ಪುಟ:Banashankari.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬಳೆಗಳಿಲ್ಲದ ಕೈ, ಹಾರವಿಲ್ಲದ ಕೊರಳು, ತಿಲಕವಿಲ್ಲದ ಹಣೆ...ಅಮ್ಮಿ ಸೊಗಸಾಗಿ ಹೆರಳು ಹಾಕಬಾರದು. ಹೂ ಮುಡಿಯ ಬಾರದಿನ್ನು, ಮೂಗುಬಟ್ಟನ್ನು ತೆಗೆದಿರಿಸಿದ್ದರು. ಆ ಜಾಗದಲ್ಲೆಯೊಂದು ತೂತು ಮುಖದ ಸೌಂದರ್ಯವನ್ನು ಅಣಕಿಸುತ್ತಿತು. ವಯಸ್ಸಿಗೆ ಮಿನೂರಿದ ಗಾಂಭೀರ್ಯ ಆವಳಲ್ಲಿ ಮನೆ ಮಾಡಿತು-ಖಾಲಿ ಮನೆಯನ್ನು ಹೊಕ್ಕ ಮೌನ ಪಿಶಾಚಿ. ಯಾರಾದರೂ ಬಂದು ಹೊರಗಿಂದ ಕೂಗಿದರೆ ಅಮ್ಮಿ ಇನ್ನು ಬಾಗಿಲ ಬಳಿಗೆ ಬರಲಾಗದು. ಮುಖ ತೂರಿಸಬಾರದು ಯಾರಿಗೂ, ಯಾವ ಪ್ರಶ್ನೆಗೂ ವೀಯಬಾರದು. ರಾಮಚಂದ್ರನ ಮರಣದೊಡನೆಯೇ ಆಗಿತ್ತು ಆಕೆಯ ಸ್ವಾತಂತ್ರದ ಹರಣ. ಒಮ್ಮೆ ಹೀಗಾಯಿತು: ಮುತ್ತಯಿದರಿಬ್ಬರು ಬಂದು ಮನೆಯ ಅಂಗಳದಲ್ಲಿ ನಿಂತು, " ಲಕ್ಷ್ಮಮಮ್ಮೋರೇ..."ಲಕ್ಷ್ಮಮಮ್ಮೋರೇ..." ಕರೆದರು. ಅಮ್ಮಿಯ ಅತ್ತೆ ಹಿತ್ತಿಲ ಕಡೆ ಹೋಗಿದ್ದರು. ಮಾನವ ಜೀವಿಗಳ ಸ್ವರ ಕೇಳಿದ ಅಮ್ಮಿ ಬಾಗಿಲ ಬಳಿಗೆ ನಡೆದಳು. “ಯಾರು? ಬನ್ನಿ..." ಪ್ರಯಾಸ ಪಡುತ್ತ ಸಾಗತದ ಮುಗುಳುನಗೆಯನೂ ಆಮ್ಮಿಯ ಮುಖದ ಮೇಲೆ ಮೂಡಿತು. ಆದರೆ ಹೊರಗಿನಿಂದ ಬಂದ ಉತ್ತರದ ಧ್ವನಿಯೊ! ಅಮ್ಮಿ ಅದನ್ನು ನಿರೀಕ್ಷಿಸಿರಲಿಲ್ಲ.

  • ಓ ನಿನ್ನಾ!..."
ಆ ಮುತ್ತೆದೆಯದ ಮುಖಗಳ ಮೇಲೆ ತಿರಸ್ಕಾರದ ಛಾಯೆ ಇತ್ತು.
ಕಾಣದ ಕೈಯೊಂದು ಕತ್ತು ಹಿಸುಕುತ್ತಿದ್ದರೂ ಅಮ್ಮಿ ಅವರ ಮಾತು ಕೇಳಿಯೂ ಕೇಳಿಸದಂತೆ ಅ೦ದಳು :

" ಬನ್ನಿ ಒಳಕ್ಕೆ ಬನ್ನಿ." ಅವರು ಬರಲಿಲ್ಲ. ಅಷ್ಟೇ ಅಲ್ಲ. ಒಬ್ಬರ ಮುಖವನ್ನೊಬ್ಬರು ನೋಡಿ ವಾಪಸು ಹೊರಟುಹೋದರು. ಅತ್ತೆ ಒಳ ಬಂದವರು ಹೊಲದ ಅಂಚಿನ ಮೇಲೆ ನಡೆದು ಹೋಗುತ್ತಿದ್ದ ಆ ಇಬ್ಬರನ್ನು ಕಂಡರು. ಆದರೆ ಕೂಗಿ ಕರೆಯಲಿಲ್ಲ. "ಯಾವ ತಪ್ಪಿಗೇಂತ ಈ ಶಿಕ್ಷೆ?" ಎಂದರವರು. ಆ ಸ್ವರದಲ್ಲಿ ಸಂಕಟವಿತ್ತು. ಅಮ್ಮಿಗೆ ಆ ಮಾತು ಪೂರ್ತಿ ಅರ್ಥವಾಗಲಿಲ್ಲ. ಏನು ಹೇಳಬೇಕೆಂಬುದೇ ಅವಳಿಗೆ ತೋಚಲಿಲ್ಲ, ಆದರೂ ಧೈರ್ಯಪಡುತ್ತ ಆಕೆ ಕೇಳಿದಳು:

" ಯಾಕತ್ತೆ ಅವರು ಹೊರಟು ಹೋದ್ದು?"
ಒಂದು ಕ್ಷಣ  ಅತ್ತೆ ಕಠೋರ ಧನಿಯಲ್ಲಿ ಕೂಗಾಡಿದರು:
“ಅಷ್ಟೂ ತಿಳಿಬಾರ್ದ ನಿಂಗೆ? ಮನೆಯ ಮಾನ ಕಳೀತಿಯಲ್ಲೇ! ಯಾವ ಕೆಟ್ಟ 

ಘಳಿಗೇಲಿ ಈ ಮನೆಗೆ ಕಾಲಿಟ್ಟಿಯೋ ಮಹರಾಯಿತಿ! ಎಲ್ಲರ ಹೊಟ್ಟೇನೂ ಉರಿಸಿದ ಮೇಲೆ, ಹ್ಯಾಗೆ ನೊಡ್ಕೋಬೇಕೂಂತಾದರೂ ತಿಳಿಬಾರೈ ? ಭಗವಂತ ಯಾಕಾದರೂ ನನ್ನನ್ನ