ಈ ಪುಟವನ್ನು ಪರಿಶೀಲಿಸಲಾಗಿದೆ
424 ಕರ್ಣಾಟಕ ಕವಿಚರಿತೆ. [17 ನೆಯ
ತುರುಕರ ರಾಜಿಕದಲ್ಲಿ ಜನರು ದೇಶವನ್ನು ಬಿಡುವುದು, ನಡೆವ ದಂಡನು ಕಂಡು ಗಡಿಯ ನಾಯಕರೆಲ್ಲಾ | ಮಡಕೆಯನಿಂಬು
ಮಾಡುವರು| ಅಡಗಿದ್ದ ತೆಲುಗರು ಗಿಡವ ಹೊಕ್ಕರು ತಾವು| ತಡೆಯ ತಡೆಯದೋಡಿದರು ಕೊಂಕಣರು || ಕುಱುಯ ಹಿಂಡುಗಳನು ತೆರಳಿಸಿಕೊಳ್ಳುತ್ತ | ಮಱ'ಗಳ ಹೆಗಲೊಳು ಹೊತ್ತು | ಮಱುಗುತ್ತ ಹೆಂಡಿರ ಕೈಯಲಿ ಹಿಡಿಕೊಂಡು | ಕುಱುಬರ ಗೂಳೆಯ ನಡೆಯೆ || ಓದುವ ಹಲಗೆಕಡಿತಬಳಹದ ಹೊಱೆ | ವೇದಪುಸ್ತಕಪೇಟಿಕೆಯ | ಓದಿಸುವಣ್ಣಗಳೊಡಗೊಂಡು ಬಂದರು | ಸಾಧಿಸಿ ಗೂಳೆಯ ನಡೆಯೆ || ಆಡೆಗಲ್ಲು ತಿದಿ ಮುಟ್ಟು ಹಿಡಿವ ಇಕ್ಕೞ ಕೈಯ | ಬಿಡದೆ ಕೆತ್ತುವ ಬಾಚಿಗಳು| ಎಡದಕೈಯಲಿ ಉಳಿಹಿಡಿದ ಪಂಚಾಳರು | ನಡೆದರು ಗೂಳೆಯದೊಳಗೆ ||
ಕುಮಾರರಾಮನ ಹೆಂಡತಿಯ ಉಕ್ಕಿ
ಗಂಡನೆ ಗತಿ ಮತಿ ಗಂಡನ ಕುಲದೈವ | ಗಂಡನೆ ಪ್ರಾಣಕ್ಕೋಡೆಯ | ಗಂಡರಗಂಡ ಉದ್ದಂಡರಾಮನ ಬಿಟ್ಟು | ಮುಂಡೆಗೂೞುಂಒವಳಲ್ಲ ||
ಗುರುಪ್ರಸಾದ ಸು 165೦ ಈತನು ಸುಯೋಗಚಾರಿತ್ರವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣ ಕವಿ; ಮಾಧ್ವನೆಂದು ತೋರುತ್ತದೆ. ಇವನ ಕಾಲವು ಸುಮಾರು1650 ಆಗಿರ ಬಹುದೆಂದು ಊಹಿಸುತ್ತೇವೆ. ಇವನ ಗ್ರಂಥ ಸುಯೋಗಚಾರಿತ್ರ ಇದು ವಾರ್ಧಕಷಟ್ಟದಿಯಲ್ಲಿ ಬರೆದಿದೆ; ಸಂಧಿ11, ಪದ್ಯ775.ಇದಕ್ಕೆ ವೈರಾಗ್ಯಪುರಾಣ ಎಂಬ ಹೆಸರೂ ಉಂಟು. ಇದರಲ್ಲಿ ಯೌವನಾಶ್ವ ಪ್ರಭಾವತಿ ಇವರ ಮಗನಾದ ಸುಯೋಗನಿಗೆ ಭಾರದ್ವಾಜನು ವೈರಾಗ್ಯ ಸ್ಥಿತಿಯನ್ನು ಬೋಧಿಸಿದ ಕಥೆ ಹೇಳಿದೆ. ಆರಂಭದಲ್ಲಿ ಮುಖ್ಯಪ್ರಾಣದೇವರ ಸ್ತುತಿಯೂ ಅಲ್ಲಲ್ಲಿ ತಿರುಪತಿ ಶ್ರೀನಿವಾಸನ ಅಂಕಿತವೂ ಇವೆ. ಗ್ರಂಥಾಂ ತ್ಯದಲ್ಲಿ ಈ ಗದ್ಯವಿದೆ_ ಇತಿ ಶ್ರೀವೈರಾಗ್ಯಪುರಾಣೇ ಸೂತಶೌನಕಸಂವಾದೇ
ಶ್ರೀಮದ್ಗುರುಪ್ರಸಾದವಿ ರಚಿತೇ ಸುಯೋಗಚಾರಿತ್ರೇ.