ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲ

ವಿಕಿಸೋರ್ಸ್ದಿಂದ

'ಲ' ದಂತ್ಯ ಘೋಷ ಪಾರ್ಶ್ವಿಕ ವ್ಯಂಜನ ಧ್ವನಿ. ಅವರ್ಗೀಯ ವ್ಯಂಜನವರ್ಗದ ಮೂರನೆಯ ಅಕ್ಷರ. ಉದ್ದವಾಗಿಯೂ ಚೂಪಾಗಿಯೂ ಇರುವ ಅಶೋಕನ ಕಾಲದ ‘ಲ’ ಎಂಬ ಅಕ್ಷರ ಸಾತವಾಹನ ಕಾಲದಲ್ಲಿ ಅಗಲವಾಗುತ್ತದೆ. ಕದಂಬರ ಕಾಲದಲ್ಲಿ ಕೆಳಗಿನ ಭಾಗ ಅಗಲವಾಗುವುದರ ಜೊತೆಗೆ ಎರಡು ಭಾಗಗಳಾದಂತೆ ಮಾರ್ಪಡುತ್ತದೆ. ರಾಷ್ಟ್ರಕೂಟರ ಕಾಲ ದಲ್ಲಿ ಗಮನಾರ್ಹ ವಾದ ಬದಲಾವಣೆ ಉಂಟಾಗುತ್ತದೆ. ಇದುವರೆವಿಗೂ ಇದ್ದ ರೂಪ ಸಣ್ಣದಾಗಿ ಅದರ ಸುತ್ತಲೂ ಖಂಡವೃತ್ತ ಬಂದು ಸೇರುತ್ತದೆ. ಈ ಖಂಡ ವೃತ್ತವೇ ಮುಂದೆ ಅಕ್ಷರ ಬೆಳೆವಣಿಗೆಗೆ ಸಹಾಯ ವಾಗುತ್ತದೆ. ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಈ ಅಕ್ಷರದ ಬೆಳೆ ವಣಿಗೆ ಪೂರ್ಣವಾಗಿ ಅದೇ ರೂಪ ಸ್ಥಿರಗೊಳ್ಳುತ್ತದೆ. (ಎ.ವಿ.ಎನ್.)