ನಲಸಂ|| ಮಾರ್ಗಶಿರ) ಪೂರ್ಣಕಲಾ ೧೧
- * * * * * * * * * *
www vs ಮಾತ್ರ ಅವಕಾಶಕೊಟ್ಟು ನನ್ನನ್ನು ಬೀಳ್ಕೊಡು ನಾನು ಅಜ್ಜಿಗೆ ಹೇಳಿ ಬೇಗ ಬರುತ್ತೇನೆ. ” ಕುಮುದೆ:ತಲೆಯನ್ನು ಕೊಂಕಿಸಿ ' ಬಲ್ಲೆ-ಬಲ್ಲೆ -ನಾನಿದೆಲ್ಲವನ್ನೂ ಚನ್ನಾಗಿ ಬಲ್ಲೇ! ಶಾರದೆಯು ತಾಯಿಯ ಬಳಿಯಲ್ಲಿ ಒಂದುಮಾ ತನ್ನು ಹೇಳಿ, ನಾಲ್ಕು ನಿಮಿಷದಲ್ಲಿ ಬರುತ್ತೇನೆಂದು ಹೋದಳು. ಇನ್ನೂ ಬಂದಿಲ್ಲ. ನಿನ್ನನ್ನೂ ಬಿಟ್ಟು ಬಿಡಬೇಕೋ ? ಅದಾಗ ದು! ನೀವಿಬ್ಬರೂ ಒಂದೇ ಬಗೆಯವರು, ಕುಮುದೆಯ ಮಾತಿಗೆ ಪ್ರತಿಯಾಗಿ ಹೊರಗಡೆಯಿಂದ ಹೀಗೆ ಉತ್ತರವು ಹೊರಟಿತು. “ ಚಿಂತೆಯಿಲ್ಲ, ಕುಮದಾದೇವಿಯರೇ ! ನಾವಿಬ್ಬರೂ ಒಂದೇ ಬಗೆ ಯವರೇ ಅಹುದು!ಇಬ್ಬರನ್ನೂ ಬಿಟ್ಟು ಕೊಡಬಾರದೇಕೆ? ನಿಮ್ಮ ಬಗೆಗೆ ಸರಿಬಾರದವರಲ್ಲಿ ನೀವೇಕೆ ಇಷ್ಟು ಬಲಾತ್ಕರಿಸುವುದು , ಕುಮುದೆಯು ಪೂರ್ಣಕಲೆಯನ್ನು ಹಿಡಿದದ್ದಂತೆಯೇ ಶಾರದೆಯನ್ನು ಕೂಗಿ ಹೇಳಿದಳು: ( 6 ಬಂದೆಯೇನು ಶಾರದೇ ! ಹೊಂಚಿನಿಂತು ಕೇಳುವ ಬುದ್ಧಿ, ನಿನ ಗೆಂದಿನಿಂದ ಅಭ್ಯಾಸವೋ !? ಶಾರದೆ:-ನೀನೆಂದಿನಿಂದ ನಮ್ಮನ್ನು ಕಡೆಗಣಿಸುವದನ್ನು ಕಲಿತೆಯೋ ಅಂದಿನಿಂದಲೇ ನಮಗೂ ಇದರ ಅಭ್ಯಾಸ. ಪೂರ್ಣಕಲಾ: ಶಾರದಾ! ಹೊರಗೆ ನಿಂತೇನು ಮಾಡುವೆ ? ಒಳಗೆಬಾ" ಕುಮದೆ:-ಇನ್ನೇನಮ್ಮ ಶಾರದೆ ? ಕಲೆಯೇ ಕೂಗುತ್ತಿರುವಳು ಏಕೆ ಹೊರಗೆ ನಿಂತಿರಬೇಕು ? ನನಗಾಗಿ ಬಾರದಿದ್ದರೂ ಕಲೆಯಮೇಲಿನ ಮರುಕದಿಂದಾದರೂ ಒಳಗೆ ಬರಬಹುದಲ್ಲವೆ ?