇ. ಅವರಿಗೆ ಸಮ್ಯಕ್ ಜ್ಞಾನ ಲಭಿಸುವಂತೆ ಮಾಡುವುದೇ ಕೆಟ್ಟ ಕೆಲಸದಿಂದ ತಪ್ಪಿಸಲು ಬೇಕಾಗುವ ದಾರಿ. ಇದು ನಿಜವಾಗಿ ಒಳ್ಳೆಯದು ಇದು ಕೆಟ್ಟದು ಎಂಬ ವಿವೇಚನೆಯಿಲ್ಲದ್ದರಿಂದಲೇ ಎಲ್ಲ ಕೆಡಕೂ ಸಂಭವಿಸುತ್ತವೆ, ಎಂಬುದು ಬಲುಜನ ಶಾಸ್ತ್ರಕಾರರ ಅಭಿಪ್ರಾಯ. ಇದು ಕೆಟ್ಟದೆಂದು ತಿಳಿದು ಅದನ್ನೇ ಮಾಡುವ ಪ್ರವೃತ್ತಿಯುಳ್ಳ ತಾಮಸೀ ಜನರಿರುತ್ತಾರೆ ಎನ್ನುವುದು ಕೆಲವರ ವಾದ. ಸಾಧಾರಣ ಧರ್ಮಗಳು: ವರ್ಣ, ಜಾತಿ, ಆಶ್ರಮ, ಲಿಂಗ ಮುಂತಾದ ಭೇದಗಳಿಲ್ಲದ ಎಲ್ಲರಿಗೂ ಏಕರೀತಿಯಾಗಿ ಅನ್ವಯಿಸುವ ಸದ್ಗುಣಗಳೇ ಸಾಧಾರಣ ಧರ್ಮಗಳು, ಇವನ್ನು ಅವರವರ ಶಕ್ತ್ಯನುಸಾರ ಪ್ರತಿಯೊಬ್ವರೂ ಅಳವಡಿಸಿಕೊಳ್ಳಬೇಕು. ಇದರಿಂದಲೇ ಸಮಾಜಕ್ಕೆ ಹಿತ, ರಾಷ್ಟ್ರಕ್ಕೆ ಮುನ್ನಡೆ, ವ್ಯಕ್ತಿಗೆ ಸಂತುಷ್ಟಿ. ಒಳ್ಳೆಯತನ ಯಾವುದೇ ಒಂದು ಜಾತಿಯ ಅಥವಾ ಗುಂಪಿನ ಸೊತ್ತಲ್ಲ. ಸ್ಮøತಿಪುರಾಣಗಳಲ್ಲೆಲ್ಲ ಒಳ್ಳೆಯ ಗುಣಗಳ ಉದ್ದುದ್ದ ಪಟ್ಟಿಗಳೇ ಬರುತ್ತವೆ. ಭಗವದ್ಗೀತೆಯಲ್ಲಿ ಕೂಡ ಇವನ್ನು ದೈವೀ ಸಂಪತ್ತಿನ ಲಕ್ಷಣಗಳೆಂದು ಪರಿಗಣಿಸಲಾಗಿದೆ. ಅಭಯ, ನಿರ್ಮಲ ಮನಸ್ಸು, ಜ್ಞಾನ ಶ್ರದ್ದೆಗಳಲ್ಲಿ ಸ್ಥೈರ್ಯ, ಸತ್ಪಾತ್ರದಲ್ಲಿ ದಾನ, ಆತ್ಮ ಸಂಯಮ, ಯಜ್ಞ, ಶಾಸ್ತ್ರಗಳ ಅಧ್ಯಯನ, ತಪಸ್ಯೆ, ಅರ್ಜವ, ಅಹಿಂಸೆ, ಸತ್ಯ, ಕೋಪಕ್ಕೆ ಒಳಗಾಗದಿರುವ ಸ್ವಭಾವ, ವೈರಾಗ್ಯ, ಶಮ, ಪರನಿಂದೆ ಇಲ್ಲದಿರುವಿಕೆ, ಪ್ರಾಣಿಮಾತ್ರದಲ್ಲಿ ದಯೆ, ಅನಸೂಯೆ, ಮಾರ್ಧವ, ವಿನಯ, ಸ್ಥೈರ್ಯ, ಧೈರ್ಯ, ಸಹನೆ, ಧೃತಿ, ಶೌಚ, ದುರಭಿಮಾನ ರಾಹಿತ್ಯ ಮುಂತಾಗಿ ಗೀತೆಯ ಹದಿನಾರನೆಯ ಅಧ್ಯಾಯದ ಆರಂಭದಲ್ಲಿಯೇ ಬರುವ ಈ ಸದ್ಗುಣಗಳ ಪಟ್ಟಿ ಪ್ರಾತಿನಿಧಿಕವಾಗಿದೆ ಎನ್ನಬಹುದು. ಈ ಎಲ್ಲ ಪ್ರತ್ಯೇಕ ಗುಣಗಳಿಗೂ ಮೂಲಭೂತವಾಗಿ ಶೌಚ, ಆತ್ಮಸಂಯಮ, ವಿರಕ್ತಿ, ಸತ್ಯ ಮತ್ತು ಅಹಿಂಸೆಗಳೇ ಆಧಾರಸ್ತಂಭಗಳೂ ಎನ್ನಬಹುದು.

ನೀತಿಯ ನಿಚ್ಚಣಿಕೆಯಲ್ಲಿ ಶರೀರ ಮತ್ತು ಮನಸ್ಸುಗಳ ಶುದ್ದಿಯೇ ಮೊದಲ ಮೆಟ್ಟಲು. ಆಹಾರವಿಹಾರ ಕುರಿತಂತೆ ನಿತ್ಯ ವ್ಯವಹಾರಗಳಲ್ಲಿ ಉಕ್ತವಾಗುವ ಕಟ್ಟುನಿಟ್ಟುಗಳೆಲ್ಲವೂ ಮುಖ್ಯವಾಗಿ ಚಿತ್ತಶುದ್ಧಿಯನ್ನೇ ಗುರಿಯಾಗಿಟ್ಟುಕೊಂಡಿವೆ. ಮಾನವ ದೇಹವೇ ಒಂದು ದೇವಾಲಯ, ಅಲ್ಲಿ ದೇವರ ಗರ್ಭಗುಡಿಯೇ ಮನಸ್ಸು ಎಂದು ಆಗಮಗಳು ಸಾರಿಹೇಳುತ್ತವೆ. ಹೃದಯ ಅಥವಾ ಅಂತರಂಗದ ಶುದ್ಧಿಯಿಲ್ಲದವನಿಗೆ ಸ್ವರ್ಗದ ಕದ ಮುಚ್ಚಿರುತ್ತದೆ. ನಿರ್ಮಲತೆಯೇ ದೇವತ್ವದ ಒಂದು ಮುಖ್ಯಾಂಶ. ನಿಜವಾಗಿ ಶುಚಿತ್ವ ಎಂಬುದು ನಡೆ, ನುಡಿ, ಬಗೆ ಎಂಬ ತ್ರಿಕರಣಗಳಿಗೂ ಅನ್ವಯಿಸುವಂಥದು. ಋಜುತ್ವ, ನೇರವಾದ ವರ್ತನೆ, ನಿರ್ದುಷ್ಟತೆ ನಿಷ್ಟಾಪತೆ ಇವೆಲ್ಲ ಶೌಚದ ಆವಿಷ್ಕಾರಗಳು ಮಾತ್ರ ಇವನ್ನು ಅಳವಡಿಸಿಕೊಂಡವನಿಗೆ ಮುಂದಿನ ಮೆಟ್ಟಿಲಾದ ಆತ್ಮಸಂಯಮ ಸಾಧಿಸುವುದು ಸುಲಭ.

ಆತ್ಮ ಸಂಯಮ ಕೂಡ ಶರೀರಸಂಯಮ ಹಾಗೂ ಮನಸ್ಸಂಯಮಗಳೆರಡನ್ನೂ ಒಳಗೊಳ್ಳುತ್ತದೆ. ಮೊದಲು ಇಂದ್ರಿಯಗಳನ್ನು ನಿಗ್ರಹಿಸಬೇಕು. ವಿಷಯಗಳಿಗೆ ದಾಸನಾಗಬಾರದು. ಕಠೋಪನಿಷತ್ತು ಆಲಂಕಾರಿಕವಾಗಿ ಹೇಳುವಂತೆ ಇಂದ್ರಿಯಗಳು ಕುದರೆಗಳು , ವಿಷಯಗಳು ಅವು ಓಡುವ ಲಕ್ಷ್ಯಗಳು, ದೇಹಬಂಡಿ, ಬುದ್ಧಿ, ಸಾರಥಿ, ಮನಸ್ಸು ಕಡಿವಾಣ. ಆತ್ಮ ಅದರ ಒಡೆಯ, ಕಡಿವಾಣವನ್ನು ಬಿಗೆ ಹಿಡಿಯದಿದ್ದರೆ ತುಂಟಕುದುರೆಯಂತಿರುವ ಇಂದ್ರಿಯಗಳ ಹತೋಟಿ ಸಾಧ್ಯವಿಲ್ಲ. ಮನಸ್ಸು ಇಂದ್ರಿಯಗಳ ಮೇಲೆ ಹತೋಟಿಯಿಲ್ಲದವನಿಗೆ ವಿನಾಶವೇ ಗತಿ. ಆತ್ಮ ಸಂಯಮ ಎಂದರೆ ದೇಹಕ್ಕೆ ಹಿಂಸೆ ಕೊಡುವುದೆಂದು ಅರ್ಥವಿಸಬಾರದು. ಮೂರನೆಯ ವಿಷಯಗಳಿಂದ ವಿರಕ್ತಿ, ಗೀತೆಪ್ರಕಾರ ಎಲ್ಲ ಅನರ್ಥಗಳಿಗೂ ವಿಷಯಾಸಕ್ತಿಯೇ ಮೂಲ. ಮಾನವ ಒಂದು ಇಷ್ಟ ವಸ್ತುವನ್ನು ಬಯಸುತ್ತಾನೆ. ಅದು ಅವನನ್ನು ಆಕರ್ಷಿಸುತ್ತದೆ. ಈ ಆಸಕ್ತಿಯಿಂದ ಆಸೆ ಮೊಳೆಯುತ್ತದೆ. ಆಸೆ ಅವನಿಂದ ಕಾರ್ಯ ಮಾಡಿಸುತ್ತದೆ. ಕಾರ್ಯದಲ್ಲಿ ವಿಫಲನಾದರೆ ಕೋಪಾವಿಷ್ಟನಾಗುತ್ತಾನೆ. ಕೋಪದಿಂದ ಮೋಹ, ಮೋಹದಿಂದ ಸ್ಮøತಿನಾಶ, ಮತಿಭ್ರಂಶ, ಕಡೆಯ ಪರಿಣಾಮ ಸರ್ವನಾಶ. ಇದರಿಂದ ಪಾರಾಗಲು ವಿರಕ್ತಿ ಬೆಳೆಸಿಕೊಳ್ಳಬೇಕು. ಪ್ರಪಂಚದ ಪ್ರಲೋಭನಗಳಿಗೆ ನೀತಿನಿಷ್ಟನಾದವ ತಟ್ಟನೆ ಒಳಗಾಗಬಾದರು. ಪ್ರಾಪಂಚಿಕ ಭೋಗವಲ್ಲ ಕ್ಷಣಿಕ, ಅನಿತ್ಯ ಎಂಬುದನ್ನು ಮನಗಂಡು ಅವುಗಳ ದಾಸ್ಯದಿಂದ ಮುಕ್ತನಾಗಬೇಕು.

ವಿಷಯವ್ಯಾಮೋಹವಿಮುಕ್ತನಾದವನಿಗೆ ಸತ್ಯದರ್ಶನವಾಗುತ್ತದೆ. ಅದು ಎಲ್ಲಕ್ಕೂ ಹೆಚ್ಚಿನ ಸದ್ಗುಣ. ಸತ್ಯ ಎಂದರೆ ಬರಿಯ ಅಸತ್ಯವಚನದ ಅಭಾವ ಎಂದಲ್ಲ; ಸಾಕ್ಷಾತ್ ಪರಮಸತ್ಯ ಸತ್ಯ ಎಂದರೆ ಬರಿಯ ಅಸತ್ಯವಚನದ ಅಭಾವ ಎಂದಲ್ಲ; ಸಾಕ್ಷಾತ್ ಪರಮಸತ್ಯ ಸ್ವರೂಪಿಯಾದ ಭಗವಂತನ ಸಾಕ್ಷಾತ್ಕಾರ. ಹರಿಶ್ಚಚಂದ್ರ ತ್ರಿಕರಣಗಳಲ್ಲೂ ಸತ್ಯವ್ರತನಾಗಿದ್ದುದರಿಂದ ಅವನಿಗೆ ಶಿವಸಾಕ್ಷಾತ್ಕಾರ ಸಾಧ್ಯವಾಯಿತು.

