ಸದಸ್ಯ:Meghaa128
ನನ್ನ ಹೆಸರು ಮೇಘ ಎಂ. ನಾನು ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನನ್ನ ಪದವಿಯನ್ನು ಮುಂದುವರೆಸುತ್ತಿದ್ದೇನೆ. ನಾನು ಇಂತಹ ಯೂನಿವರ್ಸಿಟಿಯಲ್ಲಿ ಓದುತ್ತಿದ್ದೇನೆ ಎಂದರೆ ಅದು ಕೇವಲ ನನ್ನ ಕುಟುಂಬದವರಿಂದ ಮಾತ್ರ ಸಾದ್ಯ. ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿರುವ ಅಪ್ಪಸಂದ್ರ ಎಂಬ ಗ್ರಾಮದಲ್ಲಿ ಜನಿಸಿದೆನು. ನನ್ನ ತಂದೆಯ ಹೆಸರು ಮುನಿವೆಂಕಟರಮಣಪ್ಪ ಮತ್ತು ನನ್ನ ತಾಯಿಯ ಹೆಸರು ಶಕುಂತಲ. ನನಗೆ ಒಬ್ಬ ಸಹೋದರ ಮತ್ತು ಸಹೋದರಿ ಇದ್ದಾರೆ. ನನ್ನ ಅಣ್ಣನ ಹೆಸರು ಮಧು ಕುಮಾರ್ ಎಂ, ಅವರೂ ಸಹ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ಪದವಿಯನ್ನು ಮುಂದುವರಿಸುತ್ತಿದ್ದಾರೆ. ನನ್ನ ತಂಗಿಯ ಹೆಸರು ವರ್ಷ ಎಂ. ಅವಳು ಓಂ ಶ್ರೀ ಶಾಲೆಯಲ್ಲಿ ೯ನೆ ತರಗತಿಯಲ್ಲಿ ಓದುತ್ತಿದ್ದಾಳೆ. ನಾನು ೧ ರಿಂದ ೫ ರವರೆಗು ನಮ್ಮೂರಿನ ಶಾಲೆಯಲ್ಲಿ ಓದಿದ್ದೆ. ನಾವು ೪ ನೇ ತರಗತಿಯಲ್ಲಿ ಇದ್ದಾಗ ನಾವು ಹೊರಸಂಚಾರಕ್ಕೆ ಹೋಗಿದ್ದೆವು. ಹೊರಸಂಚಾರ ಎಂದರೆ ನಮ್ಮ ಸುತ್ತ ಮುತ್ತಲಿನ ಹಳ್ಳಿಗಳ ಬೆಟ್ಟ ಗುಡ್ಡಗಳು, ಮರ , ಗಿಡಗಳನ್ನು ನೋಡಲು ಹೋಗುವುದು. ಅಲ್ಲಿನ ಸುತ್ತಮುತ್ತಲಿನ ವಾತವರಣ ನೋಡಲು ತುಂಬ ಸೊಗಸಾಗಿರುತ್ತಿತ್ತು. ಅದಕ್ಕೆ ನನಗೆ ಹೊರಸಂಚಾರ ಹೋಗುವುದೆಂದರೆ ನನಗೆ ತುಂಬಾ ಸಂತೋಷವಾಗಿರುತ್ತಿತ್ತು. ಮತ್ತು ನಮ್ಮ ಶಾಲೆಯಲ್ಲಿ ಪ್ರತಿ ವರ್ಷಕ್ಕೊಮ್ಮೆ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳುತ್ತಿದ್ದರು. ನಾನು ೬ನೆ ತರಗತಿಯಲ್ಲಿ ಇದ್ದಾಗ ನಮ್ಮ ಶಾಲೆಯ ಸ್ನೇಹಿತರ ಜೊತೆಗೂಡಿ ಮೈಸೂರಿಗೆ ಹೋದೆವು. ನಾವು ಹೋಗಿದ್ದ ಸ್ಥಳಗಳೆಂದರೆ ಮೈಸೂರಿನ ಅರಮನೆ. ಚಾಮುಂಡಿ ಬೆಟ್ಟ, ಕೆ ಆರ್ ಎಸ್, ಪ್ರಾಣಿ ಸಂಗ್ರಹಣಾಲಯ, ಮುಂತಾದ ಸ್ಥಳಗಳಿಗೆ ಹೋಗಿದ್ದೆವು. ಆ ನೆನಪುಗಳನ್ನು ನಾನು ಇಂದಿಗೂ ಮರೆತಿಲ್ಲ. ನಾನು ೭ನೆ ತರಗತಿಯಲ್ಲಿದ್ದಾಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನಡೆಯುವ ಮಿಲನ ಕಾರ್ಯ ಕ್ರಮದಲ್ಲಿ ಖೋ- ಖೋ ಮತ್ತು ಹಾಡಿನಲ್ಲಿ ಭಾಗವಹಿಸಿದ್ದೆ, ಅಂದೆ ನಾನು ಮೊದಲ ಬಾರಿ ಬೆಂಗಳೂರಿಗೆ ಬಂದಿದ್ದು, ಆ ಕ್ಷಣಗಳನ್ನು ಇಂದು ನಾನು ಮರೆಯಲಿಲ್ಲ. ಅಂತಹ ಮಧುರ ಕ್ಷಣಗಳು ಅವಾಗಿದ್ದವು. ಆ ವರ್ಷ ನಮ್ಮ ಹೊಸಕೋಟೆ ಪ್ರಾಜೆಕ್ಟ್ ಗೆ ಮಿಲನ ಬಹುಮಾನ ಸಿಕ್ಕಿದ್ದರಿಂದ ನಮಗೆ ತುಂಬಾ ಸಂತೋಷವಾಗಿತ್ತು. ನಾನು ೮ನೆ ತರಗತಿಯಿಂದ ೧೦ ನೆ ತರಗತಿಯವರೆಗೆ ಸರ್ಕಾರಿ ಪ್ರೌಡಶಾಲೆ ಜಡಿಗೇನಹಳ್ಳಿಯಲ್ಲಿ ಓದಿದೆ. ನಂತರ ನನ್ನ ಪಿ ಯು ಸಿ ಯನ್ನು ಹೊಸಕೋಟೆಯಲ್ಲಿರುವ ಮಾರುತಿ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದೆನು. ಆ ಕಾಲೇಜಿನ ಮಧುರವಾದ ಕ್ಷಣಗಳು ಮತ್ತೆ ಎಂದಿಗೂ ಬರುವುದಿಲ್ಲ ಅಂತ ನನಗೆ ಅನಿಸುತ್ತದೆ, ಅಷ್ಟೊಂದು ಸುಂದರವಾದ ನೆನಪುಗಳು ಅವು. ಆ ಕಾಲೇಜಿನಲ್ಲಿ ನನಗೆ ಇಷ್ಟವಾದ ವಿಷಯವೆಂದರೆ ಗಣಿತ ಮತ್ತು ಗಣಿತ ಮಾಡಿತ್ತಿದ್ದ ಶಿಕ್ಷಕರೆಂದರೆ ಇಷ್ಟ ಏಕೆಂದರೆ ಅವರು ತುಂಬ ಚೆನ್ನಾಗಿ ಕಷ್ಟವೆನಿಸುತ್ತಿದ್ದ ಗಣಿತ ವಿಷಯವನ್ನು ಸುಲಭವಾಗಿ ಅರ್ಥೈಸುತ್ತಿದ್ದರು. ನಂತರ ನಾನು ಕ್ರೈಸ್ಟ್ ಯೂನಿವರ್ಸಿಟಿಗೆ ನನ್ನ ಪದವಿ ಶಿಕ್ಷಣಕ್ಕಾಗಿ ಸೇರಿದೆ. ಇಲ್ಲಿ ನಾನು ಬಿ ಎಸ್ ಸಿ ಯಲ್ಲಿ ಸಿ ಎಮ್ ಎ ಯನ್ನು ಅಭ್ಯಯಿಸುತ್ತಿದ್ದೇನೆ. ನನ್ನ ಮುಂದಿನ ಗುರಿ ಏನೆಂದರೆ ಎಂ ಎಸ್ ಸಿ ಮಾಡಿ ಒಳ್ಳೆಯ ಉಧ್ಯೋಗವನ್ನು ಸಂಪಾದಿಸಿ ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿ ಕೊಳ್ಳುವುದು.