) ಅಯೋಧ್ಯಾಕಾಂಡ - ಅಥ ಶ್ರೀಮದಯೋಧ್ಯಾಕಾ ಏಕಾದಶಃ ಸರ್ಗಃ, ಶ್ರೀ ಶಿವ ಉವಾಚ. ಪ್ರವಿಸ್ಯ ತು ಮಹಾತೇಜಾ ದೃಷ್ಟಾ , ರಾಜಾನಮಗ್ರತಃ | ಪರಿಕ್ರಮ್ಯ ನಮಸ್ಕೃತ್ಯ ವಚನಂ ಚೇದಮಬ್ರವೀತ್ ॥ot ತತ ಲಕ್ಷ್ಮಣಸಂಯುಕ್ತ ನೀತಯಾ ಚಾಪಿ ಭಾರ್ಯಯಾ | ವನಮದೈವ ಗಚಾ ಮಿ ಮಾಮನುಜ್ಞಾತುಮರ್ಹಸಿ |೨|| ಇತ್ಯುಕ್ಯಾ ಏತರ ನತ್ಯಾ ಮಾತೃವೃದ್ದ ಸುಕೃಜ್ಞರ್ನಾ | ಪ್ರಯಯ ಮಾರ್ಗವಾಸಯ ರಾಮಚ ... ಏತುರ್ಗಹಾತ್ !೩ ಸುಮಿತ್ರಾ ಲಕ್ಷ್ಮಣ೦ ಪಹ ವನವಾಸಾಯ ದೀಕ್ಷಿತವಮ್ | ರಾಮಃ ಪಿತಾ ಜನಕಜಾ ಜನನೀ ವಿಪಿನಂ ಗೃಹ 18| | ಏವಂ ತೇ ವರ್ತಮಾನಸ್ಯ ರಾಮಸೇವಾಂ ಪ್ರಕುರ್ವತಃ | ವನವಾಸಕೃತಾ ಪೀಡಾ ನ ತೇಯೋಧ್ಯಾವನಂ ಪರಮ್ ||೫| ರಾಮಂ ವಿದ್ದಿ ಪರಾತ್ಮಾನಂ ಸಂಕ್ಷಾನ್ನಾರಾಯಣಂ ಪರಮ್ | ತವಾ ಭವೇತ್ ಕೀರ್ತಿ ಮುಕ್ತಿ ಕಾಪಿ ಭವೇತ್ ತವ !೬|| ಅಯೋಧ್ಯಾಕಾಂಡದಲ್ಲಿ ಹನ್ನೊಂದನೆಯ ಸರ್ಗವು ಪನಃ ಶ್ರೀ ಪರಮೇಶ್ವರನು ಹೇಳುವನು '- ಎಲ್! ಪಾರ್ವತಿ' ಹೀಗೆ ತಂದೆಯವನೆಯನ್ನು ಪ್ರವೇಶಿಸಿದವನಾಗಿ, ಮಹಾತೇಜಿಸಿ ಯದ ಆ ರಾಮಚಂದನು, ಅವನಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ, ಅವನನ್ನು ಕುರಿತು 'ಶಾತ ! ಲಕ್ಷಣನೊಡನೆಯೂ ಸೀತೆಯೊಡನೆಯ ಕೂಡಿದವನಾಗಿ, ನಾನು ಈಗಲೇ ಅರಣ್ಯಕ್ಕೆ ಹೊರಡುವೆನು. ನನಗೆ ಅನುಜ್ಞೆಯಾಗಬೇಕು' ಎಂದು ವಿಜ್ಞಾಪಿಸಿದನು ||೧-೨ ಈರೀತಿಯಾಗಿ ವಿಜ್ಞಾಪಿಸಿ, ತನ್ನ ತಂದೆಯನ್ನೂ ತಾಯಿಯರನ್ನೂ ವೃದ್ಧರನ್ನೂ ಇನ್ನೂ ಇತರರಾದ ಮಹನೀಯರನ್ನೂ ನಮಸ್ಕರಿಸಿ, ತಂದೆಯ ಮನೆಯನ್ನು ಬಿಟ್ಟು, ದಾರಿಯನ್ನು ಹಿಡಿದು ಪ್ರಖಣಮಾಡಿದನು |೩|| ಆ ಸಮಯದಲ್ಲಿ, ವನವಾಸದಲ್ಲಿ ಬದ್ದಾದರನಾದ ತನ್ನ ಮಗನಾದ ಲಕ್ಷಣವನ್ನು ಕುರಿತು, ಸುಮಿತ್ರಯು ವಕ್ಷ ! ಲಕ್ಷಣ! ನಿನಗೆ-ರಾಮನೇ ತಂದೆಯು ; ಸೀತೆಯ ತಾಯಿಯು ; ಅರ ಇವೇ ಅರಮನೆ. ಹೀಗೆಂದು ತಿಳಿದು ರಾಮನ ಸೇವೆಯನ್ನು ಮಾಡುತಿದ್ದರೆ, ನಿನಗೆ ವನವಾಸ ದಿಂದುಂಟಾಗುವ ಕಷ್ಟವೊಂದೂ ಸಂಭವಿಸುವುದಿಲ್ಲ. ಆ ಉತ್ತಮವಾದ ಅರಣ್ಯವೇ, ಅಯೋ ಧೈಯಂತ ಸುಖಕರವಾಗಿರುವುದು. ಶ್ರೀರಾಮನನ್ನು ಸಾಕ್ಷಾತ್ ಪರವತ್ರನಾದ ಪರಾತ್ಪರ ನಾದ ಶ್ರೀಮನ್ನಾರಾಯಣನೆಂದು ತಿಳಿಯುವನಾಗು. ಅವನ ಸೇವೆಯಿಂದ, ನಿನಗೆ ಇಹದಲ್ಲಿ ಕೀರ್ತಿಯೂ ಪರದಲ್ಲಿ ಮುಕ್ತಿಯೂ ಉಂಟಾಗುವುವು' ಎಂದು ಹೇಳಿದಳು ||೪-೬
ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೭೧
ಗೋಚರ