ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

320 ಕರ್ಣಾಟಕ ಕವಿಚರಿತೆ [16 ನೆಯ

ದೆಸೆಗಳಂ ಕೀವಿ ನಲಿದೆಸೆವನಂ ಬಸವನಂ| ಮಸಕದಿಂದೇಳಿಕೊಂಡಿರ್ದ ತಿಸುಳಿಯ ಕಂಡನಂದು ನೆಲವಣುಗಿಯರಸಂ |

         ಜನನ
ನಿಟ್ಟೆಲುಗಳಟ್ಟೆಗಳ ಫಟ್ಟಣೆಗೆ ಹಿಟ್ಟಾಗಿ |
ಪೊಟ್ಟೆಯೊಳವಟ್ಟೆಯಂ ಬಿಟ್ಟು ಪೊರಮಟ್ಟು ನು |
ಣ್ಪಿಟ್ಟ ನೆಣನಾತೆರದೆ ದಿಟ್ಟಿಯಂ ಕಟ್ಟಿ ಮುಸುಕಿಟ್ಟಿಹ ಜರಾಯುವಿಂದಂ || 

ಕಟ್ಟುಗ್ರಶೋಕವಳವಟ್ಟು ಕಂಗೆಟ್ಟು ಮತಿ | ಗೆಟ್ಟಧೋಮುಖನಾಗಿ ನೆಟ್ಟನೆ ನೆಲಕೆ ಬೀಳ್ವ | ಕಟ್ಟಳೆಯನೇನೆಂಬೆ ನೆಟ್ಟ ಸುಜ್ಞಾನದಿಂ ಪುಟ್ಟನಳುವವನೆ ಚದುರಂ ||

               ಆತ್ಮ

ಘಟಮನೆಲ್ಲೆಲ್ಲಿಗಂ ಕೊಂಡೊಯ್ಯಲದರಲ್ಲಿ | ಘಟಿಸಿದಾಕಾಶಮಾವಗಮಿರ್ಪ ಕಾರಣದೆ | ಘಟದೊಡನೆ ಪೂರ್ವಪ್ರದೇಶದಾಕಾಶವೇ ಪೋಯ್ತೆಂದು ತಿಳಿವತೆರದಿಂ|| ಪಟುಕರ್ಮವಶದಿಸೀಲಿಂಗದೇಹಂ ಮಹೋ | ತ್ಕಟದೇಹಮಂ ಬಿಟ್ಟು ಲೋಕಾಂತರಕೆ ಪೋಗ | ಲಟನವಿಲ್ಲದ ಪೂರ್ಣನಾದಾತ್ಮನುಂ ಪೋದನೆಂಬುದುಪಚಾರಮಾತ್ರಂ ||

             _ _ _
           ತಿಮ್ಮ ಸು 1600

ಈತನು ನವರಸಾಲಂಕಾರವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣ ಕವಿಯೆಂದು ತೋರುತ್ತದೆ; ರಾಯಣನ ಮಗನು. ಇವನಿಗೆ ಕವಿಕುಲ ಚಕ್ರವರ್ತಿ, ಕವಿಭಾಳಲೊಚನ, ರಸಿಕಬ್ರಹ್ಮ, ಉಭಯಕವಿಶರಭಭೇ ರುಂಡ ಎಂಬ ಬಿರುದುಗಳಿದ್ದಂತೆ ತೋರುತ್ತದೆ. ಸಾಳ್ವನ (ಸು. 1550) ರಸರತ್ನಾಕರದಿಂದ ಸೂತ್ರಗಳನ್ನೂ ವಾಕ್ಯಗಳನ್ನೂ ಉದಾಹರಿಸುವುದರಿಂದ ಈತನು ಅವನ ಕಾಲಕ್ಕೆ ಈಚೆಯವನು ಎಂಬುದು ಸ್ಪಷ್ಟವಾಗಿದೆ; ಸುಮಾರು 1600 ರಲ್ಲಿ ಇದ್ದಿರಬಹುದು. ತನಗೆ ಹಿಂದೆ ಇದ್ದ ಲಕ್ಷಣಕಾರರಲ್ಲಿ ಕವಿಕಾಮ, ನಾಗವರ್ಮ, ಸಾಳ್ವ, ವಿದ್ಯಾನಾಥ, ಹೇಮಚಂದ್ರ, ಅಮೃ