ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಸೂರ, ದೃಗ್ವೈಜ್ಞಾನಿಕ

ವಿಕಿಸೋರ್ಸ್ದಿಂದ

ಮಸೂರ, ದೃಗ್ವೈಜ್ಞಾನಿಕ -

ಅರೆದು ಮೆರಗು ನೀಡಲಾದ ಅಥವಾ ಸಾಚೆಹುಯ್ದು ತಯಾರಿಸಲಾದ, ಕಿರಣವಕ್ರೀಭವನಕ್ಕಾಗಿ ಉಪಯೋಗಿಸುವ, ಸಾಧಾರಣವಾಗಿ ಗಾಜು ಆಗಿರುವ ಒಂದು ವಕ್ರಪದಾರ್ಥ (ಲೆನ್ಸ್ ಆಪ್ಟಿಕಲ್). ಮಸೂರದ ಮೂಲಕ ಬೆಳಕು ಸಾಗಿದಾಗ ಬೆಳೆಕಿನ ವಕ್ರೀಭವನ ಉಂಟಾಗುತ್ತದೆ. ಮಸೂರಗಳನ್ನು ಗಾಜಿನಿಂದ ತಯಾರಿಸುವುದು ವಾಡಿಕೆ. ಆದರೂ ಕೆಲವು ವಿಶಿಷ್ಟ ಮಸೂರಗಳನ್ನು ಪಾರದರ್ಶಕ ವಸ್ತುಗಳಾದ ಸ್ಫಟಿಕಶಿಲೆ ಮತ್ತು ಫ್ಲೂರೈಟುಗಳಿಂದಲೂ ನಿರ್ಮಿಸುವುದುಂಟು.

ಚಿತ್ರ-1

ಮಸೂರ ಹೇಗೆ ಕೆಲಸಮಾಡುತ್ತದೆ ಎಂಬುದನ್ನು ಚಿತ್ರ (1)ರಲ್ಲಿ ತೋರಿಸಿದೆ. ಅಲ್ಲಿ ಒಂದಕ್ಕೊಂದು ಹೊಂದಿಕೊಳ್ಳುವ ಅನೇಕ ಅಶ್ರಗಗಳನ್ನು ಮತ್ತು ಗಾಜುಗಳನ್ನು ಸೇರಿಸಿದೆ. ಮೊದಲನೆಯ ಜೋಡಣೆಯಲ್ಲಿ ಸಮಾಂತರವಾಗಿರುವ ಬೆಳಕಿನ ಕಿರಣಗಳು ವರ್ಣವಿಭಜನೆಗೊಂಡ (ಡಿಸ್ಪರ್ಶನ್) ಬಳಿಕ ಈ ಎನ್ನುವ ನಾಭಿಯಲ್ಲಿ (ಫೋಕಸ್) ಅಭಿಸರಿಸುವಂತೆ (ಕನ್ವರ್ಜ್) ಅಶ್ರಗಗಳನ್ನು ಅಳವಡಿಸಿದೆ. ಎರಡನೆಯ ಜೋಡಣೆಯಲ್ಲಿ ಸಮಾಂತರ ಕಿರಣಗಳು ನಾಬಿ ಈ ನಿಂದ ಅಪಗಮಿಸುವಂತೆ(ಡೈವರ್ಜ್) ಅಳವಡಿಸಿದೆ. ಈ ಎರಡು ವ್ಯವಸ್ಥೆಗಳಲ್ಲಿಯೂ ಕಿರಣಗಳು ಅಧಿಕ ಬಾಗುವಿಕೆ ಹೊರಭಾಗದಲ್ಲಿರುವ ಅಶ್ರಗಗಳಲ್ಲಿ ಉಂಟಾಗುತ್ತದೆ.

