ಪುಟ:ಪ್ರಬಂಧಮಂಜರಿ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಾಣಿಹಿಂಸೆ. f೧ ದೊಡ್ಡ ಪಟ್ಟಣಗಳಲ್ಲಿರುವರು. ಘನಪಂಡಿತರಾದವರಿಗೂ ಪಟ್ಟಣವಾಸವುಚಿತವು; ಇವರು ದೊಡ್ಡ ಪಟ್ಟಣಗಳಲ್ಲಿದ್ದರೆ ಸಮಾನರ ಸಹವಾಸದಿಂದ ಆನಂದವೂ ಪ್ರಯೋಜನವೂ ಆಗುವುವಲ್ಲದೆ, ಇವರ ಹೆಸರು ಮುಂದಕ್ಕೆ ಬರುವುದು, ಹಳ್ಳಿಗಾಡಿನಲ್ಲಿಯೇ ಇದ್ದರೆ ಕೇಳುವವರಿಲ್ಲದೆ ಇವರು ಕೂಡ ಕೂರ್ಮಕ್ಕೆ ಸಮಾನರಾಗುವರು. ನಮ್ಮ ದೇಶದಲ್ಲಿ ಈಗಿನ ಅನೇಕ ವಿದ್ಯಾರ್ಥಿಗಳು ಈ ವಿಷಯವನ್ನರಿಯದೆ ಯಾವಾಗಲೂ ಪುಸ್ತಕಗಳನ್ನೊದುತ್ತಿರುವರೇ ಹೊರತು ತಾವು ವಾಸಿಸುತ್ತಿರುವ ಪಟ್ಟಣದಲ್ಲಿ ನೋಡತಕ್ಕ ವಸ್ತುಗಳನ್ನು ನೋಡುವುದಕ್ಕೂ, ಕೇಳತಕ್ಕ ಸಂಗತಿಗಳನ್ನು ಕೇಳುವುದಕ್ಕೂ ಪ್ರಯತ್ನಿಸುವುದಿಲ್ಲ. ವಿರಾಮವಾದಾಗ, ವಿದ್ಯಾರ್ಥಿಗಳುದೊಡ್ಡ ದೊಡ್ಡ ಕಟ್ಟಡ, ಅಂಗಡಿ, ಆಶ್ಚರ್ಯಕರವಾದ ಯಂತ್ರ, ಹಡಗು, ರೇವು, ಮೊದಲಾದುವುಗಳಿಗೆ ಹೋಗಿ ತಮ್ಮ ಬುದ್ದಿ ಬಲದಿಂದ ಚೆನ್ನಾಗಿ ಪರಿಶೀಲಿಸಿ ನೋಡಬೇಕು. ಅನೇಕರು ದೊಡ್ಡ ಪಟ್ಟಣಗಳಲ್ಲಿದ್ದರೂ ಅಲ್ಲಿನ ವಿಶೇಷವಿಷಯಗಳನ್ನು ಹಳ್ಳಿಯವರಿಗಿಂತ ಸ್ವಲ್ಪವೂ ಹೆಚ್ಚಾಗಿ ಅರಿಯದೆ ಅನೇಕ ಪ್ರಯೋಜನಗಳನ್ನು ಹಾಳುಮಾಡಿಕೊಳ್ಳುವರು. ಆದರೆ ಹಳ್ಳಿಗಳಿಂದ ಬಂದು ಪಟ್ಟಣಗಳಲ್ಲಿ ಓದುವವರು ಪಟ್ಟಣವಾಸಿಗಳಲ್ಲಿರುವ ದುರ್ವಾಪಾರಗಳಿಗೆ ದಾರಿಕೊಡದಹಾಗೆ ಬಲುಎಚ್ಚರಿಕೆಯಿಂದಿರಬೇಕು. ಅಂತಹ ದುರ್ವಾಪಾರಗಳಿಗೆ ಒಳಗಾಗದೆ, ರಜಾದಿವಸ ಬಂದಾಗ ಹಳ್ಳಿಗಳಲ್ಲಿ ವಾಸಿಸುತ್ತಿದ್ದರೆ, ಆವಿದ್ಯಾರ್ಥಿಗಳಿಗೆಪಟ್ಟಣದಿಂದುಂಟಾಗುವ ಪ್ರಯೋ ಜನಗಳು ದೊರೆವುವಲ್ಲದೆ, ಅವರ ಆರೋಗ್ಯವೂ ಸೌಖ ವೂ ಹೆಚ್ಚು ವುವು. 26, ಪ್ರಾಣಿ ಹಿಂಸೆ. ಪರೋಪಕಾರಧರ್ಮವು ಪ್ರಾಣಿಗಳ ವಿಷಯದಲ್ಲಿ ನಾವು ಶೂರರಾಗಿರಕೂಡದೆಂಬುದನ್ನು ಬೋಧಿಸುತ್ತದೆ. ಮನುಷ್ಯರ ಸೌಖ್ಯಕ್ಕಾಗಿ ಪ್ರಾಣಿಗಳ ಸೌಖ್ಯವನ್ನು ಕೋರಬೇಕೇ ಹೊರತು ಬೇರೆ ಅಲ್ಲವೆಂದು ಕೆಲವರು ಹೇಳುವರು. ಅವರಿಗನುಸಾರವಾಗಿ ಪ್ರಾಣಿಗಳ ವಿಷಯದಲ್ಲಿ ನಾವು ದಯಾಶಾಲಿಗಳಾಗಿರಬೇಕೆನ್ನುವುದಕ್ಕೆ ಮುಖ್ಯ ಕಾರಣವೇನೆಂದರೆ:-ನಾವು ಅವುಗಳನ್ನು ದಯೆಯಿಂದ ಕಂಡರೆ ಅವೂ ನಮ್ಮ ವಿಷಯದಲ್ಲಿ ಚೆನ್ನಾಗಿ ನಡೆದುಕೊಳ್ಳುವ