228 ಕರ್ನಾಟಕ ಕವಿಚರಿತೆ [16 ನೆಯ ಸ್ವಾಮಿಗಳು ಭಲ್ಲಾ ತಕೀಪುರವರಾಥೀಶ್ವರ ಬೈರಾಗಿಗೆ ಬರಸಿಕೊಟ್ಟ ಕಾವ್ಯ ಸಾರಕ್ಕೆ ಮಂಗಳಮಹಾಶ್ರೀ' ಎಂದಿರುವುದರಿಂದ ಈ ಗ್ರಂಥವು ಅಭಿನವ ವಾದಿ ವಿದ್ಯಾನಂದನಿಂದ ಸಂಕಲಿತವಾಗಿರಬಹುದೆಂದು ಊಹಿಸಬಹು ದಾಗಿದೆ.
ಈತನು ಜೈನಕವಿ. ಈ ಗ್ರಂಥದಲ್ಲಿ ಚಂದ್ರಶೇಖರನ (ಸು. 1430) ಗುರುಮೂರ್ತಿಶ೦ಕರಶತಕದಿಂದ ಪದ್ಯವನ್ನುಅನುವಾದಮಾಡಿರುವುದರಿಂದ ಕವಿ 1430ಕ್ಕಿಂತ ಈಚೆಯವನಾಗಿರಬೇಕು. ನಗರದ ತಾಲ್ಲೂಕಿನ 46ನೆಯ ಶಾಸನದಲ್ಲಿ (ಸು. 1580)ಒಬ್ಬವಾದಿವಿದ್ಯಾನಂದನನ್ನು ವಿಶೇಷವಾಗಿ ಸ್ತುತಿಸಿದೆ.ಈತನು ಉಪ ನ್ಯಾಸವನ್ನು ಮಾಡುವುದರಲ್ಲಿಯೂ ವಾದಿಗಳನ್ನು ಜಯಿಸುವುದರಲ್ಲಿಯೂ ಬಹಳಚತು ರನೆಂದೂ, ನಂಜರಾಯಪಟ್ಟಣದ ನಂಜಿದೇವರಾಜ, ಸಾತವೇಂದ್ರರಾಜನಾದ ಕೇಸರಿ ವಿಕ್ರಮ, ಸಾಳ್ವಮಲ್ಲಿರಾಯ, ಗುರುನೃಪಾಲ, ಸಾಳುವದೇವರಾಯ, ನಗರಿರಾಜ್ಯದ ರಾಜರು, ಬಳಿಗೆಯ ನರಸಿಂಹರಾಜ, ಕಾರಕಳದ ಭೈರವರಾಜ, ನರಸಿಂಹಕುಮಾರ ಕೃಷ್ಣರಾಜ, ಇವರುಗಳ ಆಸ್ಥಾನದಲ್ಲಿಯೂ, ಶ್ರೀರಂಗಪಟ್ಟಣ, ಬಿದಿರೆ, ಕೊಪಣ, ಬೆಳುಗುಳ, ಗೇರಸೊಪ್ಪೆ ಈ ಸ್ಥಳಗಳಲ್ಲಿಯೂ ವಾದಿಗಳನ್ನು ಜಯಿಸಿ ಸ್ವಮತಸ್ಥಾಪನ
ವನ್ನು ಮಾಡಿದನೆಂದೂ ಮೇಲೆಹೇಳಿದ ಸ್ಥಳಗಳಲ್ಲಿ ಧರ್ಮಕೆಲಸಗಳನ್ನೂ ಮಾಡಿದ ನೆಂದೂ ಆಶಾಸನದಲ್ಲಿ ಹೇಳಿದೆ. ಈ ರಾಜರುಗಳಲ್ಲಿ 1509ರಿಂದ 1529 ರವರೆಗೆ ಆಳಿದ ನರಸಿಂಹಕುಮಾರನಾದ ವಿಜಯನಗರದ ಕೃಷ್ಣದೇವರಾಯನನ್ನು ಹೇಳಿರುವುದರಿಂದ ಈ ವಿದ್ಯಾನಂದನು ಆ ರಾಜನ ಸಮಕಾಲದವನು ಎಂಬುದು ವ್ಯಕ್ತವಾಗಿದೆ. ಇವನೇ ಕವಿಯಾಗಿರಬಹುದೆಂದು ತೋರುತ್ತದೆ. ಹಾಗಿದ್ದಲ್ಲಿ ಗ್ರಂಧಾಂತ್ಯದಲ್ಲಿ ಕೊಟ್ಟಿ ರುವ ವಿಜಯಸಂವತ್ಸರವು 1533 ಆಗಬೇಕು. ಗೇರಸೊಪ್ಪೆಗೆ ಭಲ್ಲಾ ತಕೀಪುರವೆಂಬ ನಾಮಾಂತರವುಂಟು. ಕವಿ ಆ ಸ್ಥಳದವನಾಗಿರಬಹುದು. ಮೇಲಣ ಶಾಸನದಲ್ಲಿ ಇವನ ವಿಷಯವಾಗಿ ಈ ಅಂಶಗಳೂ ತಿಳಿಯುತ್ತವೆ---ದೇವರಾಯನ ಸೋದರದಳೆಯನೂ ಪದ್ಮಾಂಬಾಪುತ್ರನೂ ಆದ ಸಾಳುವಕೃಷ್ಣದೇವನು ಇವನನ್ನು ಗೌರವಿಸಿದನು. ಇವನ ಮಗ ವಿಶಾಲಕೀರ್ತಿ. ಅವನ ಮಗ ದೇವೇಂದ್ರಕೀರ್ತಿ, ಈತನು ಭೈರವೇಂದ್ರವಂಶದ ಪಾಂಡ್ಯನೃಪನಿಂದ ಪೂಜಿತನಾಗಿದ್ದನು. ಇವನ ಮಗ ವರ್ಧಮಾನ. ಇದೂ ಅಲ್ಲದೆ ಆ ಶಾಸನದ
2. ಇಲ್ಲಿ ಏನೋ ತಪ್ಪು ಬಿದ್ದಿರುವಂತೆ ತೋರುತ್ತದೆ.