ವಿಷಯಕ್ಕೆ ಹೋಗು

ಸದಸ್ಯ:Harshavardhan M V

ವಿಕಿಸೋರ್ಸ್ದಿಂದ

ಎಲ್ಲಾರಿಗು ನನ್ನ ನಮಾಸ್ಕಾರಗಳು!!!

                       ನನ್ನ ಹೆಸರು ಹರ್ಷವರ್ದನ್ ಎಂ ವಿ ಪ್ರಸ್ತುತ ನಾನು ಕೈಸ್ತ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ. ನಾನು ಮೂಲತಹ: ಕೋಲಾರದವನಾಗಿದ್ದು ವೀರಭದ್ರಯ್ಯ ಮತ್ತು ರೆಡ್ಡೆಮ್ಮ ದಂಪತಿಗಳ ಪುತ್ರನಾಗಿ ೦೯-೦೯-೧೯೯೯ರಲ್ಲಿ ಜನಿಸಿದೆ.ತಂದೆ ವೀರಭದ್ರಯ್ಯನವರು ಚಿಕ್ಕದೊಂದು ವ್ಯಾಪಾರವನ್ನು ನಡೆಸುತ್ತಿದ್ದಾರೆ.
         ನನ್ನ ಬಾಲ್ಯ ವ್ಯಾಸಂಗ ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ಮುಗಿಸಿದೆ . ಅಲ್ಲಿ ನನ್ನ ನೆಚ್ಚಿನ ಶಿಕ್ಷಕರಾಗಿದ್ದ ನರಸಿಂಹ ಪ್ರಾಸಾದ್ ಸರ್ ಅವರು ನಮಗೆ ಕನ್ನಡ ವಿಷಯವನ್ನು ಬೋಧಿಸುತಿದ್ದರು ಹಾಗು ತುಂಬಾ ಮನೋರಂಜಕವಾಗಿ ಪಾಠವನ್ನು ಹೇಳುತ್ತಿದ್ದರು.
         ನಾನು ಹತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ನಮ್ಮ ಶಾಲೆಯಲ್ಲಿ ಐದು ದಿನಗಳ ಪ್ರವಾಸವನ್ನು ಆಯೋಜಿಸಿದ್ದರು ಆ ಪ್ರವಾಸವದಲ್ಲಿ ತಮಿಳುನಾಡಿನ ಪ್ರಸಿದ್ದ ತಾಣಗಳಾದ ಕಂಚಿ, ಮೇಲ್ಮರವತ್ತುರ್, ಚೆನೈ, ಮಹಬಲಿಪುರಂ ಹಾಗು ಮುಂತಾದ ಪ್ರಸಿದ್ದ ತಾಣಗಳನ್ನು ವೀಕ್ಷಿಸಿದೆ. ಆ ಪ್ರವಾಸವು ನನ್ನ ಜೀವನದ ಅವಿಸ್ಮರಣೀಯ

ಘಟನೆಯಾಗಿ ಉಳಿದಿದೆ.

         ಶಾಲೆಯಲ್ಲಿ ಯೋಜಿಸಿದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಕ್ರೀಡ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತಿದ್ದೆ. ಅದರಲ್ಲಿ ವಾಲಿಬಾಲ್, ಕ್ರಿಕೆಟ್, ಕಬಡಿಯಲ್ಲಿ 

ಜಿಲ್ಲಾ ಮಟ್ಟದಲ್ಲಿ ಪದಕ ಮತ್ತು ಪ್ರಶಸ್ತಿ ಪತ್ರ ವಿಜೇತನಾಗಿದ್ದೆ. ನನ್ನ ಹವ್ಯಾಸಗಳು ಪುಸ್ತಕ ಓದುವುದು ( ಮೊಲೆಗಳಲ್ಲಿ ಮದುಮಗಳು, ಮೂಕಜ್ಜಿಯ ಕನಸುಗಳು, ನಾಕುತಂತಿ, ಎದೆಯಲ್ಲಿ ಅಕ್ಷರ ಬಿದ್ದರೆ ಮತ್ತು ಇತ್ಯಾದಿ ಪುಸ್ತಕಗಳು), ಸ್ನೇಹಿತರ ಜೊತೆ ದೂರ ಪ್ರಯಾಣ ಮಾಡುವುದು ಹಾಗು ಇತರೆ.

         ಹತ್ತನೆ ತರಗತಿಯಲ್ಲಿ ಶೇ.೮೦% ರಷ್ಷು ಅಂಕಗಳನ್ನು ಗಲಿಸಿದೆ ಹಾಗು ಶಾಲಾ ಮಟ್ಟದಲ್ಲಿ ಪ್ರತಿಭಾವಂತ ವಿಧ್ಯಾರ್ಥಿವೇತನವನ್ನು ಪಡೆದಿದ್ದೆ. ಮುಂದಿನ ಪದವಿ ಪೂರ್ವ ವ್ಯಾಸಂಗಕ್ಕಾಗಿ ಮಂಗಳೂರಿನ ಆಳ್ವಾಸ್ ವಿದ್ಯಾಲಯಕ್ಕೆ ಪ್ರವೇಶ ಪಡೆದೆ. ಆ ಕಾಲೇಜಿನ ಶಿಸ್ತು ಬದ್ದಾದ ನಿಯಮಗಳಿಂದ ಜೀವನದ ಪಾಠವನ್ನು ಕಲಿತೆ. ದ್ವಿತಿಯ ಪಿ.ಯು.ಸಿ ಯಲ್ಲಿ ಶೇ.೯೦ ರಷ್ಟು ಅಂಕಗಳನ್ನು ಪಡೆದು ಶಾಲೆಯ ಪ್ರತಿಭಾವಂತ ವಿಧ್ಯಾರ್ಥಿಗಳ ಪಟ್ಟಿಗೆ ಸೇರಿದೆ. ಅಲ್ಲಿನ ವಾತವರಣ ಹೊಸ ಸ್ನೇಹಿತರ ಪರಿಚಯ ಅಲ್ಲಿನ ಬೋಧನಾ ರೀತಿ ನನ್ನ ಜೀವನದ ಮೇಲೆ ತುಂಬಾ ಪ್ರಭಾವ ಬೀರಿದವು.
         ನಂತರ ಉನ್ನತ ವ್ಯಾಸಂಗಕ್ಕಾಗಿ ನನ್ನ ನೆಚ್ಚಿನ ಕ್ರೈಸ್ತ ಕಾಲೇಜಿನಲ್ಲಿ ಪ್ರವೇಶ ಪಡೆದೆ. ಇಲ್ಲಿನ ಬೋಧನ ರೀತಿಯು ಶಿಕ್ಷಕ ವೃಂದದವರು ಹಾಗು ವಿದ್ಯಾರ್ಥಿ ಮಿತ್ರರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದೇನೆ.