ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನವರಿ
ಗೋಚರ
ಜನವರಿ ಆಧುನಿಕ ತಾರೀಖು ಪಟ್ಟಿಯ (ಕ್ರೈಸ್ತವರ್ಷದ) ಮೊದಲನೆಯ ತಿಂಗಳು. 31 ದಿವಸಗಳಿವೆ. ಜನವರಿಯ ಮೊದಲನೆಯ ದಿವಸ ನೂತನ ವರ್ಷಾರಂಭವಾಗುತ್ತದೆ. ಕ್ರಿ.ಪೂ. ಸು. 153ರ ಜನವರಿ ವರ್ಷದ ಹನ್ನೊಂದನೆಯ ತಿಂಗಳೆಂದು ಪರಿಗಣಿತವಾಗಿತ್ತು. ಗ್ರೆಗೋರಿಯನ್ ತಾರೀಖುಪಟ್ಟಿಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಾರ್ವತ್ರಿಕ ಮನ್ನಣೆ ದೊರೆತ ಬಳಿಕ (1752) ಜನವರಿಯೇ ವರ್ಷದ ಪ್ರಾರಂಭ ತಿಂಗಳು ಎಂಬುದು ರೂಢಿಗೆ ಬಂತು. ಭಾರತೀಯ ಪಂಚಾಂಗದ ರೀತ್ಯ ಮಾರ್ಗಶಿರ-ಪುಷ್ಯಮಾಸಗಳು ಜನವರಿಯಲ್ಲಿ ಕಾಣಬರುತ್ತವೆ.