ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಜಿ $ 1. ” ಕಣ # * ಇಗಣ507 .tr • ' ' FR

  • * * * * * *

" : ==• .'೨ ೬೪ ವಿಶಾಲಾಕ್ಷಿ IT ... ನೋಡಿದ ಉದ್ಯಾನದ ಕೆಲಸದಲ್ಲಿ ತೊಡಗಿದ್ದವಳು, ಹಣೆಯ ಮೇಲಕ್ಕೆ ಬಿದ್ದಿದ್ದ - ತಲೆಗೂದಲನ್ನು ಹಿಂಗೈಯಿಂದ ಹಿಂದಕ್ಕೆ ಸರಿಸಿದಳು, ಸೆರಗು ಜಾರಿತ್ತು, ಕೊಳೆ ಯಾಗಿದ್ದ ಕೈಯಿಂದಲೆ ಅದನ್ನು ಸರಿಪಡಿಸಿದಳು. ಮುಖವೆಲ್ಲ ಬೆವರೊಡೆದು .. ಕೆಂಪಡರಿತ್ತು. ಮೂಗಿನ ಮೇಲಿದ್ದ ಕನ್ನಡಕ ತುಸು ಕೆಳಕ್ಕೆ ಬಂದಿತ್ತು. ಆ ಆಗಂತುಕ, ನಗು ತಡೆಯಲಾರದೇ ಹೋದ, ಗಾಂಭೀರ್ಯದ ತೆರೆ ಸರಿದು ತುಟಿಗಳ ಮೇಲೆ ಮಂದಹಾಸ ಮೂಡಿತು. ಒಂದು ಕ್ಷಣ ಮಾತ್ರ. ಆ ಮುಗುಳು ನಗೆಯನ್ನು ಕಂಡಂತಾಗಿ ವಿಶಾಲಾಕ್ಷಿಯ ಕಣ್ಣಲ್ಲಿ ಕಿಡಿ ಹಾರಿತು. ಒಂದು ಕ್ಷಣ ಮಾತ್ರ.. ಆಗಿನ ತನ್ನ ಇರುವಿಕೆಯ ಅರಿವಾಗಿ, ಅವಳೂ ನಸುನಕ್ಕಳು. ಆದರೆ, ಯುವಕ ಅಷ್ಟರಲ್ಲಿ ಮತ್ತೆ ಗಂಭೀರನಾಗಿದ್ದ. ಯಾರುಬೇಕು ? – ಎಂದು ಕೇಳಲು ವಿಶಾಲಾಕ್ಷಿ ಬಾಯಿ ತೆರೆಯುತ್ತಿ ದ್ದಂತೆಯೇ, ಪ್ರಶ್ನೆ ಅವನಿಂದ ಬಂತು : “ಎಸ್, ವಿಶಾಲಾಕ್ಷಿಯವರ ಮನೆ ಇದೇನಾ ?” “ಹೌದು, ಇದೇ.” ಕಕ್ಕಾವಿಕ್ಕಿಯಾಗಿದ್ದ, ಆ ಸ್ಥಿತಿಯಲ್ಲಿ, ಈತ ಯಾರಿರಬಹುದೆಂದು ಊಹಿ ಸುವ ಗೊಡವೆಗೂ ಅವಳು ಹೋಗಲಿಲ್ಲ. ಈಕೆಯೇ ವಿಶಾಲಾಕ್ಷಿಯಲ್ಲವಷ್ಟೆ ? -ಎಂದು ಗೊಂದಲದಲ್ಲಿ ಬಿದ್ದ ಯುವಕ, ಹೇಗೆ ಮುಂದುವರಿಯಬೇಕೆಂದು ಯೋಚಿಸುತ್ತಿದ್ದಂತೆಯೇ, ಅವಳು ಕೇಳಿದಳು :

  • “ಏನು ಬೇಕಾಗಿತ್ತು ?” »

“ವಿಶಾಲಾಕ್ಷಿಯವರ ಜತೆ ಸ್ವಲ್ಪ ಮಾತಾಡಬೇಕು. ಇದಾರೇನು ?”. ಹೊರಗೆ ಬೀದಿಯಲ್ಲೇ ನಿಲ್ಲಿಸಿ, 'ಯಾವ ವಿಷಯ ? ನೀವು ಯಾರು ?” ಎಂದು ಕೇಳುವುದು ಶಿಷ್ಟಾಚಾರವಾಗಿರಲಿಲ್ಲ. ಗಟ್ಟಿಮುಟ್ಟಾದ ಎತ್ತರದ ಆಕೃತಿ. ಬಿನ್ನಿ ಬಟ್ಟೆಯ ಕಂದು ಬಣ್ಣದ ಪ್ಯಾಂಟು, ಅದರೊಳಕ್ಕೆ ಇಳಿಬಿಟ್ಟಿದ್ದ ಬಿಳಿಯ `ಶರಟು, ಗದಗು ಚಪ್ಪಲಿ ಕಾಲಲ್ಲಿ, ತುಸು ಕಿರಿದಾಗಿ ಕತ್ತರಿಸಿದ್ದ ಕ್ರಾಪು. ಎಣ್ಣೆಗಪ್ಪು ಮೈ, ಸುಸಂಸ್ಕೃತನಂತೆ ಮುಖಭಾವ, as :-1-4•••&rs $444444-:44 - -424 - ker ----ಮ೬೬ - - :: ೩೬ -- YL... 1 !! "

  • ಹಿತ

... : ....Skiರ್d ನ .wwk 1 ವಾ ಜಿಗಜ | • P। +++++++ -= ' &. }}} 2,4:11 ::ker (: ಅಷ: . . €t - # {P:- kut+4-: + •••••