ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

109 ಶತಮಾನ? ಮೋಳಿಗಯ್ಯ, (3) ಬೆಟ್ಟದಮೇಲೊಂದುಮನೆಯ ಮಾಡಿ ಮೃಗಂಗಳಿಗಂಜಿದಡೆಂತಯ್ಯಾ ? ಸಮುದ್ರದ ತಡಿಯಲ್ಲಿ ಮನೆಯ ಮಾಡಿ ನೊರೆತೆರೆಗಳಿಗಂಜಿದಡೆಂತಯ್ಯಾ ? ಸಂತೆಯೊ ಭಗೊಂದುಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯಾ ? ಚೆನ್ನ ಮಲ್ಲಿಕಾರ್ಜುನದೇವ ಕೇಳಯ್ಯಾ, ಲೋಕದೊಳಗೆ ಹುಟ್ಟಿದಬಟಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. 8 ಮಡಿವಳಮಾಚಯ್ಯ, 1 ಈತನು ಕಲಿದೇವರ ಅಂಕಿತದಲ್ಲಿ ವಚನಗಳನ್ನು ಹೇಳಿದಂತೆ ತೋ ರುತ್ತದೆ. ವಚನ (1) ಹುಟ್ಟದ ಬೀಜವಿದ್ದ ಡೇನಯ್ಯಾ ಧರೆಯೊಳಗೆ; ಅಟ್ಟುಣಬಾರದ ಮಡ ಕೆಯಿದ್ದ ಡೇನಯ್ಯಾ ಮನೆಯೊಳಗೆ; ಶಿವ ನಿಮ್ಮ ಮುಟ್ಟಿದ ಮನವಿದ್ದ ಡೇನಯ್ಯಾ ತನು ಎನೊಳಗೆ, ಕೆಚ್ಚಲ ಕಚ್ಚಿದ ಉಣ್ಣ ಬಲ್ಲುದೇ ಕ್ಷೀರದ ರುಚಿಯನು ? ಬಚ್ಚಲೊಳಗಣ ಬಾಲಹುಟು ಬಲ್ಲುದೇ ನಿಚ್ಚಳದ ನೀರ ಸುಖವನು? ನಿಚ್ಚನಿಚ್ಚಲೋದುವ ಗಿಳಿ ಬಲ್ಲುದೇ ತ ನಗೆ ಬಹ ಬೆಕ್ಕಿನ ಬಾಧೆಯನು? ಹುಚ್ಚುಗೊಂಡ ನಾಯಿ ಬಲ್ಲುದೇ ಸಾಕಿದೊಡೆಯನನು? ಇದುಕಾರಣ ಒಡಲ ಪಡೆದಡೇನು ? ಮಡದಿಯರ ನೆರಹಿದಡೇನು ? ಒಡವೆಯ ಗರಿ ಸಿದಡೇನು ? ಶಿವನೇ ನಿಮ್ಮ ನಖಯದ ಮನುಜನ ಒಡಲೆಂಬುದು ಹೊಲೆಜೋಗಿಯ ಕೈಯ ಒಡೆದ ಸೊರೆಯಂತೆ ಕಾಣಾ ಕಲಿದೇವರದೇವ (2) ತನುನಷ್ಟ, ಮನನಷ್ಟ ನೆನಹುನಷ್ಟ ಭಾವನಷ್ಟ ಜ್ಞಾನನಷ್ಟ; ಇಂತೀ ಪಂಚನಷ್ಟದೊಳಗೆ ನಾನು ನಷ್ಟವಾದೆನು, ಆನಷ್ಟದೊಳಗೆ ನೀನು ನಷ್ಟವಾದೆ, ಕಲಿದೇ ವರದೇವಾ ಎಂಬ ನುಡಿ ನಿಶ್ಯಬ್ದಬ್ರಹ್ಮಮುಚ್ಯತೇ ಎನುತಿತ್ತು. 9 ಮೋಳಿಗಯ್ಯ. ಈತನ ವಚನಗಳಲ್ಲಿ ನಿಷ್ಕಳಂಕಮಲ್ಲಿಕಾರ್ಜುನ ಎಂಬ ಅಂಕಿತವಿ ರುವಂತೆ ತೋರುತ್ತದೆ, ವಚನ ಬೀಜ ವೃಕ್ಷವ ನುಂಗಿತ್ತೊ ವೃಕ್ಷ ಬೀಜವ ನುಂಗಿತ್ತೊ ಎಂದаಲಿ ದಾಗಲೇ ಭಕ್ತಿಸ್ಥಲ, ಮುತ್ತು, ಜಲವ ನುಂಗಿತ್ತೊ ಬಲವು ಮುತ್ತ ನುಂಗಿತ್ತೊ ಎಂಬುದ ನದಾಗಲೇ ಮಾಸೇಶ್ವರಸ್ಥಲ, ಪ್ರಭೆ ಪಾಷಾಣವ ನುಂಗಿತ್ತೊ ಪಾಷಾಣವು [, Vol. I, I472, Zhad , I$6.