ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಬ್ಬರವಿಳಿತಗಳು
ಈ ಪುಟದ ಪ್ರೂಫ್ ರೀಡಿಂಗ್ ಆಗಬೇಕಿದೆ ; ಆಮೇಲಷ್ಟೇ ಈ ಸಾಲು ತೆಗೆದು ಹಾಕಿ
ಉಬ್ಬರವಿಳಿತಗಳು: ಒಂದು ವಸ್ತುವಿನ ಗುರುತ್ವಾಕರ್ಷಣ ಬಲದಿಂದ ಇನ್ನೊಂದು ವಸ್ತುವಿನ ಮೇಲೆ ಉಂಟಾಗುವ ಪ್ರತಿಬಲಗಳು (ಸ್ಟ್ರೆಸಸ್) ಮತ್ತು ಅವುಗಳಿಂದ ಆ ವಸ್ತುವಿನಲ್ಲಿ ತಲೆದೋರುವ ಪರಿಣಾಮಗಳು (ಟೈಡ್ಸ್). ಎಲ್ಲ ಆಕಾಶಕಾಯಗಳೂ ಭೂಗೋಳದ ಗಾಳಿ ನೆಲ ನೀರುಗಳ ಮೇಲೆ ಗುರುತ್ವಾಕರ್ಷಣ ಬಲಗಳನ್ನು ಬೀರಿ ಪ್ರತಿಬಲಗಳನ್ನು ಉತ್ಪಾದಿಸುತ್ತವೆ. ಆದರೆ ಸೂರ್ಯ ಚಂದ್ರರ ಪ್ರಭಾವವೇ ಇಲ್ಲಿ ಅತ್ಯಧಿಕ ಮತ್ತು ಆ ಕಾರಣದಿಂದ ಗಮನಾರ್ಹ. ಗಾಳಿಯಲ್ಲಿ ಉಂಟಾಗುವ ಉಬ್ಬರವಿಳಿತವನ್ನು ಕಾಣುವುದು ಸಾಧ್ಯವಿಲ್ಲ: ಬೇರೆ ಬಲಗಳೂ ಅಲ್ಲಿ ಕ್ಷೋಭೆ ಉಂಟುಮಾಡುವುದರಿಂದ ಇದೇ ಉಬ್ಬರವಿಳಿತದ ಪರಿಣಾಮವೆಂದು ಖಚಿತವಾಗಿ ಹೇಳುವಂತಿಲ್ಲ. ನೆಲ ಸರಿಸುಮಾರು ದೃಢಪದಾರ್ಥ. ದೀರ್ಘಕಾಲ ಸೂಕ್ಷ್ಮಾವ ಲೋಕನದಿಂದ ನೆಲದ ಉಬ್ಬರವಿಳಿತವನ್ನು ಗುರುತಿಸಬಹುದು. ಇಂಥ ತಿಳಿವಳಿಕೆ ಆ ಪ್ರದೇಶದ ತೊಗಟೆ ಮತ್ತು ಒಳರಚನೆಗಳನ್ನು ಕುರಿತು ಉಪಯುಕ್ತ ಮಾಹಿತಿಯಾಗಿದೆ. ಭೂಮಿ ಶುದ್ಧಗೋಳಾಕಾರವಾಗಿಲ್ಲದಿರಲು ಒಂದು ಕಾರಣ ಉಬ್ಬರವಿಳಿತ. ಸಮುದ್ರ ಅಥವಾ ಇತರ ಜಲರಾಶಿ ಆವರಣದ ನೆಲವನ್ನು ಕುರಿತು ನಿಯತಕಾಲಿಕವಾಗಿ ಉಬ್ಬಿ ಇಳಿಯುವ ಘಟನೆಗೆ ಸಾಮಾನ್ಯವಾಗಿ ಉಬ್ಬರವಿಳಿತವೆಂದು ಹೆಸರು. ಉಬ್ಬರವಿಳಿತಗಳು ಬೇರೆ ಬೇರೆ ಪ್ರದೇಶಗಳಲ್ಲಿ ಎಷ್ಟರಮಟ್ಟಿಗೆ ಯಾವ ಕಾಲದಲ್ಲಿ ಉಂಟಾಗುತ್ತವೆಂಬುದನ್ನು ವೈಜ್ಞಾನಿಕ ರೀತಿಯಲ್ಲಿ ವಿಚಾರ ಮಾಡಿದ್ದಾರೆ. ಸೂರ್ಯ, ಚಂದ್ರ ಮತ್ತು ಭೂಮಿಗಳ ಚಲನೆ ಖಚಿತವಾಗಿ ತಿಳಿದಿರುವುದರಿಂದ ಉಬ್ಬರವಿಳಿತಗಳಿಗೆ ಕಾರಣವಾದ ಬಲಗಳನ್ನು ತರ್ಕಿಸಬಹುದು. ಆದರೆ ಹೀಗೆ ಪಡೆದ ಉಬ್ಬರವಿಳಿತಗಳ ಜ್ಞಾನ ಅಷ್ಟೊಂದು ಸಮಂಜಸವಾಗಿಲ್ಲ. ಸಾಗರದ ಪಾತ್ರಗಳಿಗೆ ಬಲು ತೊಡಕಿನ ಆಕೃತಿಗಳಿರುವುದೇ ಇದಕ್ಕೆ ಕಾರಣ. ಇನ್ನೊಂದು ರೀತಿಯ ಪ್ರಕಾರ, ನಿರ್ದಿಷ್ಟ ಪ್ರದೇಶಗಳಲ್ಲಿ ಆಯಾ ಕಾಲಕ್ಕೆ ಉಂಟಾಗುವ ಉಬ್ಬರವಿಳಿತಗಳನ್ನು ಗುರುತು ಹಾಕಿ, ಮುಂದೆ ಅದೇ ಕಾಲದಲ್ಲಿ ಅದೇ ರೀತಿಯ ವ್ಯತ್ಯಾಸಗಳು ಆಗಬಹುದೆಂದು ಊಹಿಸಬಹುದು. ಇದೂ ಅಷ್ಟೇನೂ ಸಮರ್ಪಕ ವಾದ ವಿಧಾನವಲ್ಲ. ನೆಲ ಮತ್ತು ಜಲದ ಪ್ರತಿಯೊಂದು ಕಣವನ್ನೂ ಚಂದ್ರ ಆಕರ್ಷಿಸುತ್ತದೆ. ಇಲ್ಲಿ ಬಲಗಳು ಒಂದೇ ದಿಕ್ಕಿನಲ್ಲಿ ಸರಿಸಮಾನವಾಗಿದ್ದರೆ ಉಬ್ಬರವಿಳಿತಗಳು ಸಂಭವಿಸವು. ಅವುಗಳ ಮಾನ ಮತ್ತು ದಿಕ್ಕುಗಳಲ್ಲಿ ಕೊಂಚ ವ್ಯತ್ಯಾಸವಿರುವುದೇ ಉಬ್ಬರವಿಳಿತಗಳಿಗೆ ಕಾರಣ. ಚಿತ್ರದಲ್ಲಿ ಚಂದ್ರ (ಒ) ಭೂಮಿಯಮೇಲಿನ ಂ ಬಿಂದುವಿನ ನೆತ್ತಿಯಲ್ಲಿದೆ. ಃ ಬಿಂದು ಂ ಯ ವ್ಯಾಸೀಯ ವಿರುದ್ಧ ದಿಕ್ಕಿನಲ್ಲಿದೆ: ಆದ್ದರಿಂದ ಅದು ಂಗೆ ಅಧೋಬಿಂದು. ಂ ಬಿಂದು ಚಂದ್ರನಿಗೆ ಅತಿ ಸಮೀಪವಾಗಿರುವುದರಿಂದ ಅಲ್ಲಿ ಚಂದ್ರನ ಗುರುತ್ವಾಕರ್ಷಣಬಲದ ಪ್ರಭಾವ ಗರಿಷ್ಠ. ಃಯಲ್ಲಿ ಈ ಪ್ರಭಾವ ಕನಿಷ್ಠ. ಇನ್ನು ಅ,ಆ ಗಳಲ್ಲಿ ಬಲದ ಮಾನಗಳು ಒಂದೇ ಆಗಿದ್ದರೂ ದಿಕ್ಕುಗಳು ಬೇರೆ. ಹೀಗೆ ಭೂಮಿಯ ಒಂದೊಂದು ಕಣದ ಮೇಲೂ ಪತನವಾಗುವ ಚಂದ್ರನ ಗುರುತ್ವಾಕರ್ಷಣಬಲದ ಮಾನ ಮತ್ತು ದಿಕ್ಕುಗಳು ಬೇರೆ ಬೇರೆಯಾ ಗಿವೆ. ಇವುಗಳ ಪರಿಣಾಮವಾಗಿ ಭೂಮಿಯ ಮೇಲೆ ಉಬ್ಬರವಿಳಿತಗಳು ತಲೆದೋರುವುವು. ಂಯಲ್ಲಿ ಸಾಗರವಿದ್ದರೆ ಅಲ್ಲಿ ಉಬ್ಬರವೂ ಃಯಲ್ಲಿ ಇಳಿತವೂ ಉಂಟಾಗುತ್ತವೆ. ಅಂ ಮತ್ತು ಃಂ ಕಡೆಗಳಿಂದ ನೀರು ಂ ದಿಕ್ಕಿನಲ್ಲಿ ಧಾವಿಸಿ ಂಯಲ್ಲಿ ನೀರಿನ ಮಟ್ಟ ಗರಿಷ್ಠವಾಗುವುದು. ಇದೇ ಕಾರಣದಿಂದ ಃಯಲ್ಲಿ ನೀರಿನಮಟ್ಟ ಕನಿಷ್ಠವಾಗುವುದು. ಚಿತ್ರದಲ್ಲಿ ಔ ಭೂಮಿಕೇಂದ್ರ. ಇಲ್ಲಿರುವ ಕಣದ ಮೇಲೆ ಪತನವಾಗುವ ಚಂದ್ರನ ಗುರುತ್ವಾಕರ್ಷಣ ಬಲ ಈ ಆಗಿರಲಿ. ಈನ ದಿಕ್ಕುಔಒ. ಭೂಮಿಯ ಆವರ್ತನದಿಂದ ಜನಿಸುವ ಕೇಂದ್ರಾಪಗಾಮೀ (ಸೆಂಟ್ರಿಫ್ಯೂಗಲ್) ಬಲಕ್ಕೆ ಈ ಸಮಾನವಾಗಿದೆ. ಉಬ್ಬರವಿಳಿತಗಳು ಇದರಿಂದ ಉಂಟಾಗುವುದಿಲ್ಲ. ನೆಲ ಮತ್ತು ಜಲಕಣಗಳ ಮೇಲೆ ಪತನವಾಗುವ ಚಂದ್ರನ ಗುರುತ್ವಾಕರ್ಷಣಬಲಗಳು ಈ ಗಿಂತ ಮಾನ ಮತ್ತು ದಿಕ್ಕುಗಳಲ್ಲಿ ಭಿನ್ನವಾಗಿವೆ. ಈ ವ್ಯತ್ಯಾಸಗಳಿಗೆ ಉಬ್ಬರವಿಳಿತ ಕಾರಕಬಲಗಳೆಂದು ಹೆಸರು. ಉಬ್ಬರವಿಳಿತಕಾರಕ ಬಲ ಭೂಮಿಯ ಮೇಲಿನ ಕಣ ಮತ್ತು ಚಂದ್ರ ಇವುಗಳ ಅಂತರದ ವಿಲೋಮ ೩ನೆಯ ಘಾತ ಪ್ರಮಾಣದಷ್ಟಿದೆ. ಉಬ್ಬರವಿಳಿತಕಾರಕಬಲದ ವಿಭವ (ಪೊಟೆನ್ಷಿಯಲ್) ಙ ಈ ಕೆಳಗಿನಂತಿದೆ
