ಪುಟ:ಭವತೀ ಕಾತ್ಯಾಯನೀ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



5

ವೈಶಂಪಾಯನರಿಗೆ ಯಾವದು ಗೊತ್ತಿರುವದಿಲ್ಲವೋ, ಯಾವದರ ಹೊರತು ಯಾವ ಶ್ರೇಷ ಕೃತ್ಯವೂ ಸಿದ್ದವಾಗುವದಿಲ್ಲವೋ ಅಂಥ ಯಜುರ್ವೇದವನ್ನು ನನಗೆ ದಯಪಾಲಿಸು.” ಎಂದು ಬೇಡಿಕೊಂಡರು. ಆಗ ಅಶ್ವರೂಪಧಾರಣಮಾಡಿದ ಆ ಮಹಾಮುನಿಯನ್ನು ಶ್ರೀಸೂರ್ಯನು ತನ್ನರಥದಲ್ಲಿ ಕರಕೊಂಡು ಸುಹಾಸ್ಯವದನದಿಂದ – "ಪೂರ್ವದಲ್ಲಿ ಋಷಿಗಳು ಮಂದಮತಿಗಳ ಉದ್ಧಾರಕ್ಕಾಗಿ ವೇದರಾಶಿಯಲ್ಲಿ ನಾಲ್ಕು ಭಾಗಮಾಡು ವಾಗ, ಯಜುರ್ವೇದ ಶಾಖೆಯೊಳಗಿನದೊಂದು ಮುಷ್ಟಿಯನ್ನು, ಮುಂದೆ ನೀನು ಬೇ ಡುವೆಯೆಂಬ ಭವಿಷ್ಯವನ್ನರಿತು ನನ್ನಬಳಿಯಲ್ಲಿ ಇಟ್ಟು ಉಳಿದ ಎಲ್ಲವೇದದ ವಿಸ್ತಾರ ವನ್ನು ಜಗತ್ತಿನಲ್ಲಿ ಮಾಡಿದರು. ಯಾವವೇದದಲ್ಲಿ ಕರ್ಮ, ಉಪಾಸನಾ, ಜ್ಞಾನ ಗಳೆಂಬ ಮೂರು ಪ್ರಕರಣಗಳು ಇರುವವೋ ಆ ಅಯಾತಯಾಮ ಸಂಜ ಕವಾದ ವೇದ ವನ್ನು ನಾನು ನಿನಗೆ ಉಪದೇಶಿಸುವೆನು. ಈ ವೇದದಲ್ಲಿ ಶ್ರೌತಕರ್ಮದ ಆಚಾರಗಳೆಲ್ಲ ಸಾದ್ಯಂತವಾಗಿ ಹೇಳಲ್ಪಟ್ಟಿರುವವು. ಮಧ್ಯಭಾಗದಲ್ಲಿ ಮುಕ್ತಿದಾಯಕವಾದ ಶಿವೋ ಪಾಸನೆಯು ಹೇಳಲ್ಪಟ್ಟಿರುವದು. ಜೀವಬ್ರಮ್ಹವಿಷಯದ ಭ್ರಮವನ್ನು ದೂರಮಾಡು ವಂಥ, ಆತ್ಮಸಾಕ್ಷಾತ್ಕಾರವನ್ನುಂಟುಮಾಡುವಂಥ, ನಾಮದಿಂದಲೂ, ಅರ್ಥದಿಂದಲೂ ಶ್ರೇಷ್ಟವಾಗಿರುವಂಥ " ಈಶ " ವೆಂಬ ಉಪನಿಷದ್ರತ್ನವು ಆವೇದದ ಕಡೆಯಭಾಗದಲ್ಲಿ ಒಪ್ಪುತ್ತಿರುವದು. ಇದಲ್ಲದೆ ಬ್ರಹದಾರಣ್ಯಕವೆಂಬ ಶ್ರೇಷ್ಟ ಉಪನಿಷತು ಈ ಶುಕ್ಲ ಯಜುರ್ವೇದಕ್ಕೆ ಸಂಬಂಧಿಸಿರುವದು. ನಿನ್ನಸಲುವಾಗಿ ಬಹುಪ್ರಯಾಸದಿಂದ ಕಾದು ಇಟ್ಟಿದ್ದ ಪರಮಶ್ರೇಷ್ಟವಾದ ಯಜುರ್ವೇದದ ಈ ಶಾಖೆಯನ್ನು ನಿನಗೆ ಉಪದೇಶಿಸು ವನು. ಮೊದಲೇ ವೇದವು ತೇಜೋಮಯ , ಅದರಲ್ಲಿ ನನ್ನತೇಜಸ್ಸು ಬೆರೆತಿರುವದು.” ಎಂದು ಹೇಳಿ , ವೇದವನ್ನು ಉಪದೇಶಿಸಿ ಅಂತರ್ಧಾನಹೊಂದಿದನು.

