ಸಾಧ್ವೀಶಿರೋಮಣಿಯಾದ ಈ ದೇವಕಿಯ ಎಂಟನೇ ಗರ್ಭದಲ್ಲಿ ಜನಿ
ಸುವ ಬಾಲಕನು ನಿನ್ನನ್ನು ಸಂಹರಿಸುವನೆಂದು ತಿಳಿ!
(ಎಂದು ನುಡಿದ ಅಶರೀರವಾಣಿಯನ್ನು ಕೇಳುತ್ತಲೇ ಕಂಸನು
ಸ್ವಲ್ಪ ಹೊತ್ತು ಭ್ರಾಂತನಾಗಿದ್ದು ತೀವ್ರ ಕೋಪೋದ್ದೀಪಿತನಾಗಿ, ಒರೆ
ಯಿಂದ ಕತ್ತಿಯನ್ನು ಸೆಳೆದು ಝಳಿಪಿಸುತ್ತ ದೇವಕಿಯನ್ನು ಸಂಹ
ರಿಸ ತೊಡಗುವನು.)
ಕಂಸ:-ಆಹಾ ! ಎಷ್ಟು ಭಯಂಕರವಾದ ವರ್ತಮಾನವನ್ನು
ಕೇಳಿದೆನು! ಕ್ಷಣಕಾಲಕ್ಕೆ ಹಿಂದೆ ಯಾರನ್ನು ನಾನು ಪ್ರೀತಿಸುತ್ತಿ
ದ್ದೆನೋ ಅಂತಹ ನನ್ನ ಒಡಹುಟ್ಟಿದವಳೇ ನನ್ನ ಮರಣಕ್ಕೆ ಕಾರಣಭೂ
ತಳಾಗಿರುವಳಲ್ಲಾ ! ಈಗ ಮಾಡತಕ್ಕದ್ದೇನು? (ಎಂದು ಕ್ಷಣಮಾತ್ರ
ಯೋಚಿಸಿ, ಪುನಃ ಧೈರ್ಯವನ್ನು ತಾಳಿ) ಛೀ ! ಛೀ ! ದುರ್ಬಲರಾದ
ಹೇಡಿಗಳಿಗೆ ಸಹಜವಾದ ಈ ಅಧೈರ್ಯವು ನನಗೇಕೆ ಬಂದಿತು? ದಂಡಧರ
ನಾದ ಯಮನನ್ನು ಕೂಡಾ ತುಂಡುತುಂಡಾಗಿ ಕತ್ತರಿಸತಕ್ಕ ಉದ್ದಂಡ
ಪರಾಕ್ರಮಶಾಲಿಯಾದ ನನಗೆ ಯಾವುದು ತಾನೇ ಅಸಾಧ್ಯವು? "ಆತ್ಮ
ಲಾಭಾನ್ ನಪರಂವಿದ್ಯತೇ!” ಎಂಬಂತೆ ಮೊದಲು ನನ್ನ ಕ್ಷೇಮವನ್ನು
ನೋಡಿಕೊಂಡಲ್ಲವೇ ನಂತರ ಮಿಕ್ಕವರ ಕ್ಷೇಮವನ್ನು ನೋಡಬೇಕು!
ಇವಳು ನನ್ನ ತಂಗಿಯಾದರೇನು ? ಯಾರಾದರೇನು ? ನನ್ನ ಮರಣಕ್ಕೆ
ಕಾರಣಭೂತಳಾದುದರಿಂದ ನನ್ನ ಪಾಲಿಗೆ ಶತ್ರುವೇ ಸರಿ! ರೋಗಶೇಷ
ವನ್ನೂ ಶತ್ರುಶೇಷವನ್ನೂ ಇರಿಸಬಾರದೆಂದು ಮಹಾತ್ಮರು ಹೇಳುವರು.
ಆದುದರಿಂದ ಇವಳನ್ನು ನನ್ನ ಖಡ್ಗಕ್ಕೆ ಈಗಲೇ ಬಲಿಕೊಡುವೆನು!
(ಎಂದು ಮೇಲಕ್ಕೆಹಾರಿ ದೇವಕಿಯ ಜಡೆಯನ್ನು ಪಿಡಿದು ರಥ
ದಿಂದೀಚೆಗೆ ಸೆಳೆದು ಗರ್ಜಿಸುವನು.)
ಕಂಸ:- ರಾಗ-ತೋಡಿ-ಮಿಶ್ರತಾಳ,
ಆಹ! ನೀನೆಯೆನ್ನಪಾಲಿಗೆ ಮೃತ್ಯುವಾದೆಯಾ ?||ಪ||
ಬಹುಮಾತೇಕೆ ನಿನ್ನನ್ನು ಸಂಹರಿಸುತಲಿ ನಿರ್ಭೀತನಾಗುವೆನು|| ಆಹ || ಅ-ಪ॥
ಬಗೆಯುತ ಜನಗಳು ನುಡಿವರು ಪರಿಪರಿ ಹಗಣರಣವೆನ್ನ ಬಾಳು! ಜಗ
ದೊಳಗನುಜಳ ತನುಜನ ಕರದೊಳು ಮಡಿಯುವ ನಿವನೆನುತಂ| ಹಗೆ
ಗಳು ನಗುವರು ಮಿಗೆ ಪರಿಹಾಸದಿ ಬಗೆಬಗೆ ದೂಷಿಸುತಂ ||ಆಹ||