ಚಿತ್ರ-2

ಅವು ವರ್ಣವಿಭಜನೆಯಾಗುವ ಎರಡು ಮೇಲ್ಮೈಗಳ ಮಧ್ಯೆ ಹೆಚ್ಚು ಕೋನವನ್ನು ಉಂಟುಮಾಡುವುದೇ ಇದರ ಕಾರಣ. ಮಧ್ಯದಲ್ಲಿರುವ ಗಾಜಿನ ಮೇಲ್ಮೈಗಳು ಸಮಾಂತರವಾಗಿರುವುದರಿಂದ ಮಧ್ಯದ ಕಿರಣಗಳು ಬಾಗುವುದಿಲ್ಲ ಮಸೂರಗಳನ್ನು ಪೀನ (ಕಾನ್ವೆಕ್ಸ್) ಮತ್ತು ನಿಮ್ನ (ಕಾನ್‍ಕೇವ್) ಎಂದು ಎರಡು ವರ್ಗಗಳಾಗಿ ವಿಂಗಡಿಸಬಹುದು. ಪೀನಮಸೂರಗಳು ತುದಿಗಳಿಗಿಂತ ನಡುವಿನಲ್ಲಿ ದಪ್ಪವಾಗಿರುತ್ತವೆ. ನಿಮ್ನ ಮಸೂರಗಳು ಹೀಗಲ್ಲ; ತುದಿಗಳಿಗಿಂತ ನಡುವಿನಲ್ಲಿ ತೆಳ್ಳಗಿರುತ್ತದೆ. ಚಿತ್ರ (2)ರಲ್ಲಿ ವಿವಿಧ ಬಗೆಯ ಮಸೂರಗಳನ್ನು ತೋರಿಸಿದೆ. ಇವುಗಳ ವಿವರಗಳನ್ನು ಕೆಳಗೆ ಕೊಟ್ಟಿದೆ.

ಸರಹದುದ ಮಸೂರದ ಹೆಸರು ಎರಡು ಮೇಲ್ಮೈಗಳೂ ಪೀನ ದ್ವಿಪೀನ (ಬೈಕನ್ವೆಕ್ಸ್) ಒಂದು ಪೀನ, ಇನ್ನೊಂದು ಸಮತಲ ಸಮತಲಪೀನ (ಪ್ಲೀನೋಕಾನ್ವೆಕ್ಸ್) ಒಂದು ಪೀನ. ಇನ್ನೊಂದು ನಿಮ್ನ ಧನನವಚಂದ್ರಕ (ಪಾಸಿಟಿರ್ವ ಮೆನಿಸ್ಕಸ್) ಎರಡೂ ನಿಮ್ನ ದ್ವಿನಿಮ್ನ (ಬೈಕಾನ್‍ಕೇವ್) ಒಂದು ನಿಮ್ನ ಇನ್ನೊಂದು ಸಮತಲ ಸಮತನಿಮ್ನ (ಪ್ಲೇನೊಕಾನ್‍ಕೇವ್) ಒಂದು ನಿಮ್ನ ಇನ್ನೊಂದು ಪೀನ ಋಣನವಚಂದ್ರಕ (ನೆಗೆಟಿಮೆನಿಸ್ಕಸ್)

ಮಸೂರದಗೋಳಾಕಾರದಮೇಲ್ಮೈಗಳ ವಕ್ರತಾಕೇಂದ್ರಗಳ (ಸೆಂಟರ್ಸ್ ಆಫ್‍ಕರ್ವೆಚರ್) ಮುಖಾಂತರ ಹೋಗುವ ಸರಳರೇಖೆಗೆ ಪ್ರಧಾನಾಕ್ಷವೆಂದು ಹೆಸರು. ಚಿತ್ರ (3)ರಲ್ಲಿ ದ್ವಿಪೀನ ಮತ್ತು ದ್ವಿನಿಮ್ನ ಮಸೂರಗಳನ್ನು ತೋರಿಸಿದೆ. ಅ1 ಮತ್ತು ಅ2 ವಕ್ರತಾಕೀಂದ್ರಬಿಂದುಗಳಾಗಿರಲಿ. ಇವೆರಡು ಮಸೂರಗಳಲ್ಲೂ ಸರಳ ರೇಖೆ ಅ1ಅ2 ಪ್ರಧಾನಾಕ್ಷ. ಮಸೂರದ ಎರಡು ಮೇಲ್ಮೈಗಳ ಪೈಕಿ ಒಂದು ಸಮತಲವಾಗಿದ್ದರೆ ಆಗ ಈ ಮೇಲ್ಮೈಗೆ ಲಂಬವಾಗಿದ್ದುಗೋಳಿಯ ಮೇಲ್ಮೈಯ ವಕ್ರತಾಕೇಂದ್ರವನ್ನು ಸೇರಿಸುವ ಸರಳರೇಖೆಯೇ ಮಸೂರದ ಪ್ರಧಾನಾಕ್ಷ.

