ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬ ಸತೀಹಿತೈಷಿಣೀ (ತ್ರೈಮಾಸಿಕ WVvv \r\n\/\/\/\/\/\/\/\/\/ 11 / 2 // y\/\/\/\n#1 / \\/ \\ An/\/\/\

  1. \/Y

ತಾಪಿತರಿಗೆ ಹಿತವನ್ನುಂಟುಮಾಡುವುದರಲ್ಲಿ ನಿರತನೂ,ಸರ್ವ'ಕರ್ತವ್ಯಾನು ಪ್ಯಾನಶೀಲನೂ, ಆಶ್ರಮಿಯ ಮತ್ತು ದೇಶವಾಸಿಯೂ ಆಗಿರುವ ಮಹಾ ಪುರುಷನನ್ನೇ ಗುರುವಾಗಿ ವರಿಸಬೇಕು' ಎಂಬೀ ಸೂಕ್ತಿ ಯಂತೆ ಸರ್ವಲಕ್ಷಣಸಂಶೋಭಿತರಾಗಿ, ತಮ್ಮ ಲೋಕೋತ್ತರ ಗುಣಗ ಳನ್ನು ತಮ್ಮ ಶಿಷ್ಯವರ್ಗಕ್ಕೂ ಪ್ರಸಾದಿಸಿ,-“ಗುರುವಿನಂತೆ ಶಿಷ್ಯರು' ಎಂಬ ಉಕ್ತಿಯನ್ನು ಸಾರ್ಥಕ್ಯಗೊಳಿಸಲು ತತ್ಪರರಾಗಿರುವರು, ದಯಾ ಘನರಾದ ಇಂತಹ ಸದ್ದು ರುಗಳಲ್ಲಿ ಶಿಷ್ಯವೃತ್ತಿಯನ್ನು ಕೈಕೊಂಡಿರುವ ವರು ಕೂಡ. ಅಲುಬ್ಧಃ ಸ್ಥಿರಗಾತ್ರಶ್ವ ಆಜ್ಞಾಕಾರೀ ಜಿತೇಂದ್ರಿಯಃ | ಆಸ್ತಿ ಕೋ ದೃಢಭಕ್ತಿಶ್ಚ ಗುರ್‌ ಮಂತ್ರೇ ಚ ದೈವತೇ | ಏವಧೋ ಭವೇ ಶಿಷ್ಯ ಇತರೋ ದುಃಖಕೃತ ಗುರೋಃ || ?” ಎಂದರೆ-“ನಿರ್ಲೊ ಭನೂ ಸ್ಥಿರದೇಹನೂ, ಗುರುಗಳ ಆಜ್ಞಾಕಾರಿಯೂ ಜಿತೇಂದ್ರಿಯನೂ ಆಸ್ತಿಕನೂ, ಮತ್ತು ಗುರು, ಮಂತ್ರ, ದೈವಗಳಲ್ಲಿ ದೃಢ ಭಕ್ತಿಯುಕ್ತ ನೂ ಆದವನೇ ನಿಜವಾದ ಶಿಷ್ಯನೆನ್ನಿಸುವನು, ಉಳಿದವರು ಗುರುವಿಗೆ ದುಃಖವನ್ನುಂಟುಮಾಡುವವರೇ ಸರಿ.” ಎಂಬಂತೆ ನಿಜವಾದ ಶಿಷ್ಯಧ ರ್ಮದಲ್ಲಿ ವರ್ತಿಸಬೇಕಾದುದು ಅವಶ್ಯಕವೇ ಆಗಿರುವುದು. ಈ ವಿಚಾ ರದಲ್ಲಿ ನಿಮಗೆ ನಾನು ಹೇಳಬೇಕಾದುದಿಲ್ಲವಾದರೂ, ಈವರೆಗೆ ಪ್ರಕಾ ರಾಂತರ ಭಾವದಲ್ಲಿರುತ್ತಿದ್ದು ಈಗಲೀಗ ನಿಜಸ್ಥಿತಿಗೇರಿಬಂದಿರುವ ನಾನು, ನಿಮ್ಮನ್ನು ಸ್ವಾನುಭವ ಪೂರ್ವಕವಾಗಿ ಎಚ್ಚರಿಸುತ್ತಿರುವೆನು.” ತಾರಾಕಾಂತಬಾಬುಗಳ ಗಂಭೀರ ಮತ್ತು ಕರುಣಾಪೂರಿತವಾ ಕ್ಯಗಳು, ಶಿಷ್ಯರೆಲ್ಲರ ಹೃದಯವೂ ಆನಂದೋತ್ಸಾಹದಿಂದ ಉಬ್ಬಿ ಆನಂದ ಬಾಷ್ಪವನ್ನು ಸುರಿಸುವಂತೆ ಮಾಡಿದುವು.