“ನೀವು ಹೊರಟೇ ಬಿಡ್ತೀರ ಸಾರ್? ನಮ್ಮಕ್ಕನೂ ಹೋದವಾರವೇ ಭಾವನ ಮನೆಗೆ ಹೊರಠೋದ್ಲು.*
ಶ್ಯಾಮಲಾ ಅಲ್ಲಿರಲಿಲ್ಲ, ಹುಡುಗನನ್ನು ಆತ ಕೇಳಿದ:
“ಓದೋಕೆ ಯಾವ ಊರಿಗೆ ಹೋಗ್ರಿಯಪ್ಪಾ ಮುಂದಿನ ವರ್ಷ?"
“ಹಾಸನಕ್ಕೆ ಕಳಿಸ್ತಾರಂತೆ.”
ನಂಜುಂದಯ್ಯ ಕೈಕುಲುಕಿದರು.
"ಊಟಕ್ಕೆ ಇಲ್ಲೇ ಎದ್ಬಿಡಿ.”
“ಊಟವಾಯ್ತು ನಂಜುಂಡಯ್ಯನವರೆ.”
“ಮನಸ್ನಲ್ಲೇನೂ ಇಟ್ಕೋಬೇದಿ ಜಯದೇವ."
“ನಾನೂ ಅದನ್ನೇ ಹೇಳೋಣಾಂತ ಬಂದೆ.”
ಮುಂದಿನ ವರ್ಷ ಬೆಂಗಳೂರಿಗೆ ಹೋಗಲು ನಿರ್ಧರಿಸಿದ್ದ ವಿರೂಪಾಕ್ಷ ಕೊಠಡಿಯವರೆಗಗೂ ಜಯದೇವನ ಹಿಂದೆಯೇ ಬಂದ.
ರಾತ್ರೆಯೇ ಆನಂದವಿಲಾಸದ ಲೆಕ್ಕ ತೀರಿಸಿದ್ದ ಜಯದೇವ, ಮುಂಜಾವದಲ್ಲೆ ಎದ್ದು ಹೊರಡುವ ಸಿದ್ಧತೆ ಮಾಡಿದ. ಆ ತೀರ್ಮಾನ ಮಾಡಿದಂದಿನಿಂದ ಬೆಂಗಳೂರು, ವೇಣು, ಸುನಂದಾ ಹೆಚ್ಚು ಹೆಚ್ಚು ಸಮಿಾಪವಾಗಿದ್ದರು. ಕಾನ ಕಾನಹಳ್ಳಿಯೂ ಕರೆಯತೊಡಗಿತ್ತು,
ಆನಂದ ವಿಲಾಸದಲ್ಲಿ ಗೆದ್ದಲು ಕಾಟವೆಂದುಕೊಂಡು ತಂದಿದ್ದ ಪುಟ್ಟ ಟ್ರಂಕಿನಲ್ಲಿ ಬಟ್ಟೆಬರೆಗಳನ್ನೂ ಪುಸ್ತಕಗಳನ್ನೂ ಆತ ತುರುಕಿದ. ಹಾಸಿಗೆಯನ್ನು ಜಮಖಾನದೊಳಗೆ ಸುರುಳಿಸುತ್ತಿದ. ಬರುವಾಗ ಧರಿಸಿದ್ದು ಪಾಯಜಾಮ-ಷರಟು ; ಈಗ ಧೋತರ-ಜುಬ್ಬ, ಹಳ್ಳಿಯಲ್ಲಿ ಉಪಾಧ್ಯಾಯನಾಗಿ ತಾನು ಹೊಂದಿದ ರೂಪಾಂತರವನ್ನು ಸುನಂದಾ ಕಾಣಬೇಕೆಂಬ ಆಸೆ ಜಯದೇವನಿಗೆ.
ಬೆಳಗಾಗುವುದಕ್ಕೆ ಮುಂಚೆಯೇ ಹೊರಡುವ ಮೋಟಾರು ಹಿಡಿಯಬೇಕೆಂದು ಜಯದೇವ ತನ್ನ ಸಾಮಾನುಗಳನ್ನೆತ್ತಿಕೊಂಡು ಬೀದಿಗಿಳಿದ.
ಪ್ರಕೃತಿ ಪ್ರಶಾಂತವಾಗಿತ್ತು, ಅವನ ಹೃದಯದಲ್ಲೂ ಶಾಂತಿ ನೆಲೆಸಿತ್ತು.