ಚಿತ್ರ-3

ಪ್ರಧಾನಾಕ್ಷರದ ಮುಖಾಂತರ ಹೋಗುವ ಕಿರಣ ಮೊದಲನೆಯ ಮೇಲ್ಮೈಗೆ ಲಂಬವಾಗಿರುತ್ತದೆ. ಅದು ಭಾಗದ ವರ್ಣವಿಭಜನೆಹೊಂದುತ್ತದೆ.

ಚಿತ್ರ-4

ಆದ್ದರಿಂದ ಅದು ಎರಡನೆಯ ಮೇಲ್ಮೈಗೂ ಲಂಬವಾಗಿರುತ್ತದೆ. ಅಲ್ಲಿಯೂ ಅದು ಬಾಗದೆಯೇ ಮಸೂರದ ಮೂಲಕ ಹೋಗುತ್ತದೆ. ಪೀನ ಮಸೂರದ ಪ್ರಧಾನಾಕ್ಷರದ ಮಾರ್ಗವಾಗಿ ಒಂದು ವಸ್ತು ಅಥವಾ ಆಕರ 0 ಇರಲಿ (ಚಿತ್ರ4). ಪ್ರಧಾನಾಕ್ಷದ ಮಾರ್ಗವಾಗಿ ಹೋಗುವ ಕಿರಣ ಬಾಗದೆ ಮಸೂರದ ಮುಖಾಂತರ ಹಾದುಹೋಗುತ್ತದೆ.

ಚಿತ್ರ-5

0 ನಿಂದ ಹೊರಟು ಮಸೂರದ ಮೇಲೆ ಬೀಳುವ ಬೇರೆ ಕಿರಣಗಳು ವಕ್ರೀಭವನಹೊಂದಿ ಪ್ರಧಾನಾಕ್ಪರದ ಮೇಲೆ / ಎನ್ನುವ ಬಿಂಬವನ್ನು ಉಂಟುಮಾಡುತ್ತವೆ. ಮೇಲೆ ತಿಳಿಸಿದಂತೆ ಮಸೂರವನ್ನು ಅನೇಕ ಅಶ್ರಯಗಳಿಂದ ಮಾಡಲಾಗಿದೆ ಎಂದು ತಿಳಿಯಬಹುದು. ನಡುಭಾಗ ಒಂದೇ ದಪ್ಪ ಇದೆಯೆಂದು ಭಾವಿಸಬಹುದು. ಆಕರ 0 ನಿಂದ ಹೊರಡುವ ಕಿರಣಗಳು ನಿಮ್ನ ಮಸೂರದಲ್ಲಿ ವಕ್ರೀಭವಿಸುತ್ತವೆ. ಎನ್ನುವುದನ್ನು ಚಿತ್ರ (5)ರಲ್ಲಿ ತೋರಿಸಿದೆ.