ಹೀಗೆ ಅಗಾಧ ತಪಸ್ಸಿನಿಂದ ಸಂಪಾದಿಸಿದ ಅಯಾತಯಾಮ ವೇದವನ್ನೂ, ಉ

ಳಿದ ಋಗಾದಿ ವೇದಗಳನ್ನೂ ಉಪದೇಶಿಸುವದಕ್ಕಾಗಿ ಶ್ರೀಯಾಜ ವಲ್ಕ್ಯರು ಪಾಠಶಾಲೆ ಯನ್ನು ಏರ್ಪಡಿಸಿದರು. ಯಾಜ್ಞವಲ್ಕ್ಯರ ಕೀರ್ತಿಪ್ರಭೆಯು ಸಮಸ್ತದಿಗಂತವನ್ನು ಬೆಳಗುತಿ ತ್ತು. ವಿದ್ಯಾರ್ಥಿಗಳು ನಾಲ್ಕೂ ದಿಕ್ಕುಗಳಿಂದ ಗುಂಪುಗುಂಪಾಗಿ ಹೊರಟು, ಯಾಜ್ಞವಲ್ಕ್ಯರಲ್ಲಿ ಗುರುಕುಲವಾಸಮಾಡಬೇಕೆಂದು ಬರುತ್ತಿದ್ದರು. ಅಲ್ಪಕಾಲದಲ್ಲಿಯೇ ಪಾಠಶಾಲೆಯು ವಿದ್ಯಾರ್ಥಿಗಳಿಂದ ತುಂಬಿಹೋಯಿತು. ಜನಕನು ಆ ವೇದ ಶಾಲೆಗೆ ಪ್ರೋತ್ಸಾಹಕನಾಗಿ, ಒಂದು ವೇದಮಂದಿರವನ್ನು ಕಟ್ಟಿಸಿ, ಅಲ್ಲಿ ವಿದ್ಯಾರ್ಥಿ ಗಳ ಅನ್ನಪಾನಗಳ ಅನುಕೂಲತೆ ಮಾಡಿಕೊಟ ದ್ದನು. ಆ ಮಂದಿರದಲ್ಲಿ ವಿದ್ಯಾರ್ಥಿ ಗಳೆಲ್ಲರೂ ಯಾಜ ವಲ್ಕ್ಯರ ಸಹಾಯೋಪಾಧ್ಯಾಪಕರ ವ್ಯವಸ್ಥೆಗೆ ಒಳಪಟ್ಟು, ವಿದ್ಯಾ ಭ್ಯಾಸವನ್ನು ಮಾಡುತ್ತಲಿದ್ದರು. ಯಾಜವಲ್ಕ್ಯರು ಒಂದು-ನಿಯಮಿತಕಾಲದಲ್ಲಿ ತಾವೇ ಅಲ್ಲಿಗೆ ಹೋಗಿ ವೇದಪಾಠವನ್ನು ಹೇಳುತ್ತಿದ್ದರು. ಅಲ್ಲಿ ಸೇರಿದ್ದ ವಿದ್ಯಾರ್ಥಿಗಳಲ್ಲಿ ಬ್ರಾ ಹ್ಮಣ, ಕ್ಷತ್ರಿಯ, ವೈಶ್ಯರೆಂಬ ಮೂರುಬಗೆಯ ದ್ವಿಜರಿದ್ದರು. ಪಾಠಶಾಲೆಯಲ್ಲಿ ಆರು ವೇದಾಂಗಗಳ ಬೇರೆಬೇರೆ ತರಗತಿಗಳಿದ್ದವು. ಯಾಜ್ಞವಲ್ಕ್ಯರ ಹೆಸರು, ಸಾಮಾನ್ಯ