ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

374 ಕರ್ಣಾಟಕ ಕವಿಚರಿತೆ [17 ನೆಯ ಕಂರೀರವನರಸರಾಜವಿಜಯ ಇದು ಸಾಂಗತ್ಯದಲ್ಲಿ ಬರೆದಿದೆ, ಸಂಧಿ 26, ಪದ್ಯ 2870. ಇದರಲ್ಲಿ " ತರುಣೇಜನನೇತೋತ್ಸಲಚಂದ್ರನ ಸರಸವಿದ್ಯಾವಿಶಾರದನ ನರಸರಾ ಜೇಂದ್ರನ ಚರಿತೆ” ಹೇಳಿದೆ. « ಈ ಮಹಿಮನ ಸುಚರಿತ್ರಶೌರ್ಯಗಳ ಸುತ್ರಾಮಭೋಗವ ಧರ್ಮದಿರವ ನೇಮದಿ ಮಾಂಗಲ್ಯ ಕೃತಿಯಾಗಿ ಪ್ಲೇಲ್ದನು” ಎಂದು ಕವಿ ಹೇಳುತ್ತಾನೆ. ಈ ಗ್ರಂಥದ ಉತ್ಕೃಷ್ಟತೆ ಈ ಪದ್ಯ ದಲ್ಲಿ ಹೇಳಿದೆ. -

ಸೊಕ್ಕು ಜವ್ವನೆಯ ತಕ್ಕೆ ಯಸವಿಯಂದದಿ | ಸಕ್ಕರೆಚಿಲುಪಾಲಿನಂತೆ | ಅಕ್ಕ ರದಲಿ ಕೇಳುವರಿಗತಿಹರುಷವ | ಮಿಕ್ಕೆಸಗುವುದೀಕಾವ್ಯ | ಗ್ರಂಥಾವತಾರದಲ್ಲಿ ಪಶ್ಚಿಮರಂಗಧಾಮಸ್ತುತಿ ಇದೆ. ಬಳಿಕ ಕವಿ ಲಕ್ಷ್ಮೀನರಸಿಂಹ ಲಕ್ಷ್ಮಿಕಾಂತ, ಮೈಸೂರು ತ್ರಿಣಯನ, ಚೆನ್ನನಂ ಜುಂಡ, ಗಣೇಶ, ಸರಸ್ವತಿ, ಬೆಟ್ಟದಚಾಮುಂಡಿ ಇವರುಗಳನ್ನು ಕ್ರಮ ವಾಗಿ ಹೊಗಳಿದ್ದಾನೆ. ಈ ಗ್ರಂಧದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ;

ಕಬ್ಬು ಅಲರುವಿಲ್ ಪುಷ್ಪಬಾಣಗಳತಿಮೃದುವವ | ಕಳುಕರು ಜನರೆಂದು ಚಂದ್ರ | ಅಳಿಯನ ಬಿಲ್ಲೆ ಬೆಳಸಿದಂತೆ ಧವಳೇಕ್ಷು | ಗಳ ಗದ್ದೆರಾಜಿಸುತಿಹುವು ||

ತೆಂಗು ಗಂಗೆಯ ಧರಿಸಿ ಭಸಿತವಿಟ್ಟು ಫಳದೊಳು | ಹಿಂಗದೆ ಮುಕ್ಕಣ್ಣನಾಂತು | ಅಂಗಜಹರನಂತೆಯಾರಾಮದೊಳಗಾ | ತೆಂಗಿನಮರಗಳೊಪ್ಪಿಹುವು ||

ಅಂಗಡಿ ಬಿಳಿಮುತ್ತು ಕೆನ್ನೀರುಮುತ್ತು ಕಟ್ಟಾಣಿಮು| ತಳವಟ್ಟ ಮೂಗುತಿಮುತ್ತು | ತೊಳಗುವ ಕಂರಮಾಲೆಯು ತೋರಿಮುತ್ತಿನ | ಮುಲಗೆಗಳೆಸೆದು ವರ್ಧಿಯಲಿ ||

ಭೋಜನ ಸಣ್ಣ ಸೇವೆಗೆ ಹಾಲುಂಡ ಜೇನ್ನೊಡ ಶುಭ್ರ | ವಣ್ಣದುದ್ದಿನ ಸವಿಗಡುಬು | ಬಣ್ಣಿಸೆ ಹೂರಣಗಡುಬು ಭೂಪಗೆ ಮುದ್ದು | ವೆಣ್ಣುಗಳೆಡೆಮಾಡಿದರು || ಚಿಲುಪಾಲು ತಂಬಾಲು ಕೆನೆವೆರಸಿದ ಪಾಲು | ಸುಲಲಿತಬಟ್ಟವಾಲುಗಳ || ಸಲೆ ಕಟ್ಟು ಮೊಸರ್ಗಳ ಘಟ್ಟಿ ಮಜ್ಜಿಗೆಗಳ | ಲಲನೆಯರುಣಬಡಿಸಿದರು |