ಅಹಿಂಸೆ ಎಂಬುದು ಸತ್ಯದ ಒಂದು ಸಹಜ ಪ್ರಕಟನಮಾರ್ಗ. ವೇದಋಷಿಗಳಿಂದ ಹಿಡಿದು ಬುದ್ಧಗಾಂಧೀಜಿವರೆಗೆ ಎಲ್ಲರೂ ಅಹಿಂಸೆಯ ಆಚರಣೆಯ ಮಹತ್ತ್ವ ಸಾರಿದ್ದಾರೆ. ಸತ್ಯವೇ ಸರ್ವಸ್ವ ಎಂಬಾತ ಯಾರನ್ನೂ ಹಿಂಸಿಸಲಾರ, ಬುದ್ಧನ ಬೋಧನೆಯಿದು: ಕೋಪವನ್ನು ಪ್ರೇಮದಿಂದ ಜಯಿಸು: ಕೇಡನ್ನು ಒಳಿತಿಂದ ಜಯಿಸು; ಕಾರ್ಪಣ್ಯವನ್ನು ಔದಾರ್ಯದಿಂದ ಜಯಿಸು: ಸುಳ್ಳುಗಾರನನ್ನು ಸತ್ಯವಚನದಿಂದ ಜಯಿಸು. ಗಾಂಧೀಜಿ ಹೇಳಿದಂತೆ ಅಹಿಂಸೆ ಮಾನವ ಸ್ವಭಾವಕ್ಕೆ ಸಹಜ ಗುಣ. ಇದರ ಅನುವರ್ತನೆಯಿಂದ ದೇಹದಾಸನಾಗದೆ ಆತ್ಮೋದ್ಧಾರವನ್ನೇ ಮಾನವ ಸಾಧಿಸಬಹುದು; ರಾಷ್ಟ್ರಗಳು ಕೂಡ ಉದ್ಧಾರವಾಗಬಹುದು.

ಪುರುಷಾರ್ಥಗಳು; ಭಾರತೀಯರು ವ್ಯಕ್ತಿಯ ಆಚರಣೆಯ ಸೂಕ್ಷ್ಮಚಿಂತನೆ ಮಾಡಿದ್ದರಿಂದಲೇ ನಾಲ್ಕು ಪುರುಷಾರ್ಥಗಳ ಸಿದ್ಧಾಂತ ಮಂಡಿಸಿರುವುದಾಗಿದೆ. ಮಾನವ ಏಕೆ ಒಳ್ಳೆಯವನಾಗಿ ಇರಬೇಕು? ಕೆಟ್ಟದನ್ನೇಕೆ ಮಾಡಲಾಗದು? ಇದು ಎಲ್ಲ ನೀತಿಶಾಸ್ತ್ರದ ಮೊದಲ ಪ್ರಶ್ನೆ. ನಿಯಮವನನ್ನು ಪಾಲಿಸಬೇಕಾದದ್ದು ಕರ್ತವ್ಯ ಎಂಬ ಉತ್ತರದಿಂದ ಬಾಲಕ ತೃಪ್ತನಾಗಬಹುದು; ಆದರೆ ಪ್ರೌಢ ಆಗಲಾರ. ಮಾನವನ ಬಾಳು ಪಶುಜೀವನದಂತೆ ಹೀನವಾಗದೆ, ಕ್ಷುಲ್ಲಕವೂ ನಿರರ್ಥಕವೂ ಆಗಿ ಹೋಗದೆ ಮಾನವತೆಯ ಸಾರ್ಥಕ್ಯ ಬಾಳಿಗೆ ಬರಬೇಕಾದರೆ ಧರ್ಮ, ಅರ್ಥ, ಕಾಮ, ಮೋಕ್ಷಗಳಲ್ಲಿ ಅವನವನ ಯೋಗ್ಯತಾನುಸಾರ ಅಷ್ಟಿಷ್ಟು ನಾಲ್ಕನ್ನೂ ಸಮನ್ವಯಗೊಳಿಸಿಕೊಂಡು ಸಾಧಿಸಬೇಕು ಎಂಬುದೇ ಈ ಸಿದ್ಧಾಂತದ ತಾತ್ಪರ್ಯ. ಚಾರ್ವಾಕರು ಮಾತ್ರ ಅರ್ಥಕಾಮಗಳನ್ನು ಮುಖ್ಯ ಪುರುಷಾರ್ಥಗಳೆನ್ನುತ್ತಾರೆ. ಪರಮ ಪುರುಷಾರ್ಥದ ಸ್ಥಾನವನ್ನು ಧರ್ಮ ಮತ್ತು ಮೋಕ್ಷಗಳಿಗಷ್ಟೇ ನೀಡುತ್ತಾರೆ. ಆದ್ದರಿಂದ ಧರ್ಮಕ್ಕೆ ಅವಿರುದ್ದವಾದ ಅರ್ಥ ಮಾತ್ರ ಅರ್ಥಪುರಷಾರ್ಥ ಎಂಬ ವಿವರಣೆ ರಾಮಾಯಣ, ಮಹಾಭಾರತ, ಭಾಗವತ ಮುಂತಾಗಿ ಎಲ್ಲ ಗ್ರಂಥಗಳಲ್ಲೂ ಸ್ಪಷ್ಟವಾಗಿ ಬರುತ್ತದೆ. ಮೋಕ್ಷಾಪೇಕ್ಷಯಿಲ್ಲದ ಬಲುಜನರಿಗೆ ಧರ್ಮಪುರುಷಾರ್ಥವೇ ಪರಮ ಎನ್ನುವವರೂ ಉಂಟು.