ದೃಕ್ಕೇಂದ್ರ (ಆಪ್ಟಿಕಲ್ ಸೆಂಟರ್) : ಅ1 ಅ2 ಪ್ರಧಾನಕ್ಪ ಇರುವ ದ್ವಿಪೀನ ಮಸೂರವನ್ನು ಚಿತ್ರ 6(ಚಿ) ಯಲ್ಲಿ ಕೊಟ್ಟಿದೆ. PಕಿಖS ಎನ್ನುವ ಕಿರಣ ಮಸೂರದ ಮುಖಾಂತರ ಹೋಗಲಿ. ಕಿರಣ ಬೀಳುವ ಮಾರ್ಗವನ್ನು ಸರಿಯಾಗಿ ಅರಿಯುವುದರ ಮೂಲಕ Pಕಿ ಮತ್ತು ಖS ಎನ್ನುವ ಕಿರಣಭಾಗಗಳು ಸಮಾನಾಂತರವಾಗಿರುವಂತೆ ಮಾಡಲು ಸಾಧ್ಯವಿದೆ. ಈ ಸಂದರ್ಭದಲ್ಲಿ ಕಿರಣದ ಕಿಖ ಭಾಗ ಅಕ್ಪ ಅ1 ಅ2 ನ್ನು ಅ ಯಲ್ಲಿ ಸಂಧಿಸಲಿ. ಆಗ ಅ ಯನ್ನು ಮಸೂರದ ದೃಕ್ಕ್ಕೇಂದ್ರ ಎಂದು ಕರೆಯುತ್ತೇವೆ. ಒಂದು ಕಿರಣ ಮಸೂರದ ಒಂದು ಮೇಲ್ಮೈಯ ಮೇಲೆ ಬಿದ್ದು ಇನ್ನೊಂದು ಮೇಲ್ಮೈ ಮುಖಾಂತರ ಪತನವಾದ ಮಾರ್ಗಕ್ಕೆ ಸಮಾಂತರವಾದ ಮಾರ್ಗದಲ್ಲಿ ಹೊರಗೆ ಬಂದಾಗ ಪ್ರಧಾನಾಕ್ಪವನ್ನು ಆ ಕಿರಣ ಮಸೂರದ ಒಳಭಾಗದಲ್ಲಿ ಗೊತ್ತಾದ ಒಂದು ಬಿಂದುವಿನಲ್ಲಿ ಸಂಧಿಸುತ್ತದೆ.

ಚಿತ್ರ-6-1

ಇದೇ ಮಸೂರದ ದೃಕ್ಕೇಂದ್ರ, ಮೊದಲು ತೆಳು ಮಸೂರವೊಂದನ್ನು ಪರಿಶೀಲಿಸೋಣ ಚಿತ್ರ 6(ಚಿ) ಯಲ್ಲಿ ಕೊಟ್ಟಿರುವ ಖSನ ಪಥದ ಪಾಶ್ರ್ವ ಸ್ಥಳಾಂತರಣ (ಲ್ಯಾಟರಲ್ ಡಿರ್ಸ್‍ಪ್ಲೇಸ್‍ಮೆಂಟ್) PSಗೆ ಹೋಲಿಸಿದಾಗ ಬಲು ಕಡಿಮೆ ಇದ್ದರೆ ಅಂಥ ಮಸೂರದ ದಪ್ಪ ಕಡಿಮೆಯಾಗಿದೆ ಎಂದು ಭಾವಿಸಿ ಆದನ್ನು ತೆಳು ಮಸೂರವೆಂದು ಕರೆಯಬಹುದು. ತೆಳು ಮಸೂರದಲ್ಲಿ ದೃಕ್ಕೇಂದ್ರದ ಮುಖಾಂತರ ಹೋಗುವ ಕಿರಣ ಒಂದೇ ಮಾರ್ಗದಲ್ಲಿ ಸ್ಥಳಾಂತರವಿಲ್ಲದೆ ಹೋಗುತ್ತದೆಂದೂ ಅ ಮಸೂರದ ದೃಕ್ಕೇಂದ್ರ ಆದರ ಸಮತಲ ಪಾಶ್ರ್ವದ ಕೇಂದ್ರದಲ್ಲಿರುತ್ತೆಂದೂ ಊಹಿಸಬಹದು.

