ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

43

                      ಮಾತೃನಂದಿನಿ
ನಂದಿನಿ:-ಲಕ್ಷವೊಂದೇ ನಾಕೇ ? ಎರಡಾದರೆ...........?

ಅಚಲ:- ಆದಾದರೆ ಮತ್ತೂ ಸೊಗಸು !ಹಾಗಿದ್ದರೆ ಈಗಲೇ ಹೇಳ ಬಿಡು ! ನಂದಿನಿ:-ಹೇಳಬೇಕೇ? ಆಗಲಿ; ಕೊಡಬಹುದು. ಆದರೆ ಅಷ್ಟಕ್ಕೆ ಅಶಕ್ತರಾಗಿದ್ದರೋ? ಅಚಲ:-ಗೊತ್ತಿಲ್ಲವೇ? ಸ್ಥಿರ-ಚರ-ಸ್ವತ್ತುಗಳನ್ನೆಲ್ಲಾ ಮಾರುವುದು; ಸಾಲದಿದ್ದರೆ ಮಕ್ಕಳನ್ನು ಹೆರವರಿಗೆ ದತ್ತಕೊಡುವುದು, ಅದೂ ಸಾಲದಿದ್ದರೆ ಹೆಂಡಿರನ್ನು ಕಂಡವರ ಪಾಲು ಮಾಡುವುದು; ಹಾಗೂ ಸಾಲದೆಂದರೆ, ತಾನುಕೂಡ ಚಂಡಾಲರ ಆಳಾಗಲೊಪ್ಪಿಕೊಳ್ಳುವುದು, ಮತ್ತೇನು ? ನಂದಿನಿ:-ಮತ್ತೇನು? ಎಲ್ಲವೂ ನಡೆಯತಕ್ಕವುಗಳೇ ಆಗಿವೆ. ಆಗಲಿ; ಮಾಡಿರಿ! ಸ್ನೇಹಲತಾದೇವಿ ಹತ್ತಿಸಿದ ಕಿಚ್ಚು, ಇನ್ನೂ ಅಳಿಸಿ ಹೋಗಿಲ್ಲ ವಷ್ಟೆ?

  • ಅಚಲ:- ಅಳಿಸಿಯೂ ಇಲ್ಲ; ಅಳಿಸುವಂತೆಯೂ ಇಲ್ಲ. ಅದು, ಬರುತ ಬರುತ ನಾಲ್ಕಾರು ಕಡೆಗಳಿಗೂ ಹಬ್ಬುತ್ತಿದೆ. ಕೈಯಿಂದಾದಷ್ಟೂ ಅದನ್ನು ಅರಿಸಬೇಕೆಂಬುದೇ ನಾನು ಕೇಳುತ್ತಿರುವ ಲಕ್ಷಕ್ಕೆ ಕಾರಣ.

ನಂದಿನಿ:-ಹೇಗೆ? ಅಚಲ:-ಹೇಗೆಂದರೆ, ಹಣಕ್ಕಾಗಿ ಹೆಣಗಾಡಿ ಸಾಯುತ್ತ, ತನ್ನ ತಮ್ಮ ಮಕ್ಕಳನ್ನೇ ಮಾರುತ್ತಿರುವ ಈ ಕಾಲದ ಮಹಾಜನರ ಕೈ ಕಾಲುಗಳಿಗೆ ಬೇಡಿಗಳನ್ನು ತೊಡಿಸಲಿಕ್ಕೂ, ಲಜ್ಞಾ-ಭಯಗಳಿಲ್ಲದೆ ದಲ್ಕಿರಿದು,ವರದಕ್ಷಿಣೆ ಕೊಟ್ಟರೆ ನಿಮ್ಮ ಮಗಳನ್ನು ನಮ್ಮಮಗನಿಗೆ ಕೊಳ್ಳುವೆವೆಂದಾಡುವವ೯

ಕಾರಿಗಿಸಿದ ಸೀಸವನ್ನು ಸುರಿಸಲಿಕ್ಕೂ ತಗಲುವಕೊಡಬೇಕೆಂಬುದೇ-

ನಂದಿನಿ:-ಹಾಗೆ ಮಾಡಬಲ್ಲೆಯಾದರೆ ಸಂತೋಷದಿಂದ ಕೊಡಲಾ ದೀತು. ಆಗಲಿ; ಸ್ವರ್ಣಗೆ ವರನಾಗುವೆಯೋ ? ಅಚಲ:-ಆಗುವಂತಿಲ್ಲ. ನಂದಿನಿ:-ಏಕೆ? ಒಪ್ಪಿಲ್ಲವೋ ? ಅಚಲ:-ಒಪ್ಪಿಲ್ಲವಾದುದರಿಂದೆಯೇ ಹಾಗೆ ಹೇಳಿದವುದು.