ವರ್ಣಾಶ್ರಮಧರ್ಮಗಳು: ವರ್ಣ ಅಥವಾ ಜಾತಿ ಭಾರತೀಯರ ವಿಶಿಷ್ಟ ಸಾಮಾಜಿಕ ವ್ಯವಸ್ಥೆ . ಋಗ್ವೇದದ ಪುರುಷಸೂಕ್ತದಲ್ಲಿ ಬರುವ ಬ್ರಾಹ್ಮಣ, ಕ್ಪ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಗಗಳ ಕಲ್ಪನೆ ಸೃಷ್ಟಿಕರ್ತನ ಮುಖ, ತೋಳು, ತೊಡೆ, ಕಾಲುಗಳನ್ನು ಪ್ರತೀಕಿಸುತ್ತವೆ. ಪೂರಕವಾದ ಒಂದೇ ಆದರ್ಶಶರೀರದ ಅವಯವಗಳು ಪರಸ್ಪರ ಹೊಂದಿಕೊಂಡೇ ಇರಬೇಕಾದ ಸಮಾಜ ಘಟಕಗಳು ಇವು ಎಂಬುದು ತಿಳಿಯುತ್ತದೆ. ಮಹಾತ್ಮಾಗಾಂಧಿ ಹೇಳಿದಂತೆ ಇದೊಂದು ಆಧ್ಯಾತ್ಮಿಕ ಮಿತವ್ಯಯದ ನಿಯಮವ್ಯವಸ್ಥೆಯೇ ಹೊರತು ಮೇಲು ಕೀಳುಗಳೆಂಬ ವಿಚಾರ ಅಲ್ಲಿಲ್ಲ. ಅದೊಂದು ವ್ಯಾವಹಾರಿಕ ವ್ಯವಸ್ಥೆಯಾದ ಕಾರಣ ಕಾಲಗತಿ ಬದಲಾವಣೆಯಾದಂತೆ ಆ ವ್ಯವಸ್ಥೆಯಲ್ಲಿ ಮಾರ್ಪಾಟು ಮಾಡಿಕೊಳ್ಳಬಾರದೆಂದಿಲ್ಲ. ಸಂಪ್ರದಾಯವಾದಿಗಳು ಮಾತ್ರ ಅದಕ್ಕೆ ಆಕ್ಷೇಪ ಮಾಡಬಹುದಷ್ಟೇ.

ವರ್ಣ ಎಂದರೆ ಬಣ್ಣ. ಇದು ಚರ್ಮದ್ದು, ಪ್ರಾಚೀನ ಭಾರತದಲ್ಲಿ ನಾನಾ ಮೈ ಬಣ್ಣದ ಜನರ ವಸತಿಗೆ ಅವಕಾಶ ದೊರೆತುದರಿಂದ ಅನೇಕ ಸಂಕರಜಾತಿಗಳಾಗ ತೊಡಗಿದಾಗ ಎಲ್ಲ ವರ್ಣದವರನ್ನೂ ಒಂದು ವೃತ್ತಿಪ್ರಧಾನವಾದ ವ್ಯವಸ್ಥೆಯಲ್ಲಿ ಒಳತಂದು ಹೆಚ್ಚಿನ ಸಾಂಕರ್ಯದ ಗೊಂದಲ ತಪ್ಪಿಸುವ ಯತ್ನ ನಡೆಯಿತು. ಆಗ ವರ್ಣ ಎನ್ನುವ ಶಬ್ದ ಮೈಬಣ್ಣವೆಂಬ ಅರ್ಥ ಕಳೆದುಕೊಂಡು ಸತ್ತ್ವ, ರಜಸ್ಸು, ತಮಸ್ಸು ಎಂಬ ವ್ಯಕ್ತಿತ್ವಗುಣಗಳೆಂಬ ಅರ್ಥ ಹೊಂದುವಂತಾಯಿತು. ಸತ್ತ್ವಗುಣ ಪ್ರಧಾನವಾದವ ಬ್ರಾಹ್ಮಣ, ತತ್ತ್ವವಿವೇಚನೆಯಲ್ಲಿ ಆಸಕ್ತ. ರಜೋಗುಣ ಅಥವಾ ಸಾಹಸಕಾರ್ಯಶೀಲತೆ ಪ್ರಧಾನವಾದವ ಕ್ಪ್ಷತ್ರಿಯ; ಅವನು ಕ್ರಿಯಾಶೀಲ, ತಮೋಗುಣ ಅಧಿಕವಾದದ ವೈಶ್ಯ; ಅವನು ಭಾವನಾಶೀಲ, ಇದಾವುದರಲ್ಲೂ ಪೂರ್ಣವಾಗಿ ಬೆಳೆಯದವ ಶೂದ್ರ. ಇವರ ಸ್ವಭಾವದಲ್ಲಿ ಭೇದವಿರುವಂತೆ ಕರ್ಮ ಅಥವಾ ಜೀವನವೃತ್ತಿಗಳಲ್ಲೂ ವ್ಯತ್ಯಾಸ ಸಹಜ. ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ ಇವು ಬ್ರಾಹ್ಮಣನಿಗೆ ವಿಹಿತವಾದ ಕರ್ಮಗಳು. ಶಮ, ದಮ, ತಪಸ್ಸು, ಶೌಚ, ಧೃತಿ, ಆರ್ಜವ ಜ್ಞಾನ, ವಿಜ್ಞಾನ, ಶ್ರದ್ಧೆ ಮುಂತಾದವು ಅವನ ಸ್ವಭಾವದ ವಿವಿಧ ಮುಖಗಳೆಂದು ಗೀತೆ ಉಪದೇಶಿಸಿದೆ. ದುಷ್ಟಶಿಕ್ಷಣ, ಶಿಷ್ಟರಕ್ಷಣಗಳ ಮೂಲಕ ಸಮಾಜವನ್ನು ಕಾಪಾಡುವುದು ಕ್ಪ್ಷತ್ರಿಯನ ಕರ್ಮ. ಬಾಹ್ಯಶತ್ರುಗಳಿಂದಲೂ ಅಂತಶ್ಶತ್ರುಗಳಿಂದಲೂ ದೇಶವನ್ನು ಅವನು ರಕ್ಷಿಸಬೇಕು. ಅವನ ಗುಣಗಳಲ್ಲಿ ಶೌರ್ಯಪ್ರತಾಪ, ಸ್ಥೈರ್ಯಚಾತುರ್ಯ, ಯುದ್ದದಲ್ಲಿ ಹಿಮ್ಮೆಟ್ಟದ ಗಟ್ಟಿತನ, ಔದಾರ್ಯ, ಗಾಂಭೀರ್ಯ ಮುಂತಾದವು ಸೇರುತ್ತವೆ.

ವೈಶ್ಯ ಆಯವ್ಯಯದ ವಿಚಾರಲ್ಲಿ ದಕ್ಷತೆಯುಳ್ಳವ, ಹಣದ ವ್ಯವಸ್ಥೆ ವಿತರಣೆ ಸಮಾಜದಲ್ಲಿ ಹಾಗೂ ರಾಷ್ಟ್ರದಲ್ಲಿ ಸಮರ್ಪಕವಾಗಿರುವಂತೆ ನೋಡಿಕೊಳ್ಳುವುದು ಅವನ ಕರ್ತವ್ಯ ಕರ್ಮ. ಹಣದ ಮೂಲಗಳಾದ ಮೂರು ಮುಖ್ಯ ವೃತ್ತಿಗಳು-ಕೃಷಿ, ಪಶುಪಾಲನೆ ಮತ್ತು ವಾಣಿಜ್ಯ-ಅವನ ಕಾರ್ಯನಕ್ಷೆಯಲ್ಲಿ ಅಂತರ್ಗತ ವಾಗುತ್ತವೆ. ಶಾರೀರಿಕ ಶ್ರಮವನ್ನು ಒದಗಿಸುವಾತನೇ ಶೂದ್ರ. ಸಮಾಜವ್ಯವಸ್ಥೆಯಲ್ಲಿ ಮಿಕ್ಕವರ ದುಡಿತದಷ್ಷೇ ಇವನ ಶ್ರಮಕ್ಕೂ ಬೆಲೆಯಿದೆ. ಇಡಿಯ ಸಮಾಜಕ್ಕೆ ಕ್ಷೇಮವಿಲ್ಲ. ತತ್ತ್ವ ಹೀಗಿದ್ದರೂ ಆಚರಣೆಯಲ್ಲಿ ಏರುಪೇರುಗಳು ಬಂದು ಸಾಮಾಜಿಕ ಸಮಸ್ಯೆಗಳು ಉದ್ಬವಿಸಿದ್ದನ್ನು ಭಾರತದ ಸಾಂಸ್ಕøತಿಕ ಇತಿಹಾಸದಲ್ಲಿ ಕಾಣುತ್ತೇವೆ. ಒಂದು ಉತ್ತಮ ಆದರ್ಶವೂ ಹೀಗೆ ಪಲ್ಲಟಗೊಳ್ಳಬಹುದೆಂಬುದಕ್ಕೆ ಇದು ಉದಾಹರಣೆ. ಈ ನಾಲ್ಕು ವರ್ಣಗಳಲ್ಲಿ ಸೇರದ ಪಂಚಮವರ್ಗವೊಂದನ್ನು ಕೆಲವರು ಕಲ್ಪಿಸಿದರು. ಇವರನ್ನು ಅಸ್ಪøಶ್ಯರೆಂದು ಹೆಸರಿಸಿ ಸಂಸ್ಕøತಿಯ ಮುಖ್ಯಪ್ರವಾಹದ ಹೊರಗೆ ಇರಿಸಲಾಯಿತು. ಹೀಗೆ ಮಾಡಲು ಯಾವುದೋ ಕಾಲಾಂತರದಲ್ಲಿ ಏನೋ ಐತಿಹಾಸಿಕ ಸಾಂಸ್ಕøತಿಕ ಕಾರಣವಿದ್ದಿರಬಹುದು. ಆದರೆ ಇಂದು ನಿಜವಾದ ಶಾಸ್ತ್ರಾಧಾರ ಇಲ್ಲ; ಇದ್ದರೂ ಇದು ತ್ಯಾಜ್ಯ ಎಂಬ ಗಾಂಧೀಜಿ ಅವರ ನಿಲವನ್ನು ಭಾರತದಲ್ಲಿ ಎಲ್ಲರೂ ಇಂದು ಒಪ್ಪುತ್ತಾರೆ.