ಚಿತ್ರ-6-2

ಪ್ರಧಾನಕ್ಪಕ್ಕೆ ಸಮಾಂತರವಾಗಿರುವ ಕಿರಿದಾದ ಸಮಾಂತರ ಕಿರಣದೂಲ ಮಸೂರದ ಮುಖಾಂತರ ಹೊರಸಾಗಿದಾಗ ಪೀನ ಮಸೂರವಾದರೆ ಒಂದು ಬಿಂದುವಿನಲ್ಲಿ ಸಂಗಮಿಸುತ್ತದೆ. (ಚಿತ್ರ7ಚಿ) ನಿಮ್ನಮಸೂರವಾದರೆ ಅಕ್ಪದ ಮೇಲಿನ ಒಂದು ಬಿಂಚುವಿನಿಂದ ಅಪಗಮಿಸುವಂತೆ ಕಾಣುತ್ತದೆ (ಚಿತ್ರ7b) ಈ ಎರಡು ಪರಿಸ್ಥತಿಗಳಲ್ಲೂ ಈ ಬಿಂದುನ್ನು ಪ್ರಧಾನ ನಾಭಿ ಎಂದು ಕರೆಯುತ್ತೇವೆ. ಪೀನ ಮಸೂರದಲ್ಲಿ ನಾಭಿ ನೈಜಬಿಂದು, ನಿಮ್ನ ಮಸೂರದಲ್ಲಿ ಮಿಥ್ಯಾಬಿಂದು. ನಾಭೀದೂರ : ದೃಕ್ಕೇಂದ್ರದಿಂದ ಪ್ರಧಾನ ನಾಭಿ ಎಂದು ಕರೆಯುತ್ತೇವೆ. ಪೀನ ಮಸೂರದಲ್ಲಿ ನಾಭಿ ದೂರಕ್ಕೆ ಋಣಚಿಹ್ನೆಯೂ ನಿಮ್ನ ಮಸೂರದಲ್ಲಿ ಧನಚಿಹ್ನೆಯೂ ಲಗತ್ತಾಗಿರುತ್ತದೆ. ಪ್ರಧಾನಕ್ಪದೊಂದಿಗೆ ಇರುವ ಭಾಗಕ್ಕೆ ಪ್ರಧಾನ ವಿಭಾಗವೆಂದೂ ಹೆಸರು. ಮಸೂರಕ್ಕೆ ಸಾಮಾನ್ಯವಾಗಿ ವೃತ್ತಾಕಾರವಿರುತ್ತದೆ. ಇದರ ವ್ಯಾಸಕ್ಕೆ ಮಸೂರದ ದ್ವಾರಕ (ಆಪರ್ಚರ್) ಎಂದು ಹೆಸರು. ಚಿತ್ರ (8)ರಲ್ಲಿ ದೃಕ್ಕೇಂದ್ರ 0ವಿನ ಮುಖಾಂತರ ಹೋಗುವ ಐಔಐ ದ್ವಾರಕವನ್ನು ಆಳತೆ ಮಾಡುತ್ತದೆ. ಕಡಿಮೆ ದ್ವಾರಕವಿರುವ ಮಸೂರಗಳನ್ನು ಉಪಯೋಗಿಸುವುದು ವಾಡಿಕೆ. ಚಿಹ್ನೆಗಳ ನಿಯಮ ಅಥವಾ ಚಿಹ್ನೆಗಳ ಪದ್ಧತಿ: ಗೋಳಾಕಾರದ ಕನ್ನಡಿಗಳಂತೆ ಮಸೂರಗಳಲ್ಲಿಯೂ ಚಿಹ್ನೆಗಳ ನಿಯಮವನ್ನು ಅನುಸರಿಸುವುದಿದೆ.

ಚಿತ್ರ-7

ದೃಕ್ಕೇಂದ್ರದಿಂದ ಎಲ್ಲಾ ದೂರಗಳನ್ನು ಪ್ರಧಾನಕ್ಷದ ನೇರ ಅಳತೆ ಮಾಡಲಾಗುತ್ತದೆ. ಮಸೂರದ ದೃಕ್ಕೇಂದ್ರದಿಂದ ಚಿತ್ರ (8) ಬೆಳಕಿನ ಆಕರದ ಕಡೆಗೆ ಅಳತೆ ಮಾಡಿದ ಎಲ್ಲ ದೂರಗಳನ್ನು ಧನ ಚಿಹ್ನೆಯಿಂದಲೂ ಆಕರಕ್ಕೆ ವಿಮುಖವಾಗಿ ಅಳತೆ ಮಾಡಿದ ಎಲ್ಲ ದೂರಗಳನ್ನು ಋಣಚಿಹ್ನೆಯಿಂದಲೂ ಸೂಚಿಸುವುದಿದೆ. ಅಥವಾ ಕಿರಣದ ಮಾರ್ಗವನ್ನು ಅನುಸರಿಸಿ ಅಳತೆ ಮಾಡಲಾಗುವ ಎಲ್ಲ ದೂರಗಳಿಗೆ ಧನಚಿಹ್ನೆಯನ್ನೂ ಮಾರ್ಗಕ್ಕೆ ವಿಮುಖವಾಗಿ ಅಳತೆ ಮಾಡಲಾಗುವ ಎಲ್ಲ ದೂರಗಳಿಗೆ ಋಣಚಿಹ್ನೆಯನ್ನೂ ಲಗತ್ತಿಸುವುದಿಲ್ಲ.

