ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲೀಪಸ್

ವಿಕಿಸೋರ್ಸ್ದಿಂದ

ದಕ್ಷಿಣ ಖಗೋಳಾಕಾಶದ ಒಂದು ನಕ್ಷತ್ರಪುಂಜ. ಒರೈಯನ್ (ಮಹಾವ್ಯಾಧ) ನಕ್ಷತ್ರಪುಂಜದ ಬಳಿಯಲ್ಲಿದೆ. ಸನ್ನಿಹಿತ ಸ್ಥಾನ : ವಿಷುವದಂಶ 6ಗಂ.; ಘಂಟಾವೃತ್ತಾಂಶ 45⁰ ದಕ್ಷಿಣ. ಇದನ್ನು ಶಶ (ಮೊಲ) ನಕ್ಷತ್ರಪುಂಜ ಎಂದು ಕರೆಯುವುದುಂಟು. ಮಹಾವ್ಯಾಧನಿಗೆ ಮೊಲದ ಬೇಟೆ ಬಲು ಪ್ರಿಯವೆನಿಸಿತ್ತಂತೆ. ಆದಕಾರಣ ಮಹಾವ್ಯಾಧ ನಕ್ಷತ್ರ ಪುಂಜದ ಸನಿಹದಲ್ಲಿ ಲೀಪಸ್ ಇದೆ ಎಂಬುದು ಐತಿಹ್ಯ. ಆಲ್ಫ ಆರ್ನೆಬ್ ಎಂಬುದು ಈ ಪುಂಜದ ಪ್ರಮುಖ ತಾರೆ. ಕಾಂತಿಮಾನ 2.58. ವಿಷುವದಂಶ 5ಗಂ 31ಮಿ. 46ಸೆ., ಘಂಟಾವೃತ್ತಾಂಶ 17⁰ 50‘ 13" ದಕ್ಷಿಣ. ರೋಹಿತ ಪ್ರರೂಪ FO. ಸೂರ್ಯನಿಂದ 900 ಬೆಳಕುವರ್ಷಗಳ ದೂರದಲ್ಲಿದೆ. ಕೆಲವೊಂದು ಯಮಳತಾರೆಗಳೂ ಚರಕಾಂತೀಯ ತಾರೆಗಳೂ ಈ ಪುಂಜದಲ್ಲಿವೆ.

(ನೋಡಿ- ಒರೈಯನ್)