ಆಶ್ರಮ ಧರ್ಮ: ಆಶ್ರಮ ಎಂದರೆ ಜೀವನದಲ್ಲಿ ವ್ಯಕ್ತಿಗೆ ಬರುವ ಬೇರೆ ಬೇರೆ ಅವಸ್ಥೆಗಳು. ಇವು ನಾಲ್ಕು; ಕಲಿಯುವ ಕಾಲ ಅಥವಾ ಬ್ರಹ್ಮಚರ್ಯ; ಮದುವೆಯಾಗಿ ಮಕ್ಕಳುಮರಿಗಳನ್ನು ಸಾಕುವ ಕಾಲ ಅಥವಾ ಗೃರ್ಹಸ್ಥ್ಯ: ಜವಾಬ್ದಾರಿ ಮುಗಿಸಿದ ಮೇಲೆ ಆಧ್ಮಾತ್ಮಿಕ ಜೀವನಕ್ಕಾಗಿ ಶಾಂತಿ ಅರಸಿಹೋಗುವ ವಾನಪ್ರಸ್ಥ ಮತ್ತು ಸಂಸಾರದ ಜಂಜಾಟದಿಂದ ಹೇಸಿ ಸ್ವೀಕರಿಸುವುದು ಸನ್ಯಾಸ. ಬ್ರಹ್ಮಚಾರಿ ವಿದ್ಯಾರ್ಜನೆಗಾಗಿ ಬಹಳ ಶಿಸ್ತಿನ ಹಾಗೂ ನಿಯಮಪಾಲನೆಯ ಜೀವನ ನಡೆಸಬೇಕು. ಇವರು ಮನೆಯನ್ನು ಬಿಟ್ಟು ಊರಹೊರಗಿರುತ್ತಿದ್ದ ಗುರುಕುಲಗಳಿಗೆ ಹೋಗಿ ಕಠಿಣ ಜೀವನ ನಡೆಸಿ ತಮ್ಮ ವಿದ್ಯೆಯನ್ನು ಸಾಂಗೋಪಾಂಗವಾಗಿ ಕಲಿಯಬೇಕಾಗಿತ್ತು. ಅಲ್ಲಿ ಧಾರ್ಮಿಕ ಲೌಕಿಕ ವಿದ್ಯೆಗಳೆಲ್ಲವುಗಳ ಶಿಕ್ಷಣಕ್ಕೂ ಅವಕಾಶವಿತ್ತು. ತಂದೆ ತಾಯಿಗಳಲ್ಲಿಯೂ ಗುರುಹಿರಿಯರಲ್ಲಿಯೂ ಭಕ್ತಿಯ ಅಗತ್ಯವನ್ನು ಅವರಿಗೆ ಬಿಂಬಿಸಲಾಗುತ್ತಿತ್ತು.

