ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವತರಣಿಕೆ

    ಪ್ರಥಮಸಂಪುಟದ  ಅವತರಣಿಕೆಯಲ್ಲಿ ಕನ್ನಡನಾಡಿನ ಮತ್ತು 

ಕನ್ನಡನುಡಿಯ ಪ್ರಾಚೀನತೆ, ಕನ್ನಡನುಡಿಗೆ ರಾಜರುಗಳ ಪ್ರೋತ್ಸಾಹ ಈ ವಿಷಯಗಳು ಸಂಗ್ರಹವಾಗಿ ನಿರೂಪಿತವಾಗಿವೆ. ಕನ್ನಡಿಗರಿಗೆ ತಮ್ಮ ನಾಡುನುಡಿಗಳಲ್ಲಿ ಗೌರವ ಬುದ್ಧಿಯೂ ಆದರಾತಿಶಯವೂ ಹುಟ್ಟಿ ಅವು ಗಳ ಏಳಿಗೆಗಾಗಿ ಉತ್ಸಾಹದಿಂದೊಡಗೂಡಿದ ಪ್ರಯತ್ನವು ಉಂಟಾಗಬೇ ಕೆಂಬ ಉದ್ದೇಶದಿಂದ ಮೇಲೆಹೇಳಿದ ವಿಷಯಗಳನ್ನೂ ಅವಕ್ಕೆ ಸಂಬಂಧಿ ಸಿದ ಇನ್ನು ಕೆಲವು ವಿಷಯಗಳನ್ನೂ ಸ್ವಲ್ಪಮಟ್ಟಿಗೆ ಇಲ್ಲಿ ವಿವರಿಸಿ ಅನಂ ತರ ಈ ಸಂಪುಟದ ವಿಷಯವಾಗಿ ಒಂದೆರಡು ಮಾತುಗಳನ್ನು ಒರೆ ಯುತ್ತೇನೆ.

                ಕನ್ನಡನಾಡಿನ ಪ್ರಾಚೀನತೆ
   ಕನ್ನಡನಾಡು ಮೌರ್ಯರು, ಆಂದ್ರರು, ಕದಂಬರು, ಗಂಗರುಮೊದ 

ಲಾದ ಪುರಾತನ ರಾಜವಂಶದವರ ಆಳಿಕೆಗೆ ಒಳಪಟ್ಟಿದ್ದಿತು, ಮೌರ್ಯರಾಜ ನಾದ ಚಂದ್ರಗುಪ್ತನ ಕಾಲದಲ್ಲಿ ಉತ್ತರದೇಶದೊಳಗೆ ದ್ಯಾದಶವಾರ್ಷಿ ಕಕ್ಷಾಮವುಂಟಾಗಲು, ಕೊನೆಯ ಶ್ರುತಕೇನಲಿಯಾದ ಭದ್ರಬಾಹು ವೆಂಬ ಜೈನಗುರು ಜೈನಸಂಘದೊಡನೆ ದಕ್ಷಿಣದಿಕ್ಕಿನಲ್ಲಿರುವ ಪುನ್ನಾಟ ರಾಷ್ಟ್ರಕ್ಕೆ ಪ್ರಯಾಣಮಾಡಿದಾಗ, ಚಂದ್ರಗುಪ್ತನು ರಾಜ್ಯವನ್ನು ತ್ಯಜಿಸಿ ಭದ್ರಬಾಹುವಿಗೆ ಶಿಷ್ಯನಾಗಿ ಅವನೊಡನೆ ತಾನೂ ಹೊರಟು ಬಂದಂತೆಯೂ, ಶ್ರವಣಬೆಳುಗೊಳವನ್ನು ಸೇರಿದೊಡನೆ ಭದ್ರಬಾಹು ವಿಗೆ ಅವಸಾನಕಾಲವು ಪ್ರಾಪ್ತವಾಗಲು ಅವನ ಆಜ್ಞಾನುಸಾರವಾಗಿ ಸಂಘವನ್ನು ಮುಂದಕ್ಕೆ ಕಳುಹಿಸಿ ಚಂದ್ರಗುಪ್ತನು ಗುರಿವಿನ ಪರಿಚರ್ಯೆ ಗೋಸ್ಕರ ಅಲ್ಲಿಯೇ ನಿಂತಂತೆಯೂ, ಗುರುವಿನ ಮರಣಾನಂತರ ತಾನು ಅಲ್ಲಿಯೇ ತಪಸ್ಸುಮಾಡುತ್ತಿದ್ದು ಕೆಲವು ವರ್ಷಗಳಮೇಲೆ ಗತಿಸಿದಂ ತೆಯೂ ಜೈನಗ್ರಂಧಗಳಲ್ಲಿ ಉಕ್ತವಾಗಿದೆ. ಭದ್ರಬಾಹು ಕ್ರಿಸ್ತಪೂರ್ವ