ಪುಟ:ಕಥಾ ಸಂಗ್ರಹ - ಭಾಗ ೨.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

222 ಕಥಾಸಂಗ್ರಹ-೫ ನೆಯ ಭಾಗ ಕೂಡಿ ಆ ಮಂದರ ಪರ್ವತವನ್ನು ತಲೆಯ ಮೇಲೆ ಹೊತ್ತು ಕೊಂಡು ಬಂದು ಕ್ಷೀರಸಾ ಗರದಲ್ಲಿ ಹಾಕಲು ; ಅದು ಆ ಕ್ಷಣದಲ್ಲೇ ಸಮುದ್ರದಲ್ಲಿ ಮುಣುಗಿಹೋಯಿತು. ಆಗ ದೇವಾಸುರರೆಲ್ಲರೂ ರಾತ್ರಿಯೆಲ್ಲಾ ಶ್ರಮಪಟ್ಟು ಹೆತ್ತ ಕೂಸನ್ನು ನಾಯಿ. ಎತ್ತಿ ಕೊಂಡು ಹೋಯಿತು ಎಂಬ ಗಾದೆಗೆ ಸರಿಯಾಗಿ ಈ ವರೆಗೂ ನಾವು ಅನುಭ ವಿಸಿದ ಶ್ರಮವೆಲ್ಲಾ ಕಣಕಾಲದಲ್ಲಿ ವ್ಯರ್ಥವಾಗಿ ಹೋಯಿತು ಎಂದು ಬಹಳವಾಗಿ ಚಿಂತೆಪಟ್ಟು--ಭಕ್ಕ ಪರಾಧೀನನಾದ ಲಕ್ಷ್ಮೀಪತಿಯೇ, ಮಹಾತ್ಮನಾದ ನೀನೇ ನಮ್ಮ ಕಷ್ಟವನ್ನು ಸಾಫಲ್ಯವುಳ್ಳುದನ್ನಾಗಿ ಮಾಡಿ ನಮ್ಮಲ್ಲಿ ಕನಿಕರವನ್ನಿಟ್ಟು ಈಗ ನಾವು ಆರಂಭಿಸಿರುವ ಕಾರ್ಯವು ನಿರ್ವಿಘ್ನ ವಾಗಿ ಕೈಗೂಡುವಂತೆ ಅನುಗ್ರಹಿಸಬೇಕೆಂದು ಬಹು ವಿಧವಾಗಿ ಪ್ರಾರ್ಥಿಸಿಕೊಂಡುದರಿಂದ ಆಗ ಮಹಾವಿಷ್ಣುವು ಅವರಿಗೆ ಪ್ರತ್ಯಕ್ಷ ನಾಗಿ-ಎಲೈ ದೇವಾಸುರರುಗಳಿರಾ, ನಾನು ನಿಮಗೋಸ್ಕರವಾಗಿ ಮಹಾ ಕೂರ್ಮಾ ವತಾರವನ್ನು ಮಾಡಿ ಈ ಕ್ಷೀರಸಾಗರದಲ್ಲಿ ಮುಳುಗಿಹೋಗಿರುವ ಮಂದರಪರ್ವತ ವನ್ನು ಮೇಲೆತ್ತಿ ಸಮುದ್ರದ ನಡುನೀರಿನಲ್ಲಿ ನನ್ನ ಬೆನ್ನಿನ ಮೇಲೆ ಧರಿಸಿ ೨ಂಡು ನಿಲ್ಲು ವೆನು, ಅನಂತರದಲ್ಲಿ ನಿಮ್ಮ ಸಂತೋಷವಿದ್ದ ಹಾಗೆ ಕಡೆದು ಕೊಳ್ಳಿರಿ ಎಂದು ಹೇಳಿ ಅದೃಶ್ಯನಾಗಿ ಸಮುದ್ರವನ್ನು ಹೊಕ್ಕು ಮಹಾಕೂರ್ಮಗೂಪವನ್ನು ಧರಿಸಿ ತನ್ನ ಬೆನ್ನಿ ನಿಂದ ಮಂದರನಗವನ್ನು ಮೇಲೆತ್ತಿ ಧರಿಸಿಕೊಂಡು ನಿಂತನು. ಆಗ ದೇವಾಸುರರು ನೀರಿನ ಮೇಲೆ ನಿಂತಿರುವ ಮಂದರಗಿರಿಯನ್ನು ನೋಡಿ ಮಹಾವಿಷ್ಣುವಿನ ಮಹಿಮೆಗೆ ಬಹಳವಾಗಿ ಆಶ್ಚರ್ಯಪಟ್ಟು ಆತನನ್ನು ಬಹುವಿಧ ವಾಗಿ ಸ್ತುತಿಸಿ ವಾಸುಕಿ ಎಂಬ ಸರ್ಪರಾಜನನ್ನು ತಂದು ಆ ಪರ್ವತಕ್ಕೆ ಸುತ್ತಿ ದೇವಾಸುರರು ಒಂದೊಂದು ಕಡೆಗೆ ನಿಂತು ಸಮುದ್ರವನ್ನು ಕಡೆಯುತ್ತಿರಲು ; ಆಗ ತ್ರಿಲೋಕ ಭಯಂಕರವಾದ ಎಷವು ಹುಟ್ಟಿತು. ಅದನ್ನು ನೋಡಿ ತ್ರಿಲೋಕಗಳೂ ತಲ್ಲಣಿಸಿದುವು. ಸುರಾಸುರರೆಲ್ಲರೂ ಕಂಗೆಟ್ಟು ಮುಂಗೆಟ್ಟರು. ಆಗ ಅವ್ಯಾಜಕರು ಣಾಸಮುದ್ರನಾದ ಶಿವನು ಬಂದು ಆ ವಿಷವನ್ನು ತೆಗೆದು ಕೊಂಡು ಪಾನಮಾಡಿ ಲೋಕ ಪ್ರಳಯವನ್ನು ತಪ್ಪಿಸಿ ಆ ಹಿಂದೆ ಸಮುದ್ವತವಾದ ಚಂದ್ರಕಳೆಯನ್ನು ಆಭ ರಣವಾಗಿ ಧರಿಸಿಕೊಂಡನು. ತರುವಾಯ ದೇವಾಸುರರು ಸಮುದ್ರವನ್ನು ಮಥಿಸು ತಿರಲು ; ಆಗ ಹುಟ್ಟಿದ ಲಕ್ಷ್ಮಿಯನ್ನೂ ಕೌಸ್ತುಭರತ್ನವನ್ನೂ ಮಾಹಾವಿಷ್ಣುವು ಅಂಗೀಕರಿಸಿದನು, ಆ ಬಳಿಕ ಹುಟ್ಟಿದ ಅಪ್ಪರಸ್ತ್ರೀಯರು ಕಲ್ಪವೃಕ್ಷ ಕಾಮಧೇನು ಚಿಂತಾಮಣಿ ವಾರುಣಿ ಎಂಬ ಮಧ್ಯ ಉದ್ದೆಶವಸ್ಸೆಂಬ ಕುದುರೆ ಇವು ಮೊದಲಾ ದುವುಗಳನ್ನೆಲ್ಲಾ ದೇವೇಂದ್ರನು ತೆಗೆದು ಕೊಂಡನು ಅನಂತರದಲ್ಲಿ ಧನ್ವಂತ್ರಿಯೆಂಬ ಒಬ್ಬ ತೇಜಃಪುಂಜರಂಜಿತನಾದ ಪುರುಷನು ಅಕ್ಷಯವಾದ ಅಮೃತ ಕಲಶವನ್ನು ತೆಗೆ ದುಕೊಂಡು ಸಮುದ್ರದಿಂದ ಮೇಲಕ್ಕೆ ಬರಲು ; ಆತನನ್ನು ಕಂಡು ಬೃಹಸ್ಪತ್ಯಾಚಾ ರ್ಯನು ದೈತ್ಯರಿಗೆ ಕಣ್ಣನ್ನೆ ಮಾಡಲು ; ದೈತ್ಯರಾಜರೆಲ್ಲಾ ಆ ಸೂಚನೆಯನ್ನು ತಿಳಿದು ಶ್ರೀಘ್ರವಾಗಿ ಹೋಗಿ ಧನ್ವಂತ್ರಿಯ ಕೈಯಿಂದ ಅಮೃತಕಲಶವನ್ನು ಕಿತ್ತು ಕೊಂ ಡರು, ಅದನ್ನು ಕಂಡು ದೇವತೆಗಳೆಲ್ಲಾ ಬಹಳವಾಗಿ ಭಯಪಟ್ಟ ವರಾಗಿ ದೈನ್ಯದಿಂದ ಮಹಾವಿಷ್ಣುವಿನ ಬಳಿಗೆ ಓಡಿಬಂದು ಆತನನ್ನು ಕುರಿತು-ಎಲೈ ಆಪದ್ರ