ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಕೃಷ್ಣಲೀಲೆ

ರೌದ್ರರಸ, ಭಯಾನರಕಸ, ಶಾಂತರಸಗಳೆಂಬ ನವರಸಗಳೂ ತುಂಬಿ
ರುವುವೇ?
     ಕರುಣಾ:-ಪ್ರಿಯೆ-ಕೇಳು !

           ರಾಗ-ಕಾಂಭೋಜಿ- ಅಟತಾಳ.
   ಆವರಸಕೋರಿದರೆ ಆರಸವಿರುವುದು! ||ಸ||
   ದೇವದೇವನ ದಿವ್ಯ ಲೀಲೆಯೋಳು ರಮಣೀ||ಆವರಸ||ಅ- ಪ||.
   ಅರಸರಿಗೆ ವೀರರಸ | ವಿಪ್ರರಿಗೆ ವೇದರಸ | ಪರಮಯೋಗೀಂದ್ರರಿಗೆ ತತ್ವ
   ರಸವು| ವಿರಹಿಗಳಿಗರಿಯೆ ಶೃಂಗಾರರಸ ಕಾಣುವುದು | ಪರಮಪುರುಷನ
   ಚಿತ್ರ ಚರಿತೆಯೊಳು ಸುದತೀ || ಆವರಸ ||
   ಅರಿಗಳಿಗೆ ರೌದ್ರರಸ | ಗುರುಗಳಿಗೆ ಶಾಂತರಸ | ಸುರನರರೊಳಮಲರಿಗೆ
   ಭಕ್ತಿರಸವು|| ನಿರತಶಿವರಾಮ ಸಂತೋಷಕಾರಣನಾದ ಹರಿಮುಕುಂದನು
   ಸರ್ವ, ರಸಭರಿತನಬಲೇ||ಆವರಸ||

    ಆದುದರಿಂದ ನಿಖಿಲ ರಸಾಮೃತಮೂರ್ತಿಯಾದ ಶ್ರೀ ಕೃಷ್ಣವರ
ಮಾತ್ಮನನ್ನು ಯಾರು ಯಾರು ಯಾವತೆರನಾಗಿ ಭಾವಿಸುವರೋ
ಅವರವರಿಗೆ ಆಯಾತೆರನಾದ ರಸವೇ ಕಾಣುವುದು! ಆಶ್ರಿತರಿಗೆ ಕಲ್ಪ
ತರುವಾದ ಶ್ರೀ ಕೃಷ್ಣಮೂರ್ತಿಯಲ್ಲಿ ನಿಷ್ಕಳಂಕವಾದ ಭಕ್ತಿಯುಳ್ಳ
ವರಿಗೆ, ಆತನು ಅಪ್ರಾಕೃತ ದಿವ್ಯಮಂಗಳಮೂರ್ತಿ ಯಾಗಿಯೇ ಕಾಣು
ವನು !

  ಕಮಲೆ:-ಪ್ರಿಯಾ ! ಹಾಗಾದರೆ ನಾವು ಧನ್ಯರೇ ಸರಿ ! ಪರಮ
      ಪಾವನವಾದ ಗಂಗಾಜಲವು ಸುಲಭ ಸಾಧ್ಯವಾಗಿ ಲಭಿಸುವಲ್ಲಿ ಅದನ್ನು
      ತೊರೆದು, ಕಸದಗುಂಡಿಯ ನೀರನ್ನು ಬಯಸತಕ್ಕವರು ಮಂದಮತಿ
      ಗಳಲ್ಲವೆ ?

   ಕರುಣಾ:-ಆಮಾತಿನಲ್ಲಿ ಸಂಶಯವೇನಿದೆ ?

   ಕಮಲೆ:-ವರಂತು ಸತ್ಕಾಲಕ್ಷೇಪ ವಿನೋದಿಗಳೂ, ಅನನ್ಯವಾದ
ಭಗವದ್ಭಕ್ತಿಯುಳ್ಳವರೂ, ರಸಜ್ಞಶೇಖರರೂ ಆದ ಸಭ್ಯಮಹಾಶಯ
ರನ್ನು "ಶ್ರೀ ಕೃಷ್ಣಲೀಲೆ" ಯಿಂದಲೇ ಸಂತೋಷಪಡಿಸಬಹುದಲ್ಲವೆ ?

   ಕರುಣಾ: ನಿಶ್ಚಯ! ಹಾಗೆಯೇ ಮಾಡೋಣ!
 ಎಂದು ಮಾತನಾಡುತ್ತಿರುವಾಗ್ಗೆ ವೀಣಾಗಾನವು ಕೇಳಿಸುವುದು.