88 ಸತೀಹಿತೈಷಿಣೀವನ್ನೂ, ನಾಗರಿಕತೆಯ ತಿರುಳನ್ನೂ ತಿಳಿದಿರುವ ಕಲೆಕ್ಟರರ ಹಿರಿಯ ಸೊಸೆ; ಸಾಲದುದಕ್ಕೆ ನಿನ್ನ ಪತಿರಾಜನೆಂದರೆ, ನವನಾಗರಿಕತೆಯ ಮ౦ತ್ರಮೂತಿ౯ ಆಗಿರುವನು. ಇಂತವರೆಲ್ಲರಿಂದಲೂ ಶಿಕ್ಷಿತೆಯಾಗಿರುವ ನಿನ್ನಲ್ಲಿ ನಿಪುಣತೆಯನ್ನು ಕೇಳಬೇಕೆ? ಸುರಸೆ:-ಲಜ್ಜೆಯಿಂದ ತಲೆತಗ್ಗಿಸಿ,... ನಂದಿನಿ! ನೀನು ಹಾಸ್ಯಮಾಡುವುದನ್ನು ಬಿಡುವುದೂ ಇಲ್ಲ, ಅವರು ತಮ್ಮ ಮೋಜುಗಾರಿಕೆಯನ್ನು ಕಡಿಮೆ ಮಾಡುವಂತೆಯೂ ಕಾಣಲಿಲ್ಲ. ಇದಕ್ಕೆ ನಾನೇನು ಮಾಡಬೇಕು?' ನಂದಿನಿ:- ಪರಿಹಾಸದಿಂದ,-'ನೀನು ಮಾಡುವುದಿನ್ನೇನು, ತಂಗಿ? ಮನೆಯಲ್ಲಿ ಅಳು-ಕಾಳುಗಳಿಗೆ ಕೊರತೆಯಿಲ್ಲ. ಕೆಲಸ ಮಾಡಬೇಕೆಂಬ ಕಳವಳವು ಹತ್ತಿರಕ್ಕೂ ಬರುವಂತಿಲ್ಲ. ಕುಳಿತ ಕತೆಗೆ ಬೇಕೆಂದರೂ ಕವಳವು ಸಿದ್ಧವಾಗುವುದು, ಮತ್ತು ನೀರು ಮಡಿ ಮುಂತಾದವುಗಳಿಗೆಂದರೆ, ಮನೆಯಲ್ಲಿ ಹೆಜ್ಜೆ ಹೆಜ್ಜೆಗೂ ನಲ್ಲಿಗಳಿವೆ, ಇಷ್ಟೆಲ್ಲಾ ಅನುಕೂಲತೆಗಳಿದ್ದೂ ನೀನು ಇಷ್ಟೇಕೆ ಕಷ್ಟ ಪಡಬೇಕು ? ಬೊಜ್ಜು ಬೆಳೆವಂತೆ ಕುಳಿತೆಡೆಯಲ್ಲಿಯೇ ಕುಳಿತು, ಲಲ್ಲೆ ಚೆಲ್ಲಾಟಗಳಲ್ಲಿ ಕಲೆತು, ಅವರಿವರ ಮನೆಯಾಡಳಿತಗಳಲ್ಲಿ ನೂರಾರು ಕೊರತೆಗಳನ್ನು ಕಲ್ಪಿಸಿ ಹೇಳಿ ನಲಿಯುತ್ತ, ಆಶ್ರಿತವರ್ಗದವರನ್ನು ಬಯ್ಯುತ್ತ, ತಮ್ಮ ಕಾಲ ಮತ್ತು ಧನವನ್ನು ವಿಷಯ ಪ್ರಸಂಗದಲ್ಲಿಯೂ, ವೇಷ ಭೂಷಣಾದಿ ವಿಡಂಬನ ಕಾರ್ಯದಲ್ಲಿಯೂ ವಿನಿಯೋಗ ಮಾಡುತ್ತಿರುವ ಹಣಗಾರರ ಮನೆಯ ಹೆಂಗಸರನ್ನು ನೋಡಿ, ಅವರಂತೆಯೇ ನೀನೂ ಒಬ್ಬಳಾಗಿರಲು ಪ್ರಯತ್ನ ಮಾಡು, ಬೆಳಗಾಯ್ತೆ౦ದರೆ ಹಾಸಿಗೆಯಿಂದೇಳುವುದೇ ತಡೆ, ಹೊಟ್ಟೆಯ ಪಾಡನ್ನು, ಎಂದರೆ ಆಹಾರ ಮತ್ತು ಪಾನೀಯಗಳನ್ನು ಬೇಗಬೇಗ ಮುಗಿಸಿಕೊಂಡು, ನಿನ್ನ ಪತಿಯೊಡನೆ ಪ್ರಸಂಗಕ್ಕೆ ಮೊದಲು ಮಾಡು; ಆಬಳಿಕ ಶೃಂಗಾರ ಮಾಡಿಕೊ, ಅದಾಯಿತೆಂದರೆ, ಪರಿಮಳವನ್ನು ಲೇಪಿಸಿಕೊಂಡು, ವೀಣೆ-ತಂಬೂರಿ --ಪಿಟೀಲು--ಹಾರ್ಮೋನಿಯಮ್-ಪಿಯಾನ ಮೊದಲಾದ ವಾದ್ಯವಿಶೇಷಗಳನ್ನು ಮುಂದಿಟ್ಟು, ಒಂದೊಂದರಲ್ಲಿ ಒಂದೊಂದು ಚರಣವನ್ನಾದರೂ ನುಡಿಯಿಸು; ಅಬಳಿಕ ಕಸೂತಿ-ಮಣೆ-ಹೆಣಿಗೆ-ಬೆತ್ತದ ಕೆಲಸಗಳನ್ನೂ (ಅದರಲ್ಲಿ ಅಷ್ಟು ನಿರ್ಬಂಧವಿಲ್ಲ; ಬೇಕಾಗಿದ್ದರೆ) ಮಾಡು. ಇಷ್ಟೆಲ್ಲವನ್ನೂ ಮಾಡುತ್ತಿದ್ದರೂ, ನಡುನಡುವೆ ಹೊಟ್ಟೆಗೆ
ಪುಟ:ಮಾತೃನಂದಿನಿ.djvu/೧೦೨
ಗೋಚರ