ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ? ದೊಡ್ಡ ತಿಮ್ಮ ದಾಸಿ 68) ನೀತಿ ಪಾಪವಾವುದು ಪರನಿಂದೆಯು ನರಕದ | ಕೂಪವವುದು ದಾರಿದ್ರ | ತಾಪವಾವುದು ಘನಚಿಂತೆ ಸುನದ | ರೂಪವಾವು ಕ್ಷಮೆದಮಯು-1 ಬಿಜ್ಜಳನ ಕುಮಾರಿ | ಚಂದದ ಕನಕಲತೆಯ ಕಟ್ಟಿ ತುದಿಯೊಳು | ಹೊಂದಾವರೆ ಸೇರಿದಂತೆ | ಅಂದವಡೆದ ನಳಿತೋಳಂಗೈಬೆರ | ಛಂದವೊಪ್ಪಿದವು ಕಾಮಿನಿಗೆ . ಅಂಗಜಭವನು ಜಗಂಗಳ ಗೆಲುವರೆ 1 ರಂಗುವಡೆದ ನೀಲದಲಿ | ಹೊಂಗಿ ಹೊಯ್ದ ಗೂಡಾರವೊ ಎನೆ ಕೋಮು | ಲಾಂಗಿಯ ಬಲು ಮುದಿಯೆಸೆಗು! -- - ದೊಡ್ಡತಿಮ್ಮದಾಸ, ಸು. 17oo ಈತನು ರಾಮಾನುಜವಿಜಯವನ್ನು ಬರೆದಿದ್ದಾನೆ. ಇವನು ದೊಡ್ಡ ತಿಮ್ಮದಾಸನ ಮಗನು; ಲಕ್ಷ್ಮೀ ರಮಣಭಕ್ಕನು; ಸೂತಕುಲೋದ್ಭವ ಎಂದು ಹೇಳಿಕೊಂಡಿದ್ದಾನೆ. ಇವನ ಕಾಲತ ಸುಮಾರು 17oo ಆಗಿರ ಬಹುದು. ಇವನ ಗ್ರಂಥ ರಾಮಾನುಜವಿಜಯ ಇದು ಗದ್ಯರೂಪವಾಗಿದೆ; ನಮಗೆ ದೊರೆತ ಅಸಮಗ್ರ ಪ್ರತಿಯಲ್ಲಿ 25 ಪ್ರಕರಣಗಳಿವೆ, ಪ್ರಕರಣಗಳ ಕೊನೆಯಲ್ಲಿ ಒಂದೊಂದು ಕಂದವಿದೆ ಇದರಲ್ಲಿ ರಾಮಾನುಜಗುರುವಿನ ಚರಿತವೂ, ವಿಷ್ಣು ಪಾರಮ್ಯವೂ, ವಿಶಿಲ್ಲಾ ದೈತದುತವೂ ನಿರೂಪಿಸಲ್ಪಟ್ಟಿವೆ ಈ ವಿಷಯಗಳನ್ನು ಶಿವನು ನಾರದ ನಿಗೆ ಬೋಧಿಸಿದಂತೆ ಕವಿ ಹೇಳುತ್ತಾನೆ. ಈ ಗ್ರಂಥಕ್ಕೆ ಕೈವಲ್ಯಚಿಂತಾ ಮಣಿ ಎಂಬ ಹೆಸರೂ ಇರುವಂತೆ ತೋರುತ್ತದೆ. ಪ್ರಕರಣಾಂತ್ಯದಲ್ಲಿ ಈ ಗದ್ಯವಿದೆ ಇದು ಶ್ರೀಮದ್ರಾಮಾನುಜಾಚಾತ್ಯರ ಮತಸಂಪ್ರದಾಯಕ್ರಿಯಶಿಷ್ಯನಪ ಶ್ರೀಲಕ್ಷ್ಮೀರಮಣನ ಶ್ರೀಪಾದಭಕ್ತಿಯುಕ್ತನಪ್ಪ ಸೂತಕುಲೋದ್ಭವ ದೊಡ್ಡತಿಮ್ಮ ದರಿ ಸನ ಕುಮಾರ ದೊಡ್ಡತಿಮ್ಮ ದಾಸವಿರಚಿತಮಪ್ಪ ರಾಮಾನುಜವಿಜಯದೊಳ್, 70