ಚಿತ್ರ-8

ವಸ್ತುವಿನ ಪ್ರತಿಬಿಂಬವನ್ನು ಜ್ಯಾಮಿತಿ ಅಥವಾ ಗ್ರಾಫ್ ರಚನೆಯಿಂದ ಪಡೆಯುವುದು: ಅಕ್ಷಕ್ಕೆ ಸಮೀಪದಲ್ಲಿರುವ ಬಿಂದು ವಸ್ತುವಿನ ಪ್ರತಿಬಿಂಬವನ್ನು ಈ ಮುಂದಿನ ಯಾವುದಾದರೂ ಎರಡು ಸೂತ್ರಗಳನ್ನು ಉಪಯೋಗಿಸಿಪಡೆಯಬಹುದು. ಕಿರಣಗಳು ಸಂಧಿಸುವ ಬಿಂದುವಿನಲ್ಲಿ ಪ್ರತಿಬಿಂಬ ಉಂಟಾಗುತ್ತದೆ. (ಮಿಥ್ಯಾಬಿಂಬದ ಸಂದರ್ಭದಲ್ಲಿ ಕಿರಣಗಳನ್ನು ಹಿಂದೆ ಹೋಗುವಂತೆ ಎಳೆದಾಗ ಅವು ಸೇರುವ ಬಿಂದುವಿನಲ್ಲಿ ಪ್ರತಿಬಿಂಬ ಉಂಟಾಗುತ್ತದೆ). ಸೂತ್ರ 1: ಬಿಂದು ಆಕಾರದಿಂದ ಹೊರಡುವ ಮತ್ತು ಅಕ್ಷಕ್ಕೆ ಹತ್ತಿರದಲ್ಲಿದ್ದು ಸಮಾಂತರವಾಗಿರುವ ಬೆಳಕಿನ ಕಿರಣ ಪೀನ ಮಸೂರಕ್ಕೆ ಸಂಬಂಧಿಸಿದಂತೆ ಪ್ರಧಾನ ನಾಭಿಯ ಮುಖಾಂತರ ಹೋಗುತ್ತದೆ. ನಿಮ್ನ ಮಸೂರಕ್ಕೆ ಸಂಬಂಧಿಸಿದಂತೆ ಕಿರಣಗಳು ನಾಭಿಯಿಂದ ಅಪಗಮಿಸುವಂತೆ ಕಾಣುತ್ತವೆ. ಸೂತ್ರ 2: ಬಿಂದು ಆಕರದಿಂದ ಹೊರಟು ದೃಕ್ಕೇಂದ್ರದ ಮುಖಾಂತರ ಹೋಗುವ ಕಿರಣ ರಶ್ಮಿಭಂಗವಾದಮೇಲೆ ಬಾಗದೆಯೇ ಬಂದ ಹಾದಿಯಲ್ಲೇ ಮುಂದೆ ಸಾಗುತ್ತದೆ. ಸೂತ್ರ 3: ಬಿಂದು ಆಕಾರದಿಂದ ಹೊರಟು ನಾಭಿಯ ಮೂಲಕ ಹೋಗುವ ಕಿರಣ ರಶ್ಮಿಭಂಗವಾದ ಮೇಲೆ ಮಸೂರದ ಅಕ್ಷಕ್ಕೆ ಸಮಾಂತರವಾಗಿ ಸಾಗುತ್ತದೆ. ಮಸೂರದ ಮುಖಾಂತರ ನೋಟ: ಪೀನಮಸೂರದ ಸಂದರ್ಭದಲ್ಲಿ ಕಣ್ಣು ಹೇಗೆ Pಕಿ ಎನ್ನುವ ವಸ್ತುವಿನ ನೈಜಪ್ರತಿಬಿಂಬ ಠಿqವನ್ನು ಕಾಣುತ್ತದೆ ಎನ್ನುವುದನ್ನು ಚಿತ್ರ (9)ರಲ್ಲಿ ತೋರಿಸಿದೆ.

