ಶಿವಸಂಸ್ಕಾರಿಯಾಗಿ ಅಂಗದ ಮೇಲೆ ಲಿಂಗವ ಧರಿಸಿ. ಆ ಲಿಂಗವೆ ತನ್ನಂಗ ಮನ ಪ್ರಾಣದಲ್ಲಿ ಹಿಂಗದಿರ್ದುದ ಕಂಡು
ನಂಬಿ ಪೂಜಿಸಿ ಪ್ರಸಾದವ ಪಡೆದು ಲಿಂಗೈಕ್ಯರಾಗಲರಿಯದೆ
ತನ್ನಂಗಲಿಂಗಸಂಬಂಧಕ್ಕನ್ಯವಾದ
ಭವಿ ಶೈವದೈವಕ್ಕೆ ಎರಗುವ ಕುನ್ನಿಗಳಿಗೆ ಅಘೋರನರಕ
ಅದೆಂತೆಂದಡೆ: ``ಇಷ್ಟಲಿಂಗಂ ಪರಿತ್ಯಜ್ಯ ಅನ್ಯಲಿಂಗಮುಪಾಸತೇ ಪ್ರಸಾದಂ ನಿಷ್ಪಲಂ ಚೈವ ರೌರವಂ ನರಕಂ ವ್ರಜೇತ್ ಎಂದುದಾಗಿ ಅಲ್ಲಲ್ಲಿ ಧರೆಯ ಮೇಲಿಪ್ಪ ಭವಿದೈವ ಸ್ಥಾವರಕ್ಕೆ ಹರಿಯಲಾಗದು. ಪ್ರಾಣಲಿಂಗಸಂಬಂಧಿಗೆ ಅದು ಪಥವಲ್ಲ. ತನ್ನ ಭವಿತನವ ಬಿಟ್ಟು ಭಕ್ತನಾದ ಬಳಿಕ ಆ ಭವವಿರಹಿತಲಿಂಗಕ್ಕೆ ಭವಿಪಾಕವ ನಿವೇದಿಸಿದರೆ ಅದು ಕಿಲ್ಬಿಷ
ಅದೆಂತೆಂದೊಡೆ: ``ಭವಿಹಸ್ತಕೃತಂ ಪಾಕಂ ಲಿಂಗನೈವೇದ್ಯಕಿಲ್ಬಿಷಂ ಶಿವಭಕ್ತಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ ಎಂದುದಾಗಿ ತಾ ಶಿವಭಕ್ತನಾಗಿ ಭವಿಪಾಕ ಭವಿಪಂಥ ಭವಿಶೈವದೈವ
ಭವಿತಿಥಿಮಾಟಕೂಟ ಭವಿವರ್ತನಾಕ್ರೀಯನೊಡಗೂಡಿಕೊಂಡು ನಡೆದನಾದಡೆ
ಕೂಡಲಚೆನ್ನಸಂಗಯ್ಯ ಅಘೋರನರಕದಲ್ಲಿಕ್ಕುವ