ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

301 ಶತಮಾನ] ವಾದಿರಾಜ, ಕವಿ' ವಿಷಯಗಳನ್ನು ಹೇಳಿದ್ದಾನೆ. ಪ್ರಕರಣಗಳ ಅಂತ್ಯದಲ್ಲಿ ಈ ಗದ್ಯ ವಿದೆ. ಇತಿ ಶ್ರೀಮತ್ಕರ್ಣಾಟದೇಶಾಂತರ್ಗತಹೋಸಣದೇಶ ಮಧ್ಯೋಲ್ಲಸತ್ಕಾವೇರೀ ದಕ್ಷಿಣಭಾಗಸ್ಥಿ ತಬಾಲಚಂದ್ರ ಪುರಸ್ಥಗೌರೀಶ್ವರಕೃಪಾಲಬ್ದವಿಭವ ಬಾಲಚಂದ್ರಪೂರ ಧೀಶ್ವರ ಚೆನ್ನರಾಭೂಪಾಲವಿರಚಿತಮಪ್ಪ ಸರ್ವಲೋಕೋಪ ತಾರಕ ಕರ್ಣಾಟಭಾ ಪಾವಿಶದೀಕೃತ ವೈದ್ಯಸಾರಸಂಗ್ರಹೇ, ಈ ಗ್ರಂಥದ ಮತ್ತೊಂದು ಪ್ರತಿಯಲ್ಲಿ--- ಇತಿ ಶ್ರೀಕರ್ಣಾಟಕದೇಶಮಧ್ಯೊಲ್ಲಸತ್ಯವರ್ಣ​ ನದಿ ತೀರವಿಲಸಿತಬಾಲಚಂದ್ರ ಪುರಸ್ಥಿತ ಸರ್ವವಿದ್ಯಾವಿಶಾರದ ನಾರಸಿಂಹಶಾಸ್ತ್ರಿವಯ್ಯ ವಿರಚಿತ ಸರ್ವಲೋಕೋಪಕಾ ರಕ ಕರ್ಣಾಟಕಭಾಷಾವಿಶದೀಕೃತ ವೈದ್ಯಸಾರಸಂಗ್ರಹೇ ಎಂಬ ಗದ್ಯವಿರುವುದರಿಂದ ನಾರಸಿಂಹಶಾಸ್ತ್ರಿ ಈ ಗ್ರಂಥವನ್ನು ಬರೆದ ತನ್ನ ಪೋಷಕನಾದ ಚೆನ್ನರಾಜನ ಹೆಸರಿನಲ್ಲಿ ಪ್ರಕಟಿಸಿರಬಹುದೆಂದು ತೋ ರುತ್ತದೆ ಈಗ್ರಂಥಕ್ಕೆ ನಾರಸಿಂಹಭಟ್ಟರ ಸಂಹಿತೆ ಎಂಬ ಹೆಸರ ಉಂಟು. ವಾದಿರಾಜ ಸು 1570 ಈತನು ವೈಕುಂಠವರ್ಣನೆ, ಸ್ವಪ್ನ​ಗದ್ಯ, ಲಕ್ಷ್ಮಿಯ ಶೋಭಾನೆ, ಕೀರ್ತನೆಗಳು, ಭಾರತತಾತ್ಪರನಿರ್ಣಯಟೀಕೆ ಇವುಗಳನ್ನು ಬರೆದಿದ್ದಾನೆ. ಇವನು ಮಾಧ್ವ ಕವಿ; ಉಡುಪಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸೋದೆ ಮಠದ ಸ್ವಾಮಿಯಾಗಿದ್ದನು ಸೋದೆಯಲ್ಲಿ ಈತನ ಬೃಂದಾವನವಿದೆ, ಇವ ನು ವ್ಯಾಸರಾಯನಲ್ಲಿ (ಸು. 1525) ಓದಿದಂತೆಯೂ 1607ರಲ್ಲಿ ಗತಿಸಿದಂತೆ ಯೂ ತಿಳಿಯುತ್ತದೆ. ಅನೇಕವಾದಿಗಳನ್ನು ವಾದದಲ್ಲಿ ಜಯಿಸಿದುದರಿಂದ ಈತನಿಗೆ ಈಹೆಸರು ಬಂದಂತೆ ಪ್ರತೀತಿಯಿದೆ. ಈತನ ಗ್ರಂಥಗಳಲ್ಲಿ ಹ ಯವದನ ಎಂಬ ಅಂಕಿತವು ಉಪಯೋಗಿಸಿದೆ. ಇವನ ಗ್ರಂಥಗಳಲ್ಲಿ | 1: ವೈಕುಂಠವರ್ಣನೆ ಇದು ಸಾಂಗತ್ಯ, ಹಾಡು ಇವುಗಳನ್ನು ಒಳಕೊಂಡಿದೆ; ಸಂಧಿ 4. ಇದಕ್ಕೆ ತತ್ವಸಾರದ ಸೊಬಗಿನಸೋನೆ ಎಂಬ ಹೆಸರೂ ಉಂಟು. ಇದರ ಲ್ಲಿ ಪ್ರತಿಪಾದಿತವಾದ ವಿಷಯವು ಈಪದ್ಯಗಳಲ್ಲಿ ಹೇಳಿದೆ