೬೯ತೃತೀಯಾಂಕಂ.
ವಿದೂಷಕನು, ಏಕಾಕ್ಷಿ, ಗಜಕರ್ಣಿ, ಲಂಬೋದರಿ, ದೀರ್ಘನಾ
ಸಿಕೆ, ವಕ್ರವದನೆ ಮುಂತಾದ ವಿಚಿತ್ರ ಸುಂದರಿಯರು ಪ್ರವೇಶಿಸಿ, ಕಂಸ
ನಿಗೆ ನಮಸ್ಕರಿಸುವರು.
ಕಂಸ:-ಎಲೌ ಚೆಲುವೆಯರೆ ! ಈ ನಮ್ಮ ಸಭಾಸದರನ್ನು
ಇಲ್ಲ ನಿಮ್ನ ನರ್ತನ ಗಾಯನಾದಿಗಳಿಂದ ಸಂತೋಷಗೊಳಿಸಿರಿ.
ನರ್ತನಾಂಗನೆಯರು:-ಅಪ್ಪಣೆ.
ಏಕಾಕ್ಷಿ:-ತನ್ನ ಒಂಟೆಗಣ್ಣಿಂದ ಸಭೆಯನ್ನೆಲ್ಲಾ ಒಂದು ಸಾರಿ
ಪರಿಕಿಸುವಳು.
ವಿದೂಷಕ:-ಆಹಾ ! ಈ ವಿಲಾಸಿನಿಯ ಅಪಾಂಗ ವೀಕ್ಷಣವು
ಕಾಕಾಸುರನ ದೃಷ್ಟಿಪಾಟಕ್ಕಿಂತಲೂ ಬಹಳ ನಯವಾಗಿರುವುದು.
ವಕ್ರವದನೆ:-(ತನ್ನ ನೆತ್ತಿ ಬಾಯಿಂದ) ಸಸ್ಸಸ್ಸಸ್ಸಸ್ಸಭಿಕರಿಗೆ
ದದ್ದದ್ದದ್ದದ್ದಂಡಗಳು !
ವಿದೂಷಕ-ಆಹಾಹಾಹಾಹಾ ! ಏನು ವಾಕ್ಶುದ್ದಿ ! ಏನು ಕಥೆ !
(ಚಾರನು ಪ್ರವೇಶಿಸುವನು)
ಚಾರ:-ಜಯವಾಗಲಿ ಕಂಸ ಭೂಪಾಲನಿಗೆ !
ಕಂಸ:-ಏನು ಸಮಾಚಾರ?
ಚಾರ:-ಯಾರೋ ಒಬ್ಬ ವಿದ್ವಾಂಸನು ಬಂದಿರುವನು.
ಕಂಸ:-ಒಳಗೆ ಬರಮಾಡು.
ಚಾರ:-ಅಪ್ಪಣೆ.
(ವಿದ್ವಾಂಸನು ಒಡ್ಡೋಲಗಕ್ಕೆ ಬರುವನು.)
ವಿದ್ವಾಂಸ:--ರಾಜನ್ ! ಕಲ್ಯಾಣಮಸ್ತು.
ಕಂಸ:-(ಅಟ್ಟಹಾಸದಿಂದ) ಎಲೈ ನೀನು ಯಾರು ? ಎಲ್ಲಿಂದ
ಬಂದೆ ?
ವಿದ್ವಾಂಸ:-(ತನ್ನಲ್ಲಿ) ಲಕ್ಷಣವಾಯಿತು! ಇನ್ನೂ ಒಂದೆರಡು
ಮಾತಗಳನ್ನಾದರೂ ಆಡುವುದಕ್ಕಿಲ್ಲ. ಒಂದು ಪೀಠದಲ್ಲಿ ಕೂಡವಂತಾ
ದರೂ ಹೇಳಲಿಲ್ಲ. ಹಿಂದೆಯೆಂದೂ ನೋಡಿದವನಲ್ಲ. ಪರಿಚಯವಿಲ್ಲ.
ಪುಟ:ಶ್ರೀ ಕೃಷ್ಣ ಲೀಲೆ.djvu/೮೫
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