ಚಿತ್ರ-9

ಕಣ್ಣು ಮಸೂರದ ಬಲುಹತ್ತಿರ ಇದ್ದಾಗ ಪ್ರತಿಬಿಂಬ ಕಾಣುವುದಿಲ್ಲ. ಇದೇ ರೀತಿ ನಿಮ್ನ ಮಸೂರದಲ್ಲಿ ಕಣ್ಣು ಹೇಗೆ Pಕಿ ವಸ್ತುವಿನ ಮಿಥ್ಯಾಪ್ರತಿಬಿಂಬ ಠಿqವನ್ನು ಕಾಣುತ್ತದೆ ಎನ್ನುವುದನ್ನು ಚಿತ್ರ (10)ರಲ್ಲಿ ತೋರಿಸಿದೆ. ಈ ಸಂದರ್ಭದಲ್ಲಿ ಕಣ್ಣು ಮಸೂರದ ಹಿಂಭಾಗದಲ್ಲಿ ಎಲ್ಲಿದ್ದರೂ ಅದಕ್ಕೆ ಮಿಥ್ಯಾ ಪ್ರತಿಬಿಂಬ ಕಾಣುತ್ತದೆ. ರೇಖೀಯ ಲಂಬನ (ಲೀನಿಯರ್ ಮ್ಯಾಗ್ನಿಫಿಕೇಶನ್) : ಇದು ಪ್ರತಿಬಿಂಬದ ಆಕಾರಕ್ಕೂ ವಸ್ತುವಿನ ಆಕಾರಕ್ಕೂ ಇರುವ ಪ್ರಮಾಣ. ಔ ವಸ್ತುವಿನ ಆಕಾರವೂ I ಪ್ರತಿಬಿಂಬದ ಆಕಾರವೂ ಆಗಿದ್ದರೆ ಲಂಬನ ಮಸೂರಗಳನ್ನು ಸುಲಭವಾಗಿ ಗುರುತಿಸುವುದು : ವಸ್ತುವನ್ನು ಮಸೂರದ ಬಹಳ ಅಂತರ ಇಟ್ಟಾಗ ಪೀನ ಮಸೂರದಲ್ಲಿ ಮಿಥ್ಯಾ ಪ್ರತಿಬಿಂಬವೂ ನಿಮ್ನ ಮಸೂರದಲ್ಲಿ ಚಿಕ್ಕ ಮಿಥ್ಯಾ ಪ್ರತಿಬಿಂಬವೂ ಉಂಟಾಗುವುದು ಸರಿಯಷ್ಟೆ.

ಚಿತ್ರ-10

ಆದ್ದರಿಂದ ಬೆರಳನ್ನು ಮಸೂರದ ಹತ್ತಿರ ಹಿಡಿದು ಮಸೂರದ ಇನ್ನೊಂದು ಭಾಗದಿಂದ ನೋಡಿದಾಗ ಪ್ರತಿಬಿಂಬ ದೊಡ್ಡದಾಗಿದ್ದರೆ ಮಸೂರ ಪೀನವೆಂದು ಪ್ರತಿಬಿಂಬ ಚಿಕ್ಕದಾಗಿದ್ದರೆ ನಿಮ್ನವೆಂದು ತಿಳಿಯಬಹುದು.

