೧೧೨ ಸತೀಹಿತೈಷಿಣಿ (ಿಮಾಕಸಿಕ ನನ್ನ ಮುಂದಿನ ನಡತೆಯನ್ನು ಹೇಗೆ ಸುಧಾರಿಸಿಕೊಳ್ಳ ಬೇಕೆಂಬುದೇ ನನಗಿದಿನದ ಚಿಂತೆಯಾಗಿದೆ. ಕುಮದ:-ಮಧುಮಿತ್ರ ! ಮೂಲವನ್ನು ತಿಳಿಯ ಹೇಳದೆ ಕಾಲಕಳೆಯುತ್ತಿರುವೆ. ಪ್ರವಾಸವನ್ನು ಮುಗಿಸಿ ಕೊಂಡು ಬಂದ ಮಿತ್ರನನ್ನು ಸ್ವಾಗತಿಸುವದೆಂದರೆ ಇದೇ ಅಹುದೇನು ? ಮಧು: ಕುಮುದ ! ನೀನೂ ನನ್ನಲ್ಲಿ ಆಗ್ರಹಿಸುವೆಯಾ ? - ಅಷ್ಟು ಮಟ್ಟಿಗೆ ಕಾಠಿಣ್ಯವನ್ನು ವಹಿಸಬೇಡ. ಮೊದಲೇ ನಾನು ಮರ್ಮಾ೦ಶಿಕಯಾತನೆಯನ್ನು ಅನುಭವಿಸುತ್ತಕುಮುದ:ಅದೇನೆಂದು ಕೇಳಿದರೆ ಹೇಳದೆ, ಸುಮ್ಮನೆ ನಿಭ್ರಾಂ ತನಂತೆ ಹೇಳತ್ತಿರುವೆಯಲ್ಲ? ಮಧು: ಹಾಗಿದ್ದರೆ ಇದೇನೋಡು ; ನಾನು ಪೂರ್ಣಕಲೆಯ ದಯೆಯನ್ನು ಪ್ರಾರ್ಥಿಸಿ ಬರೆದಿದ್ದ ಪತ್ರದ ಪ್ರತಿಯೇ ಇದು ಇದಕ್ಕೆ ಅವಳಿಂದ ದೊರೆತ ಉತ್ತರವೇ ಅದು. ಇವೆರಡನ್ನು ನೋಡಿ ನೀನೇ ಸಮಾಧಾನವನ್ನು ಹೇಳು. ಕುಮುದ:-ಎರಡು ಪತ್ರಗಳನ್ನೂ ಕೈಕೊಂಡುನೋಡಿ, “ಮ ಧುಮಿತ್ರ ! ಈ ಪತ್ರವ್ಯವಹಾರದಲ್ಲಿ ಪ್ರವರ್ತಿಸುವಂ ತೆ ನಿನಗೆ ಬೋಧಿಸಿದವರಾರು?' ? ನಳಿನೀ:-ಏನಾಯಿತು ? ಕಾರ ಸಾಧನೆಯಾಗಬೇಕಾದರೆ ಪ್ರ ಯತ್ನವೂ, ಉತ್ತರ ಪ್ರತ್ಯುತ್ತರ ಸಂಭಾಷಣೆ ಮೊದ ಲಾದ ವ್ಯವಹಾರವೂ ನಡೆಯಬೇಕಲ್ಲವೆ ? ಕುಮುದ:-ನಿಜ ! ಆದರೂ ವಿಚಾರ ಮಾಡಬೇಡವೆ ? ಹಿರಿ ಯರಿಗೆ ತಿಳಿದರೆ ಪರಿಣಾಮವೇನಾಗಬಹುದು ? ಈ
ಪುಟ:ಪೂರ್ಣಕಲಾ.djvu/೧೩೦
ಗೋಚರ