ಶತಮಾನ] ತಿರುಮಲಭಟ್ಟ 319
ಕೊಂಡಾಡರಕಟ ಕೇಣದೆ ಕೆಲರಿದುಪ್ಪೆಂದು ಮಂಡೆಯಂ ಕೊಡಹುತಿಹರು || ಎಂಬ ಪದ್ಯಾರ್ಧದಲ್ಲಿ ದೂಷಿಸಿ ಈ ಗ್ರಂಧವು ಭಗವದ್ಗೀತೆಗಿಂತ ಶ್ರೇಷ್ಠವೆಂದು ಈ ಪದ್ಯದಲ್ಲಿ ಹೇಳುತ್ತಾನೆ___
ದ್ವಾಪರಾಂತ್ಯದೊಳಖಿಳಬಂಧುಗುರುಸೋದರರ | ಕೋಪದಿಂ ಕೊಲ್ಲಬೇಕೆಂದು ಸಂಗರವ ವೂ | ಕ್ಕಾಪಾರ್ಧಗವನ ಕುದುರೆಗಳ ಪೂಡಲ್ ಒಂದ ನಂದಗೋಪನ ತನಯನು || ತಾ ಪೇಳ್ದಿನೊಲಿದು ಭಗವದ್ಗೀತಯಂ ದಿಟಮ | ದೀಪರಮಶಿವ ಪುಣ್ಯದೇಶಕಾಲದೊಳು ಭುವ | ನೋಪಕಾರಕ್ಕೆ ನರನಾದ ಹರಿಗೊರೆದ ಶಿವಗೀತೆಗೇಂ ದೊರೆಯೆ ಸರಿಯೇ || ಕವಿ ತನ್ನ ಪೋಷಕನ ವಿಷಯವಾಗಿ ಹೀಗೆ ಬರೆದಿದ್ದಾನೆ__ ಕೆಳದಿರಾಜರ ರಾಜಧಾನಿಯಾದ ಇಕ್ಕೇರಿಯಲ್ಲಿ ಸದಾಶಿವರಾಯನಾಯಕನು ಆಳಿದನು. ಅವನ ಮಗ ಸಂಕಭೂಪ, ಅವನ ಮಗ ವೆಂಕಟನೃಪ. ಇವನು ವಿಜಯಾಪುರದ ಪಾತುಖಾನನನ್ನು ಸೋಲಿಸಿದನು; ತುಳುವದೊರೆಗಳನು ಕಿಂಕರರೆನಿಸಿದನು. ಗೀತಗೋವಿಂದದಿಂ ನಾಲ್ಮಡಿಯೆನಿಪ ಗೀತಗೌರೀವರವನೆನ್ನಿಂದ ಪೇಳಿಸಿದನು. ಅಘೋರೇಶ್ವರನ ಮುಂದಣ ಮಹಾಮಂಟಪದ್ವಯವ ರಧಾದಿಗಳ ಮಾಡಿಸಿದನು. ಶೃಂಗೇರಿ ಚಿರಕಾಲದಿಂ ನಿರ್ನಾಮವಾಗಿರಲು ಅದಂ ಮೊದಲಿಂದ ನೂರ್ಮಡಿಯ ಬಾಗ್ಯದಿಂ ಬಾಳಿಸಿದನು. ಇವನ ಮಗ ಯುವರಾಜಭದ್ರಭೂಪ. ವೆಂಕಟನೃಪಂ ಶಿವಗೀತೆಯ ರ್ಧಮನುದ್ದಂಡಷಟ್ಪದಿಗಳಿ೦ ಕನ್ನಡಿಸಬೇಕೆಂದು ನೇಮಿಸಿದನುನು. ಗ್ರಂಧಾವತಾರದಲ್ಲಿ ವಿಷ್ಣು ಸ್ತುತಿಯಿದೆ. ಬಳಿಕ ಕವಿ ಈಶ್ವರ, ಸರ ಸ್ವತಿ, ವೆಂಕಟಾದ್ರಿನಾಯಕ ಇವರುಗಳನ್ನು ಹೊಗಳಿದ್ದಾನೆ. ಈ ಗ್ರಂಥ ದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ__
ನಂದಿ
ಎಸೆವ ರನ್ನಗಳ ಪಲ್ಲಣದಿಂದ ಮೆನಿವನಂ | ಸಸಿಯ ಕದಿರುಗಳ ತೊಂಗಲುಗಳಿವೆ ಎಂಬಂತೆ | ಪಸರಿಸಿದ ನೀಳ್ದ ಸಮಕಟ್ಟುಗಳ ಝುಲ್ಲಿಗಳ ತಂಡದೆ ಮನಂಗೊಳಿಪನಂ || ಮಿಸುಪಕಿರುಗೆಜ್ಜೆಗಳ ಬಲ್ಲುಲಿಗಳಂ ಪತ್ತು |