ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

178 ಕಥಾಸಂಗ್ರಹ-೪ ನೆಯ ಭಾಗ ಎಲಾ ಖಳನೇ, ಈ ಘಾತವನ್ನು ಎಚ್ಚರಿಕೆಯಿಂದ ಆತು ಕೋ, ಏಕೆಂದರೆ ನೀನು ರಣರಂಗದಲ್ಲಿ ನಿರ್ಭೀತನು, ಮತ್ತು ಮಹಾ ವೀರನು ಎಂದು ಲೋಕಗಳೆಲ್ಲಾ ಹೊಗಳು ತಿರುವುವು. ಅಂಥ ಮಹಾ ಕೀರ್ತಿಯನ್ನು ಕಳೆದು ಕೊಳ್ಳಬೇಡ, ನಾವು ಕೋತಿಗಳ ಕುಲದವರು ಎಂದು ನೆಗೆದಬ್ಬರಿಸಿ ಮುಷ್ಟಿಯಿಂದ ಒಂದು ಗುದ್ದನ್ನು ಗುದ್ದಲು ; ಆಗ ಅ೦ಕಾನಾಥನು ಸಿಡಿದು ಭೂಮಿಗೆ ಬಿದ್ದು ರಕ್ತವನ್ನು ಕಾರಿ ಕಾರಿ ಮೈಮಳೆ ಗಳು ಮುರಿದಂತಾಗಿ ಇಂದ್ರಿಯಗಳು ನಿರ್ಬಲತೆಯನ್ನು ಹೊಂದಿ ಕೈ ಕಾಲುಗಳನ್ನು ಒದರಿಕೊಳ್ಳುತ್ತಾ ಮೂರ್ಛಿತನಾಗಿ ಮಲಗಿದನು. ಆಗ ಸಂತುಷ್ಟ ರಾದ ಸುರರು ಕಪಿವೀರನ ಮೇಲೆ ಹೂಮಳೆಗರೆದರು. ದೇವದುಂದುಭಿಗಳನ್ನು ಬಾರಿಸಿದರು, ಮತ್ತು ವೀರಕುಲತಿಲಕನಾದ ಈ ಆಂಜನೇಯನದೊಂದ ಕಭೀಕರನಾದ ಈ ರಕ್ಕಸನ ಸ್ಥಿತಿಯು ಇ೦ಥಾಯಿತು. ಇನ್ನೂ ಎರಡು ಗುದ್ದುಗಳು ಉಳಿದಿರುವವು. ಅವೆರಡೂ ಮುಗಿಯುವುದರೊಳಗಾಗಿ ಈ ನಿಶಾಚರರಾಜನ ಆಯುಷ್ಯವು ಮುಗಿಯದೆ ಇರುವುದೇ ಇಲ್ಲ ಇದು ಸತ್ಯವು ಎಂದು ನಿಶ್ಚಯಿಸುತ್ತಿದ್ದರು. ಆ ಬಳಿಕ ರಾವಣನ ಪ್ರಾಣಗಳು ರಾಮನ ಬಾಣಘಾತದಿಂದ ಹೋಗತಕ್ಕು ವು ಗಳಾದುದರಿಂದ ಅರೆಗಳಿಗೆಯಾದ ಮೇಲೆ ರಾವಣನು ಸಾರಥಿಯ ಶೈತ್ಯೋಪಚಾರಗ ಳಿಂದ ಚೇತರಿಸಿಕೊಂಡು ಮೆಲ್ಲನೆ ಕಣ್ಣೆರೆದು ನೋಡಿ ಕೈಗಳನ್ನೂರಿಕೊಂಡಿದ್ದು ನಿಂತು ಹನುಮಂತನನ್ನು ಕುರಿತು--ಎಲೈ ಕಪಿವೀರನೇ, ನಿನಗೆ ಸಮಾನನಾದ ವೀರಾಗ್ರೇಸ ರನು ಮರು ಲೋಕಗಳಲ್ಲೂ ಯಾರೂ ಇಲ್ಲ, ನಾನು