ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೋಳಿಗೆ ಮಾರಯ್ಯ

ವಿಕಿಸೋರ್ಸ್ದಿಂದ

ಮೋಳಿಗೆ ಮಾರಯ್ಯ ಸು.1160. ಶಿವಶರಣ ಹಾಗೂ ವಚನಕಾರ. ಇವನಿಗೆ ಮೋಳಿಗಯ್ಯ ಎಂಬ ಹೆಸರು ಇದೆ. ಈತನದು ಕಟ್ಟಿಗೆ ಕಡಿದು ಮಾರುವ ಕಾಯಕ. ಮೊದಲಿಗೆ ಈತ ಕಾಶ್ಮೀರ ದೇಶದ ಮಾಂಡವ್ಯಪುರದ ರಾಜನಾಗಿದ್ದನೆಂದೂ ಅನಂತರ ಬಸವಣ್ಣನವರ ವಿಚಾರಗಳ ಆಕರ್ಷಣೆಗೊಳಗಾಗಿ ರಾಜ್ಯ ತ್ಯಜಿಸಿ ತನ್ನ ಹೆಂಡತಿ ಗಂಗಾದೇವಿಯೊಂದಿಗೆ ಕಲ್ಯಾಣಕ್ಕೆ ಬಂದು ಅಲ್ಲಿ ಮೋಳಿಗೆ ಮಾರಯ್ಯನಾದನೆಂದು ಹೆಂಡತಿ ಮಹಾದೇವಿಯಾದಳೆಂದು ವೀರಶೈವ ಗ್ರಂಥಗಳು ಹೇಳುತ್ತವೆ. ತೆಲುಗು ಬಸವಪುರಾಣಮು, ಕನ್ನಡ ಬಸವಪುರಾಣ, ಶಿವತತ್ತ್ವಚಿಂತಾಮಣಿ, ವೀರಶೈವಾಮೃತ ಮಹಾಪುರಾಣ, ಪ್ರಭುದೇವರ ಪುರಾಣ, ರಾಘವಾಂಕ ಚಾರಿತ್ರ, ಗುರುರಾಜಚಾರಿತ್ರ, ವೃಷಭೇಂದ್ರ ವಿಜಯ, ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರ, ಶರಣಲೀಲಾಮೃತ, ಬೋರಬಸವಪುರಾಣ ಮೊದಲಾದ ಗ್ರಂಥಗಳಲ್ಲಿ ಈತನ ಚರಿತ್ರೆ ನಿರೂಪಿತವಾಗಿದೆ. ಹೊನ್ನಳ್ಳಿಯ ಗೌರಾಂಕ (ಸು. 1525) ಈತನನ್ನು ಕುರಿತು ಮೋಳಿಗಯ್ಯನ ಪುರಾಣ ಎಂಬ ಕಾವ್ಯವನ್ನು ಬರೆದಿದ್ದಾನೆ. ಪ್ರಭುದೇವರ ಶೂನ್ಯಸಂಪಾದನೆಯಲ್ಲಿ ಮೋಳಿಗಯ್ಯಗಳ ಸಂಪಾದನೆ ಎಂಬ ಭಾಗವಿದೆ.

ಇದುವರೆಗೆ ಈತನ 819 ವಚನಗಳು ದೊರಕಿವೆ. ನಿಃಕಳಂಕಮಲ್ಲಿಕಾರ್ಜುನ ಎಂಬುದು ಈ ವಚನಗಳ ಅಂಕಿತ. ಪಟ್ಸ್ಥಲಸಿದ್ಧಾಂತವನ್ನು ನಿರೂಪಿಸುವ ಈತನ ಒಂದು ವಚನ ಹೀಗಿದೆ. ಬೀಜವೃಕ್ಷವ ನುಂಗಿತ್ತೊ ವೃಕ್ಷ ಬೀಜವ ನುಂಗಿತ್ತೊ ಎಂದ¾Âದಾಗಲೇ ಭಕ್ತಿಸ್ಥಲ ಮುತ್ತು ಜಲವ ನುಂಗಿತ್ತೊ ಜಲವು ಮುತ್ತನುಂಗಿತ್ತೊಎಂಬುದನ¾Âದಾಗಲೇ ಮಾಹೇಶ್ವರಸ್ಥಲ ಪ್ರಭೆ ಪಾಷಾಣವ ನುಂಗಿತ್ತೋ ಕಾಷ್ಠವು ವಹ್ನಿಯ ನುಂಗಿತ್ತೊ ಎಂಬುದನ¾Âದಾಗಲೇ ಪ್ರಾಣಲಿಂಗಿಸ್ಥಲ ಸಾರ ಬಲಿದುಶರಧಿಯಕೂಡಿದಾಗಲೇ ಶರಣಸ್ಥಲ ವಾರಿಬಲಿದು ವಾರಿಧಿಯ ಕೂಡಿದಾಗಲೇ ಐಕ್ಯಸ್ಥಲ ಇಂತಲ್ಲದೆ ಪಟ್ಸ್ಥಲಬ್ರಹ್ಮಿಗಳೆಂತಾದೀರಣ್ಣಾ? ಕ¾Âಯದ ಪಶುವಿಂಗೆ ತೃಣವ ಗ¾Âಸುವಂತೆ ಒಲ್ಲದ ಸತಿಗೆ ರತಿಕೂಟವ ಬೆಳಸುವಂತೆ ಗೆಲ್ಲ ಸೋಲಕ್ಕೆ ಹೋರುವನಲ್ಲಿ ಬಲ್ಲತನವನ¾ಸುವಂತೆ ........ ಮೀ¾Âತೋ¾Âದ ಘನವದು ತನ್ನಲ್ಲಿಯೇ ನೊರ್ಲೇಪ ನಿಃಕಳಂಕ ಮಲ್ಲಿಕಾರ್ಜುನ.