ಕೃಷ್ಣಾವತಾರದ ಕಥೆ 265; 7, PHE EIGHTH OR RRISHNA INGARNATION. ೭, ಕೃಷ್ಣಾವತಾರದ ಕಥೆ. ದ್ವಾಪರಯುಗದಲ್ಲಿ ದುಷ್ಟರಾದ ದಾನವರೂ ದೈತ್ಯರೂ ಧರಣೀಪಾಲಕರೂ ಹೆಚ್ಚಿ ಪಾಪವು ಬಹಳವಾದುದರಿಂದ ಭೂದೇವಿಯು ಆ ಭಾರವನ್ನು ಸಹಿಸಲಾರದೆ ತನ್ನನ್ನು ಸೃಷ್ಟಿಸಿದ ಚತುರ್ಮುಖಬ್ರಹ್ಮನ ಬಳಿಗೆ ಬಂದು ಆತನಿಗೆ ನಮಸ್ಕರಿಸಿಎಲೆ ಸೃಷ್ಟಿಕರ್ತನೇ, ಈಗ ಅನೇಕ ದುಷ್ಟರು ಹುಟ್ಟಿ ದುರ್ಮಾರ್ಗಪ್ರವರ್ತಕರಾ ಗಿದಾರೆ, ನಾನು ಅವರ ಭಾರವನ್ನು ಸಹಿಸಲಾರೆನು, “ಅದು ಕಾರಣ ಲೋಕರಕ ಕ ನಾದ ನೀನು ಅವರನ್ನು ಸಂಹರಿಸಿ ನನಗೆ ಭಾರವು ತಪ್ಪುವ ಹಾಗೆ ಮಾಡಬೇಕೆಂದು ಬೇಡಿಕೊಳ್ಳಲು ; ಆಗ ಬ್ರಹ್ಮನು ಆ ಭೂದೇವಿಯನ್ನು ಸಂಗಡ ಕರೆದುಕೊಂಡು ಸಕಲ. ದೇವಗಣಸಮೇತನಾಗಿ ಹೊರಟು ಕ್ಷೀರಸಮುದ್ರವನ್ನು ಸೇರಿ ಅಲ್ಲಿ ಮಹಾವಿಷ್ಣು ವನ್ನು ಅನೇಕ ವಿಧವಾಗಿ ಸ್ತುತಿಸಿ ದುಷ್ಟರಿಂದ ಧರಣಿಗೆ ಉಂಟಾಗಿರುವ ಭಾರ ವನ್ನು ಪರಿಹರಿಸಿ ಕಾಪಾಡಬೇಕೆಂದು ಬೇಡಿಕೊಂಡನು. ಆಗ ಗರುಡಾರೂಢನಾದ ಶ್ರೀ ಮಹಾವಿಷ್ಣುವು ಬ್ರಹ್ಮಾದಿಗಳಿಗೆ ಪ್ರತ್ಯಕ್ಷನಾಗಿ ಮುಗುಳ್ಳ ಗೆಯಿಂದ ಕೂಡಿ ಆ ಸರೋಜಸಂಭವನನ್ನು ಕುರಿತು--ಎಲೈ ಕಮಲಜನೇ, ನಾನು ಕೃತಯುಗದಲ್ಲಿ ಅನೇಕಾವತಾರಗಳನ್ನು ಮಾಡಿ ಕೊಂದುಹಾಕಿದಂಥ ದೈತ್ಯ ದಾನವರೂ ತ್ರೇತಾಯುಗದಲ್ಲಿ ಸಂಹರಿಸಿದ ದೈತ್ಯರೂ ಈ ಕಲಿಯುಗದಲ್ಲಿ ತಿರಿಗಿ ಹುಟ್ಟಿ ಭೂಭಾರಕರಾಗಿರುವುದನ್ನು ಬಲ್ಲೆನು, ಈ ವಿಷಯದಲ್ಲಿ ನಾನು ನಿಮಗೆ ಹೇಳು ವೆನು ಕೇಳಿರಿ, ಕಾಲನೇಮಿಯೆಂಬ ದೈತ್ಯನು ಕಂಸಾಸುರನಾಗಿಯ ವರಾಹಾವ ತಾರದಲ್ಲಿ ನನ್ನ ಸಂಬಂಧದಿಂದ ಭೂಮಿಗೆ ಉಂಟಾದ ಮಗನು ನರಕಾಸುರನಾ. ಗಿಯ ಕುಂಭಕರ್ಣನು ದಂತವಕ್ರನಾಗಿಯೂ ರಾವಣನು ಶಿಶುಪಾಲನಾಗಿಯ ಪೂರ್ವದಲ್ಲಿ ನಾನು ರಸಾತಲಕ್ಕೆ ಮೆಟ್ಟಿದ ಬಲಿಚಕ್ರವರ್ತಿಯ ಮಗನು ಬಾಣಾಸುರ ನಾಗಿಯ ಇನ್ನೂ ಅನೇಕರಾದ ದೈತ್ಯರು ಸಾಲ್ವ ಮಗಧಾದಿ ದುಷ್ಟರಾಗಿಯ ಹುಟ್ಟಿರುವರು, ದ್ವಾದಶಾದಿತ್ಯರ ತಾಯಿತಂದೆಗಳಾದ ದಿತಿಯ ಕಶ್ಯಪನೂ ವರು ಇನ ಶಾಪದಿಂದ ವಸುದೇವನೆಂದೂ ದೇವಕೀದೇವಿಯೆಂದೂ ಭೂಲೋಕದಲ್ಲಿ ಹುಟ್ಟಿ ಗಂಡಹೆಂಡಿರಾಗಿರುವರು. ನಾನು ಮೊದಲು ಅವರನ್ನು ಕುರಿತು--ನಾನು ನಿಮಗೆ ಮಗನಾಗಿ ಹುಟ್ಟು ವೆನೆಂದು ಅವರಿಗೆ ವರವನ್ನು ಕೊಟ್ಟಿರುವೆನು. ಅದೇ ಪ್ರಕಾರ ನಾನು ಅವರಿಗೆ ಮಗನಾಗಿ ಹುಟ್ಟಿ ಕಂಸಾದಿ ದುಷ್ಟರನ್ನು ಕೊಲ್ಲುವೆನು, ನೀವೆಲ್ಲರೂ ದೇವತೆಗಳ ಅಂಶದಿಂದ ನನಗೆ ಸಹಾಯಕರಾಗಿ ಹುಟ್ಟಿರಿ ಎಂದು ಹೇಳಿ ಅಭಯವನ್ನು ಕೊಟ್ಟು ಕಳುಹಿಸಲು ; ಅವರೆಲ್ಲರೂ ಅಲ್ಲಿಂದ ಹೊರಟ ತಮ್ಮ ತಮ್ಮ ಲೋಕಗಳಿಗೆ ತೆರಳಿದರು. ಇತ್ತಲು ಆರ್ಯಾವರ್ತವೆಂಬ ಪುಣ್ಯ ದೇಶದಲ್ಲಿ ಪ್ರಸಿದ್ಧ ವಾದ ಮಧುರಾ ಪಟ್ಟಿ ಣದಲ್ಲಿ ಧರ್ಮದಿಂದ ರಾಜ್ಯಭಾರವನ್ನು ಮಾಡುತ್ತಿದ್ದ ಯದುವಂಶೋತ್ಪನ್ನನಾದ.
ಪುಟ:ಕಥಾ ಸಂಗ್ರಹ - ಭಾಗ ೨.djvu/೨೭೫
ಗೋಚರ