ಹುಟ್ಟಿದಂದಿನಿಂದ ಈ ವರೆಗೂ ಒಂದು ವೇಳೆಯಲ್ಲಾದರೂ ಇಂಥ ಅಸದೃಶವಾದ ಪೆಟ್ಟನ್ನು ತಿಂದವನಲ್ಲ ಎಂದು ಹೊಗಳಲು; ಆಗ ಹನುಮಂತನು ರಾವಣನನ್ನು ಕುರಿತು ನೀನು ನನ್ನನ್ನು ಹೊಗಳುವುದು ಯೋಗ್ಯವಾದುದಲ್ಲ, ಏಕೆಂದರೆ ನನ್ನಂಥ ಹೀನಬಲಿಗಳಾದವರು ನಮ್ಮ ಕಪಿಸೇನೆಯಲ್ಲಿ ಒಬ್ಬರೂ ಇಲ್ಲ, ಖಳನಾದ ನೀನು ನನ್ನ ಪೆಟ್ಟನ್ನು ತಿಂದು ಬದುಕಿದ ಮೇಲೆ ನನ್ನ ಗುದ್ದಿಗಿಂತಲೂ ಕೀಳಾದ ಗುದ್ದು ಒಬ್ಬರದೂ ಅಲ್ಲವೆಂದು ಯೋಚಿಸುತ್ತೇನೆ. ಅದು ಕಾರಣ ನನ್ನ ಏಟನ್ನು ಹೊಗಳುವುದು ನಿನಗೆ ಅಣುಮಾತ್ರ ವಾದರೂ ಯುಕ್ತವಲ್ಲ, ಆ ವಿಷಯವು ಹಾಗಿರಲಿ, ಇದೋ, ಈಗ ನಿನ್ನ ಸರತಿಯು! ನಾನು ಸಿದ್ದ ನಾಗಿ ನಿಂತಿದ್ದೇನೆ. ನಿನ್ನ ಶಕ್ತಿಯನ್ನು ನಿರ್ವಂಚನೆಯಿಂದ ನನ್ನ ಮೇಲೆ ತೋರಿಸು ;* ತಡವೇಕೆ ಮಾಡುವಿ ಎಂದು ಹೇಳಲು ; ಆಗ ಕುಪಿತನಾದ ರಾವಣನು ತನ್ನ ವಜೋಪಮಾನಗಳಾದ ಹತ್ತು ಮುಷ್ಟಿ ಗಳನ್ನೂ ಮೇಲೆತ್ತಿ --ಎಲಾ, ನೀಚನಾದ ಹನುಮಂತನೇ, ನೀನು ಬಹುಗರ್ವದಿಂದ ದುರ್ವಾಕ್ಯಗಳನ್ನಾಡಿ ಅಪರಾಧಿಯಾಗಿ ರುವಿ. ಈ ನಮ ಮುಷಿಘಾತತ್ರ ಯದಲ್ಲಿ ನೀನು ಬದುಕಿದಿಯಾದರೆ ನೀನೇ ದಶರಥನ ಮಗನ ಬಂಟನು, ವೀರನಿಶಾಚರ ಬಲವನ್ನು ಸೂರೆಗೊಂಡವನು, ಮತ್ತು ಸೀತೆಯನ್ನು ಕರೆದು ಕೊಂಡು ಹೋಗಿ ರಾಮನಿಗೆ ಕೊಟ್ಟವನು, ಈ ಮಾತುಗಳಲ್ಲಿ ಏನೂ ಸಂದೇಹ ವಿಲ್ಲ ಎಂದು ಹೇಳಿ ಆರ್ಭಟಿಸಿ ಹನುಮಂತನನ್ನು ಗುದ್ದಲು ; ಕಪಿವೀರನ ಗೋಣು ಕೊಕ್ಕರಿಸಿತು. ಗಂಟಲಿನಿಂದ ರಕ್ತವು ಹೊರಟು ಹೊರಬಿದ್ದಿತು, ಕೈ ಕಾಲು ಮೊದ ಲಾದ ಅಂಗೋಪಾಂಗಗಳಲ್ಲಿ ಸ್ವಾಧೀನತೆಯು ತಪ್ಪಿತು, ಕಣ್ಣುಡ್ಡು ಗಳು ತೇಲಿದುವು.