ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಶಿವಲಿಂಗಯೋಗಿ ಶಿರ್ವ ៤ ಮಂಜನಾಥ ಭೂಪಾಲ, ಸು Iro೧ ಈತನು ವೈದ್ಯಸಾರ ಸಂಗ್ರಹವನ್ನು ಬರೆದಿದ್ದಾನೆ. ಇವನು ರಾಜವಂ ಶಕ್ಕೆ ಸೇರಿದವನು, “ಕಪಿಲಾಕೌಂಡಿನೀಸಂಗಮಕ್ಷೇತ್ರನಿವಾಸ ನಂಜುಂಡೇ ಕಕೃಪಾಲಣ್ಣ ವಿಭವಂ, ಶಾಂಕರಪುರವರಾಧೀಶಂ” ಎಂದು ಹೇಳಿಕೊಂಡಿ ದ್ದಾನೆ. ಈತನು ಸುಮಾರು 1700 ರಲ್ಲಿ ಇದ್ದಿರಬಹುದು. ಸದಾಶಿವ ಸು 1700 ಇತನು ಒಂದು ಕಾಲಜ್ಞಾನವನ್ನು ಬರೆದಿದ್ದಾನೆ. ಇವನು ಬ್ರಾಹ್ಮ ಣಕವಿಯೆಂದು ತೋರುತ್ತದೆ, ಇವನ ಕಾಲವು ಸುಮಾರು 1700 ಆಗಿರ ಬಹುದು. ಶಿವಲಿಂಗಯೋಗಿ ಸು, 17oo ಈತನು ಶಿವಸರ್ವಾ೦ಗಸ್ತುತಿಯನ್ನು ಬರೆದಿದ್ದಾನೆ, ಇವನು ವೀರ ಶಿವಕವಿ, ತುಂಗಭದ್ರಾನದೀತೀರವಿರಾಜಿತವರ್ಗ ಪುರದ ಗುರುನಂಜೇಶ್ವರನ ಶಿಷ್ಯನು, ಇವನ ಕಾಲವು ಸುಮಾರು 170೧ ಆಗಿರಬಹುದು. ಇವನ ಗ್ರಂಥ ಶಿವಸರ್ವಾ೦ಗಸ್ತುತಿ ಪದ್ಯ 35, ಇದಕ್ಕೆ ಶಿವಸರ್ವಾವಯವಸ್ತೋತ್ರ ಎಂಬ ಹೆಸರೂ ಉಂಟು, ಗ್ರಂಥಾಂತ್ಯದಲ್ಲಿ ಈ ಗದ್ಯವಿದೆ ಇದು ಪರ ಮತುಂಗಭದ್ರಾನದೀತೀರವಿರಾಜಿತವರ್ಗ ಪುರಾಲಯ ಶ್ರೀಮದ್ಗುರು ನಂಜೇಶ್ವರಾಷ್ಟ್ರಯದಿದ್ದಶಿವಯೋಗೀಂದ್ರಶ್ರೀಚರಣಾರುಣಸರೋಜಸರಾಗದಿರೇಫಾ ಯಮಾನ ಶಿವಲಿಂಗಯೋಗಿನಿರಚಿತಮಾದ ಶಿವಸರ್ವಾ೦ಗಸ್ತುತಿ. ಇದರಿಂದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ. ಶ್ರೀಮತ್ಪಾ , ಲೇಯಶೈಲಾಧಿಪತನುಜೆ ಯವಕ್ತಾಬ್ಬ ಮಿತ್ರಂ ಪವಿತ್ರಂ | ವೌಮಾತ್ಮಾ ಕೆ೯೦ದುಧಾತ್ರೀಜಲಶಿಖಪವಮಾನಾಷ್ಟ ಕಾಯಂ ವಿಮಾಯಂ || ಧಾಮಶ್ರೀಸೋಮನೇಮಾಭರಣಯುತಜಟಜಟಕಾಂತಂ ಮಹಾಂತಂ | ಹೇಮಾಗಾಗಾರನನ್ನ ಸಲಹುಗೆ ಸತತಾನಂದವೇಶಂ ಮಹೇತಂ ||