ಇಲ್ಲಿ ಟ ಕಣದಲ್ಲಿರುವ ವೀಕ್ಷಕನಿಗೆ ಚಂದ್ರನ ಖಮಧ್ಯ ದೂರ, ಡಿ ಭೂಮಿ ಕೇಂದ್ರದಿಂದ ಕಣಕ್ಕೆ ಇರುವ ದೂರ, ಛಿ ಭೂಮಿ- ಚಂದ್ರರ ಕೇಂದ್ರಗಳ ದೂರ, g ಗುರುತ್ವಾಕರ್ಷಣ ನಿಯತಾಂಕ, ಒ ಚಂದ್ರನ ದ್ರವ್ಯರಾಶಿ, ಈ ಸಮೀಕರಣದಿಂದ ಸಾಗರದಲ್ಲಿನ ಯಾವ ಪ್ರದೇಶದಲ್ಲಿಯಾದರೂ ಉಬ್ಬರವಿಳಿತದ ಮಾನವನ್ನು ಗೊತ್ತುಮಾಡಬಹುದು. ಆದರೆ ಸಮೀಕರಣವನ್ನು ಪಡೆಯುವಲ್ಲಿ ಕೆಲವು ಸಮಂಜಸವಲ್ಲದ ಊಹೆಗಳನ್ನು ಮಾಡಿರುವುದರಿಂದ ಉಬ್ಬರವಿಳಿತದ ಮಾನ ಅಷ್ಟು ನಿಖರವಲ್ಲ. ಉಬ್ಬರ ಉನ್ನತಮಟ್ಟಕ್ಕೆ ಏರುವುದಕ್ಕೂ ಸೂರ್ಯಚಂದ್ರರ ಸ್ಥಾನಕ್ಕÆ ಸಂಬಂಧವಿದೆ. ಚಂದ್ರ ಭೂಮಿಯನ್ನು ಅರ್ಧ ಸುತ್ತಲು ಬೇಕಾಗುವ ಕಾಲ ಸುಮಾರು ೧೨ ಗಂ. ೨೫ಮಿ. ಚಂದ್ರ ನೆತ್ತಿಯಮೇಲೆ ಬರುವ ಕಾಲಕ್ಕೂ ಮತ್ತು ಉಬ್ಬರ ಉನ್ನತಮಟ್ಟವನ್ನು ಮುಟ್ಟುವ ಕಾಲಕ್ಕೂ ಸ್ವಲ್ಪ ಅಂತರವಿದೆ. ಇದಕ್ಕೆ ಚಾಂದ್ರಉಬ್ಬರವಿಳಿತ ಅಂತರ (ಲ್ಯೂನಿ ಟೈಡಲ್ ಇಂಟರ್ವಲ್) ಅಥವಾ ಏರುನೀರಿನ ಅಂತರ ಎಂದು ಹೆಸರು. ಇದೇ ರೀತಿಯಲ್ಲಿ ಚಂದ್ರ ನೆತ್ತಿಯ ಮೇಲೆ ಬರುವ ಕಾಲ ಮತ್ತು ಇಳಿತ ಕನಿಷ್ಠ ಮಟ್ಟವನ್ನು ತಲಪುವ ಕಾಲದ ಅಂತರಕ್ಕೆ ಇಳಿನೀರಿನ ಅಂತರ ಎಂದು ಹೆಸರು. ಹುಣ್ಣಿಮೆ, ಅಮಾವಾಸ್ಯೆಗಳು ಕಳೆದ ಮಾರನೆ ದಿವಸ ಉಬ್ಬರ ಮಹತ್ತರವಾಗಿರುವುದು. ಇದರ ಹೆಸರು ಉಕ್ಕು ಭರತ (ಸ್ಪ್ರಿಂಗ್ ಟೈಡ್) ಅಥವಾ ಉಕ್ಕುಬ್ಬರ. ಪಂಚಮಿಯ ಹೊತ್ತಿಗೆ ಉಬ್ಬರ ಕ್ಷೀಣಿಸುವುದು. ಇದಕ್ಕೆ ಕೆಳ ಉಬ್ಬರ (ನೀಪ್ಟೈಡ್) ಎಂದು ಹೆಸರು. ಉಬ್ಬರ ಮೇಷ ಮತ್ತು ತುಲಾಸಂಕ್ರಮಣಕಾಲದಲ್ಲಿ ಹೆಚ್ಚಾಗಿ ಮಕರ, ಕರ್ಕಾಟಕ ಸಂಕ್ರಾಂತಿಗಳಲ್ಲಿ ಕಡಿಮೆಯಾಗುವುದು. ಈ ವ್ಯತ್ಯಾಸಗಳಿಗೆ ಸೂರ್ಯಚಂದ್ರರು ಭೂಮಿಯ ಕಡೆಗೆ ಇರುವ ದಿಕ್ಕಿನ ದಿಕ್ಪಾತವೇ (ಡೆಕ್ಲಿಯನೇಷನ್) ಕಾರಣ. ಸಮುದ್ರ ತೀರಪ್ರದೇಶಗಳಲ್ಲಿ ನೀರು ಸಾಮಾನ್ಯವಾಗಿ ಎರಡುಸಾರಿ ಉನ್ನತ ಮಟ್ಟಕ್ಕೆ ಏರುವುದು. ಎರಡು ಸಲ ಈ ರೀತಿಯಾಗಲು ಬೇಕಾಗುವ ಕಾಲದ ಅಂತರ ೧೨ ಗಂ.೨೫ ಮಿ. ಈ ಅಂತರ ದಿವಸ ದಿವಸಕ್ಕೆ ಸ್ವಲ್ಪ ವ್ಯತ್ಯಾಸವಾಗಬಹುದು. ಮತ್ತು ಬೇರೆ ಬೇರೆ ಪ್ರದೇಶಗಳಲ್ಲಿ ಅಂತರ ವಿವಿಧ ಪ್ರಮಾಣಗಳಲ್ಲಿ ಇರಬಹುದು. ಭಾರತದ ಪೂರ್ವದ ಸಮುದ್ರಗಳಲ್ಲಿ ೧೨ ಗಂಟೆ ಅಂತರವಿದ್ದರೆ ಚೀನ ಸಮುದ್ರದ ಕೆಲವು ಪ್ರದೇಶಗಳಲ್ಲಿ ಇದು ೨೪ ಗಂಟೆ ಆಗುತ್ತದೆ. ಸಮುದ್ರ ತೀರದಲ್ಲಿ ಅನುಕ್ರಮವಾಗಿ ಉಬ್ಬರ ಅಥವಾ ಇಳಿತ ಇವುಗಳ ಅಂತರ ಒಂದೇ. ಆದರೆ ಅಳಿವೆಗಳಲ್ಲಿ ನೀರಿನಮಟ್ಟ ವೇಗವಾಗಿ ಹೆಚ್ಚುತ್ತ ಬಂದು ಇಳಿಯುವುದು ನಿಧಾನ. ಸರಾಸರಿ ನೀರಿನಮಟ್ಟದಿಂದ ಎಷ್ಟು ಎತ್ತರಕ್ಕೆ ಉಬ್ಬರವಾಗುವುದೋ ಅಷ್ಟೇ ಕೆಳಕ್ಕೆ ಇಳಿತ ಆಗುತ್ತದೆ. ಉಬ್ಬರದ ಎತ್ತರ ಮತ್ತು ಇಳಿತದ ತಗ್ಗು ಇವೆರಡರ ಅಂತರಕ್ಕೆ ಅಲೆಶ್ರೇಣಿ (ರೇಂಜ್) ಎಂದು ಹೆಸರು. ಲಂಡನ್ ಸೇತುವೆ ಹತ್ತಿರ ಉನ್ನತ ಶ್ರೇಣಿ ೬.