ಮಸೂರದ ಸಾಮಥ್ರ್ಯ: ಸಮಾಂತರ ಕಿರಣದೂಲ ಮಸೂರದ ಮೇಲೆ ಬಿದ್ದಾಗ ಆ ದೂಲ ಪೀನ ಮಸೂರದ ಕುರಿತಂತೆ ಸಂಘಮಿಸುವ ಸಾಮಥ್ರ್ಯವನ್ನೂ ನಿಮ್ನ ಮಸೂರ ಕುರಿತಂತೆ ಅಪಗಮಿಸುವ ಸಮಾಥ್ರ್ಯವನ್ನೂ ಆಯಾ ಮಸೂರದ ಸಮಾಥ್ರ್ಯ ಸೂಚಿಸುತ್ತವೆ. ಸಮಾಂತರ ದೂಲ ಪೀನ ಮಸೂರಕ್ಕೆ ಬಲು ಹತ್ತಿರ ಸಂಗಮಿಸಿದರೆ ಆ ಮಸೂರದ ಸಾವiಥ್ರ್ಯ ಹೆಚ್ಚೆಂದೂ ನಿಮ್ನ ಮಸೂರದಲ್ಲಿ ಅದರ ಹತ್ತಿರ ಅಪಗಮಿಸುವಂತೆ ತೋರಿದರೆ ಆ ಮಸೂರದ ಸಾವiಥ್ರ್ಯ ಹೆಚ್ಚೆಂದು ತಿಳಿಯುತ್ತೇವೆ. ಸಂಗಮಿಸುವುದಾಗಲಿ ಅಪಗಮಿಸುವುದಾಗಲಿ ಸಹಜವಾಗಿ ನಾಭೀ ದೂರದ ವ್ಯುತ್ಕ್ರಮವಾಗಿವೆ. ಏಕೆಂದರೆ ನಾಭೀದೂರ ಹೆಚ್ಚಾದಂತೆಲ್ಲ ಸಂಗಮಿಸುವ ಮತ್ತು ಅಪಗಮಿಸುವ ಬಿಂದುಗಳು ಮಸೂರದಿಂದ ದೂರವಿರುತ್ತವೆ. ಆದ್ದರಿಂದ ಮಸೂರದ ಸಾಮಥ್ರ್ಯವನ್ನೂ ನಾಭೀದೂರದ ವ್ಕುತ್ಕ್ರಮವಾಗಿ ಅಳೆಯುತ್ತೇವೆ.

ಕನ್ನಡಕಕ್ಕೆ ಸಂಬಂಧಿಸಿದಂತೆ ಪೀನಮಸೂರ (ಋಣ ನಾಭೀದೂರ) ಧನ ಸಾಮಥ್ರ್ಯವನ್ನೂ ನಿಮ್ನ ಮಸೂರ (ಧನನಾಭೀದೂರ) ಋಣ ಸಾಮಥ್ರ್ಯವನ್ನೂ ಸೂಚಿಸುತ್ತವೆ. ಈ ಸಂಪ್ರದಾಯ ಕಣ್ಣಿನ ಸಾಮಥ್ರ್ಯಕ್ಕೆ ಸಂಬಂಧಿಸಿ ಇರುವುದಾಗಿದೆ. ಕಣ್ಣಿನ ಸಾಮಥ್ರ್ಯ ಅನನುಕೂಲಕರವಾಗಿ ಕಡಿಮೆಯಾದಾಗ ಅದನ್ನು ಸರಿಯಾದ ಪೀನಮಸೂರ ಬಳಸಿ ಹೆಚ್ಚುಮಾಡಬಹುದು. ಇದೇರೀತಿ ಕಣ್ಣಿನ ಸಾಮಥ್ರ್ಯ ಅನನುಕೂಲಕರವಾಗಿ ಹೆಚ್ಚಾದಾಗ ಚಿಕ್ಕವರಿಗೆ ಸಂಬಂಧಿಸಿದಂತೆ ಅದನ್ನು ಸರಿಯಾದ ನಿಮ್ನಮಸೂರ ಬಳಸಿ ಕಡಿಮೆ ಮಾಡಬಹುದು. (ಎನ್.ಎಸ್.)