ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶಿವಮಾರ 2

ವಿಕಿಸೋರ್ಸ್ದಿಂದ

ಶಿವಮಾರ 2

ತಲಕಾಡು ಗಂಗವಂಶದ ದೊರೆ (ಸು. 788-812). ಶ್ರೀಪುರುಷನ ಮಗನಾದ ಈತ ಸೈಗೊಟ್ಟ ಶಿವಮಾರನೆಂದೂ ಪ್ರಸಿದ್ಧ. ಈತ ಕುಮ್ಮದವಾಡ (ಬೆಳಗಾಂವಿ ಜಿಲ್ಲೆಯ ಕಲ್ಭಾವಿ) ಹಾಗೂ ಶ್ರವಣಬೆಳಗೊಳಗಳಲ್ಲಿ ಬಸದಿಗಳನ್ನು ನಿರ್ಮಿಸಿದ. ಈತ ಗಜಾಷ್ಟಕ ಮತ್ತು ಸೇತುಬಂಧಗಳೆಂಬ ಕೃತಿಗಳನ್ನು ರಚಿಸಿದ್ದಾಗಿ ತಿಳಿದು ಬರುತ್ತದೆ. ಇವು ಉಪಲಬ್ಧವಿಲ್ಲ. ಶಿವಮಾರದೇವಂ ಸೈಗೊಟ್ಟನೆಂಬೆರಡನೆಯ ಹೆಸರಂ ತಾಳ್ದಿ ಶಿವಮಾರಮತಮೆಂದು ಗಜಶಾಸ್ತ್ರಮಂ ಮಾಡಿ ಎಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೊಂಬುಜ(ಹುಂಚ)ದ ಒಂದು ಶಾಸನದಲ್ಲಿ (1077) ಹೇಳಿದೆ. ಇದೇ ಶಾಸನದಲ್ಲಿ ಗಜಾಷ್ಟಕ ಗ್ರಂಥ ಪ್ರಶಸ್ತಿಯನ್ನು ಹೇಳುವ ಒಂದು ಕಂದಪದ್ಯವೂ ಇದೆ:

ಏವೇ¿್ವುದೊ ಶಿವಮಾರಮ
ಹೀವಳಯಾಧಿಪನ ಸುಭಗಕವಿತಾಗುಣಮಂ |
ಭೂವಳಯದೊಳ್ ಗಜಾಷ್ಟಕ
ಮೋವನಿಗೆಯುಮೊನಕೆವಾಡುಮಾದುದೆಪೇ¿್ಗುಂ ||

ಇದು ಒನಕೆವಾಡುಮಾದುದು ಎಂದಿರುವುದರಿಂದ ಇದು ಕನ್ನಡ ಭಾಷೆಯಲ್ಲಿತ್ತು ಎಂದು ಹೇಳಬಹುದು. ಕರೇಣಭೂಯತಿ ಇದಕ್ಕೆ ವ್ಯಾಖ್ಯಾನ ಮಾಡಿ ಇದನ್ನು ಒಂದು ಪ್ರೌಢಕೃತಿ ಎಂದು ಹೇಳಿದ್ದಾನೆ. (ಜಿ.ಸಿ.ಐ.)