೫ಮೀ. ಕಡಿಮೆ ಶ್ರೇಣಿ ೪.೨೬ಮೀ. ಪೆಸಿಫಿಕ್ ಸಾಗರದ ಕೆಲವು ಕಡೆಗಳಲ್ಲಿ ೧೫ಮೀ ಇದ್ದರೆ ಮೆಡಿಟರೇನಿಯನ್ ತೀರದಲ್ಲಿ ೨' ಗಳಿಗಿಂತ ಹೆಚ್ಚಾಗುವುದಿಲ್ಲ. ಇಕ್ಕಟ್ಟಾದ ಸಮುದ್ರದಲ್ಲಿ ಅಲೆ ಪ್ರವಾಹ ಒಂದು ದಿಕ್ಕಿನಲ್ಲಿ ೬ ಗಂ. ೧೨ ಮಿ. ವರೆಗೆ ಹರಿದು ಮತ್ತೆ ಅದರ ಎದುರು ದಿಕ್ಕಿನಲ್ಲಿ ಅಷ್ಟೇ ಕಾಲ ಹರಿಯುತ್ತದೆ. ದಿಕ್ಕು ವ್ಯತ್ಯಾಸವಾಗುವ ಸಮಯದಲ್ಲಿ ನೀರು ಶಾಂತವಾಗಿರುವುದು. ಅಳಿವೆ ಪ್ರದೇಶಗಳಲ್ಲಿ ನೀರು ಹರಿಯುವ ಕಡೆ ಪ್ರವಾಹ ಹೆಚ್ಚು ಕಾಲ ಇದ್ದು ವಿರುದ್ಧ ದಿಕ್ಕಿನಲ್ಲಿ ಕಡಿಮೆ ಕಾಲ ಹರಿಯುತ್ತದೆ. ಬಯಲು ಸಮುದ್ರದಲ್ಲಿ ಅಲೆಯ ಪ್ರವಾಹ ಎಲ್ಲ ದಿಕ್ಕಿನಲ್ಲಿಯೂ ಒಂದೇ ವೇಗವಾಗಿ ಪ್ರವಹಿಸುವುದು. ಅಲೆಯ ಎತ್ತರ ಹೆಚ್ಚುವುದಕ್ಕೂ ಪ್ರವಾಹ ವೇಗ ಅಧಿಕವಾಗುವುದಕ್ಕೂ ಏನೂ ಸಂಬಂಧವಿದ್ದಂತೆ ಕಾಣುವುದಿಲ್ಲ. ಪ್ರವಾಹ ಭೂಮಿಯ ಕಡೆಗೆ ಹರಿಯುತ್ತಿದ್ದರೆ ಅದಕ್ಕೆ ಮಹಾಪುರ (ಫ್ಲಡ್) ಎಂದೂ ಅದಕ್ಕೆ ವ್ಯತಿರಿಕ್ತ ಕಡೆಗೆ ಹರಿಯುತ್ತಿದ್ದರೆ ಕ್ಷೀಣ (ಎಬ್) ಪ್ರವಾಹವೆಂದೂ ಹೆಸರು. ಪ್ರವಾಹದ ವೇಗ ಎಲ್ಲ ಕಡೆಯಲ್ಲಿಯೂ ಒಂದೇ ಸಮನಾಗಿರುವುದಿಲ್ಲ. ಲಿವರ್ಪುಲಿನಲ್ಲಿ ೭ ನಾವಿಕ ಮೈಲಿ (ನಾಟ್ಸ್) ಆದರೆ ಉತ್ತರ ಸಮುದ್ರದಲ್ಲಿ ಇದು ೧ ನಾವಿಕ ಮೈಲಿ. ಸಮುದ್ರದ ಉಬ್ಬರವಿಳಿತಗಳಲ್ಲಿ ನೀರಿನ ಮಟ್ಟವನ್ನು ಅಳೆಯಲು ಗುರುತು ಮಾಡಿರುವ ದೊಣ್ಣೆಗಳನ್ನು ಸಮುದ್ರದಲ್ಲಿ ಹೂಳಿರುತ್ತಾರೆ. ಬೇರೆ ಬೇರೆ ಪ್ರದೇಶಗಳಲ್ಲಿ ಅವಲೋಕಿಸ ಬೇಕಾದಾಗ ಉಬ್ಬರವಿಳಿತ ಮಾನ (ಟೈಡ್ ಗೇಜ್) ಎಂಬ ಸಾಧನವನ್ನು ಬಳಸುತ್ತಾರೆ. ಪ್ರವಾಹ ವೇಗವನ್ನು ಅಳೆಯಲು ಪ್ರವಾಹ ಮಾಪಕ (ಕರೆಂಟ್ ಮೀಟರ್) ಉಪಯೋಗಿಸುತ್ತಾರೆ. ಈ ಯಂತ್ರಗಳನ್ನು ಅಲ್ಲಾಡದಂತೆ ಸಮುದ್ರದಲ್ಲಿ ನಾಟಿ ಅನಂತರ ಅಳೆಯಬೇಕಾಗುವುದರಿಂದ ನಿರ್ದುಷ್ಟ ವಿವರ ಸಂಗ್ರಹಣೆ ಕಷ್ಟ.. ಇದೇ ರೀತಿ ಸೂರ್ಯನ ಗುರುತ್ವಾಕರ್ಷಣ ಬಲದಿಂದ ಸಾಗರ, ಸಮುದ್ರಗಳಲ್ಲಿ ಉಬ್ಬರವಿಳಿತಗಳು ಉಂಟಾಗುತ್ತವೆ. ಸೂರ್ಯನ ದ್ರವ್ಯರಾಶಿ ಚಂದ್ರನಿಗಿಂತ ೨೭,೦೦೦,೦೦೦ ಪಟ್ಟು ಹೆಚ್ಚಾಗಿದೆ. ದೂರ ೩೯೯ರಷ್ಟು ಹೆಚ್ಚು. ಆದ್ದರಿಂದ ಸೂರ್ಯನಿಂದ ಉತ್ಪನ್ನವಾಗುವ ಉಬ್ಬರವಿಳಿತಗಳ ಬಲಕ್ಕೂ ಚಂದ್ರನ ಬಲಕ್ಕೂ ಹೋಲಿಸಿದರೆ ೨೭,೦೦೦,೦೦೦: ೩೯೦೩= ೧: ೨.೧೭ ಆಗುವುದು. ಆದ್ದರಿಂದ ಸೂರ್ಯನಿಗಿಂತಲೂ ಚಂದ್ರನಿಂದ ಉಂಟಾಗುವ ಉಬ್ಬರವಿಳಿತದ ಬಲ ಹೆಚ್ಚಿನದು. ಭೂಮಿ, ವಾಯುಮಂಡಲದಲ್ಲಿ ಉಬ್ಬರವಿಳಿತಗಳು: ಭೂಮಿಯ ಜಡಭಾಗದ ಗುರುತ್ವಾಕರ್ಷಣ ಬಲದಿಂದ ಉಬ್ಬರವಿಳಿತಗಳು ನಿರ್ದಿಷ್ಟ ಕಾಲಾವಧಿಂiÀಲ್ಲಿ ಆಗುತ್ತವೆ. ಇದರಿಂದ ಗುರುತ್ವಾಕರ್ಷಣದ ಪ್ರಮಾಣ ಸ್ವಲ್ಪ ವ್ಯತ್ಯಾಸವಾಗಬಹುದು. ವಾಯುಮಂಡಲದಲ್ಲಿ ಉಬ್ಬರವಿಳಿತಗಳು ಉಂಟಾಗಿ ವಾಯುವಿನ ಒತ್ತಡದ ಪ್ರಮಾಣ ಕೊಂಚ ಮಾರ್ಪಾಟಾಗು ವುದು. ಘರ್ಷಣದಿಂದ (ಫ್ರಿಕ್ಷನ್) ನಷ್ಟವಾಗುವ ಶಕ್ತಿ ಗ್ರಹಗಳ ಚಲನೆ ವಿಷಯದಲ್ಲಿ ಅತಿಮುಖ್ಯವಾದ ಅಂಶ. ಇದರಿಂದ ಕೋನಜಡವೇಗವನ್ನು (ಆಂಗ್ಯುಲರ್ ಮೊಮೆಂಟಂ) ಒಂದು ರೀತಿಯ ಚಲನೆಯಿಂದ ಇನ್ನೊಂದು ರೀತಿಗೆ ವರ್ಗಾಯಿಸಲು ಅವಕಾಶವಾಗುತ್ತದೆ. ಒಂದು ಗ್ರಹದ ಚಲನೆಯ ವೇಗ ಉಪಗ್ರಹದ ವೇಗಕ್ಕಿಂತ ಹೆಚ್ಚಾಗಿದ್ದರೆ (ಭೂಮಿ ಚಂದ್ರರವೇಗದಂತೆ) ಘರ್ಷಣೆಯ ಶಕ್ತಿನಷ್ಟದಿಂದ ಗ್ರಹದ ವೇಗ ಕಡಿಮೆಯಾಗುತ್ತದೆ. ಉಪಗ್ರಹದ ಕೋನಜಡವೇಗ ವ್ಯತ್ಯಾಸವಾಗುವುದು. ಆದರೆ ಗ್ರಹ-ಉಪಗ್ರಹಗಳ ವ್ಯವಸ್ಥೆಯ ಒಟ್ಟು ಕೋನಜಡವೇಗ ಸ್ಥಿರವಾಗಿರುತ್ತದೆ. ಉಬ್ಬರವಿಳಿತದಿಂದ ಕೂಡಿರುವ ಭೂಮಿಯ ಮೇಲೆ ಚಂದ್ರನ ಆಕರ್ಷಣಬಲದಿಂದ ಭೂಮಿಯ ಆವರ್ತನ ವೇಗ ಕಡಿಮೆಯಾಗುತ್ತದೆ. ಇದು ಅತ್ಯಲ್ಪವಾದ್ದರಿಂದ ೧,೨೦,೦೦೦ ವರ್ಷಗಳಲ್ಲಿ ದಿವಸದ ವೇಳೆ ೧ ಸೆಕೆಂಡಿನಷ್ಟು ಹೆಚ್ಚಾಗಬಹುದು. ಇದೇ ಕಾರಣದಿಂದ ಚಂದ್ರ ಭೂಮಿಯಿಂದ ದೂರ ದೂರ ಸಾಗುತ್ತಿದೆ. ಸಮುದ್ರದ ಉಬ್ಬರವಿಳಿತಗಳ ಶಕ್ತಿಯಿಂದ ಯಂತ್ರಗಳನ್ನು ಚಲಿಸಲು ಸಾಧ್ಯವಾಗಿದೆ. ಹೆಚ್ಚು ವೆಚ್ಚ ಮಾಡದೆ ಯಾವ ರೀತಿಯ ಇಂಧನವನ್ನೂ ಉಪಯೋಗಿಸದೆ ಅತಿ ಸುಲಭವಾಗಿ ನಡೆಸಬಹುದಾದ ಯಂತ್ರಗಳು ಕೆಲವು ಪ್ರದೇಶಗಳಲ್ಲಿ ಉಪಯೋಗದಲ್ಲಿವೆ. ಆದರೆ ಅತಿ ಹೆಚ್ಚಾಗಿ ಶಕ್ತಿ ಉಬ್ಬರವಿಳಿತಗಳಿಂದ ಉತ್ಪನ್ನವಾಗದೇ ಇರುವುದರಿಂದಲೂ ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಶಕ್ತಿ ದೊರಕಬಹುದೆಂಬ ನಂಬಿಕೆ ಇಲ್ಲದೆ ಇರುವುದರಿಂದಲೂ ಈ ಯಂತ್ರಗಳ ಬಳಕೆ ಹೆಚ್ಚಾಗಿಲ್ಲ. (ಎ.ಸಿ.)