ಎರಡನೆಯದು ಗೃಹಸ್ಥ ಆಶ್ರಮ, ಬ್ರಹ್ಮಚರ್ಯದ ಅನಂತರವೇ ಇದರ ಸ್ವೀಕಾರಕ್ಕೆ ಅರ್ಹತೆ. ವಿವಾಹವೊಂದು ಧಾರ್ಮಿಕ ವಿಧಿ. ಧಾರ್ಮಿಕಜೀವನಕ್ಕೆ ಹೆಂಡತಿ ಸಹಕಾರಿಣಿಯೆಂದೇ ಅವಳಿಗೆ ಸಹಧರ್ಮಿಣಿ ಎಂಬ ಹೆಸರು. ರಾಮ ಸೀತೆ, ಸಾವಿತ್ರಿ ಸತ್ಯವಾನರ ಆದರ್ಶವನ್ನು ಗೃಹಸ್ಥಾಶ್ರಮಿಗಳು ತಮ್ಮ ಮುಂದಿಟ್ಟುಕೊಂಡಿರುತ್ತಿದ್ದರು. ಮಿಕ್ಕೆಲ್ಲ ಆಶ್ರಮದಗಳಿಗೂ ಗೃಹಸ್ಥಾಶ್ರಮವೇ ಆಧಾರ. ಇದರಿಂದಲೇ ಪ್ರಜಾಭಿವೃದ್ದಿ. ಗೃಹಸ್ಥ ಧನಾರ್ಜನೆ ಮಾಡಿ ಅದರ ಸದ್ವಿನಿಯೋಗ ಸಾಧಿಸಬೇಕು. ಅವನಿಗೆ ಬ್ರಹ್ಮಯಜ್ಞ. ದೇವಯಜ್ಞ, ಪಿತೃಯಜ್ಞ ಎಂಬ ಧಾರ್ಮಿಕ ಕರ್ತವ್ಯಗಳಲ್ಲದೆ ಅತಿಥಿ ಅಭಾಗ್ಯತರನ್ನೂ ಬ್ರಹ್ಮಚಾರಿ ಸಂನಾಸಿಗಳನ್ನೂ ಹೊಟ್ಟೆಗಿತ್ತು ರಕ್ಷಿಸುವ ಹೊಣೆಯಿರುತ್ತಿತ್ತು.

ಗೃಹಸ್ಥನ ಕರ್ತವ್ಯ ಮುಗಿದಮೇಲೆ ವಾನಪ್ರಸ್ಥ ಜೀವನ ಪ್ರಾರಂಭವಾಗುತ್ತದೆ. ಮಕ್ಕಳು ದೊಡ್ಡವರಾಗಿ, ತಮ್ಮ ಜೀವನ ತಾವೇ ನಡೆಸುವಂತಾದಾಗ ಅವರಿಗೆ ಎಲ್ಲ ಸ್ವಾತಂತ್ರ್ಯವನ್ನೂ ಇತ್ತು, ತಾನು ವಿರಕ್ತಿಯಿಂದ ಮುಪ್ಪನ್ನು ಕಳೆಯಲು ಪತ್ನಿಯೊಂದಿಗೆ ತಪೋವನ ಸೇರುವುದು ಇದರ ಮುಖ್ಯ ನಿಯಮ. ಸಮಾಜದ ಆರೋಗ್ಯಕ್ಕೆ ಇದು ಎಷ್ಟೊಂದು ಉಪಕಾರಕ ಎಂಬುದು ಇಂದು ಎಲ್ಲರಿಗೂ ಅರಿವಾಗುತ್ತದೆ. ಇಂಥ ವ್ಯವಸ್ಥೆ ಇಲ್ಲದಿರುವುದೇ ಇಂದು ಮನೆ ಮನೆಯಲ್ಲೂ ಮುಗಿಯಲಾರದ ಘರ್ಷಣೆಗಳಿಗೆ ಇಂಬೆತ್ತಿದೆ.

ಆಧ್ಯಾತಿಕ ಪರಮಲಕ್ಷಣವಾದ ಮೋಕ್ಷವನ್ನು ಗಳಿಸಲು ವಾನಪ್ರಸ್ಥ ವ್ಯಕ್ತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬೇಕಾಗುತ್ತದೆ. ಅದೇ ಸಂನ್ಯಾಸ. ಸಕಲ ಆಸ್ತಿಪಾಸ್ತಿಗಳನ್ನೂ ಬಂಧುಬಳಗವನ್ನೂ ಅಹಂಭಾವವನ್ನು ತೊರೆದು, ಸಮಾಜದಿಂದ ಹೊರಬಂದು ವೈಯುಕ್ತಿವಾಗಿ ಅಂತರ್ಧಾನ, ಧಾರುಣ, ಸಮಾಧಿಗಳಿಂದ ಪರಮಾತ್ಮನನ್ನು ಸೇರಬೇಕಾಗುತ್ತದೆ. ಈ ಪರಮಸಿದ್ಧಿ ಭಾರತೀಯ ಸಂಸ್ಕøತಿಯ ವಿಶಿಷ್ಟತೆಗಳಲ್ಲಿ ಹೆಚ್ಚಿನದು. (ಕೆ.ಕೆ.)