ಪರಿಜೆ ದ ೨ ೭೧. MMMM ಮಾಡಿಕೊಂಡು, ಆ ಕಾಲದಲ್ಲಿ ಆ ಕೆಲಸವನ್ನು ಮಾಡುವುದಕ್ಕೆ ಯಾವ ವಿಘ್ನು ಬಂದಾಗ ಅದನ್ನು ಬಿಡದೆ, ಅಭ್ಯಾಸಮಾಡುತ್ತ ಬರಬೇಕು. ವಿಘ್ನಗಳಲ್ಲಿ ಪ್ರಾಯಕವಾಗಿ ನಿವಾರಣೀಯವಾದುವು ಅನೇಕವಿರುತ್ತವೆ. ಅಂಧವುಗಳನ್ನು ಜಯಿಸುವುದು ಕಷ್ಟವಲ್ಲ, ಪ್ರತಿದಿವಸವೂ ವ್ಯಾಸಂಗಕ್ಕೆ ಪ್ರತಿಬಂಧಕವಾಗಿ ಬರುವ ಕೆಲಸಗಳಿರುವುದುಂಟು . ಅಂಧ ಕೆಲಸಗಳಿ ಗೋಸ್ಕರ ಬೇರೆ ಕಾಲವನ್ನು ಕ್ರೈಸ್ತಮಾಡಿಟ್ಟು ಕೊಂಡು, ಕೃಷ್ಣವಾದ ವ್ಯಾಸಂಗಕ್ಕೆ ಯಾವ ಹಾನಿಯ ಒರದಂತೆ ನೋಡಿ ಕೊಳ್ಳಬೇಕು. ಮೊದಲಿನಲ್ಲಿ ಈರೀತಿ ನಡೆಯಿಸು ವುದು ಕಷ್ಟವಾಗಬಹುದು ; ಆದರೆ, ಹಾಗೆ ನಡೆಯಿಸಬೇಕೆಂದು ನಿಷ್ಕರ್ಷೆಮಾಡಿಕೊಂಡರೆ, ಅನಂತರ ಆ ಕಷ್ಟವು ತೋರುವುದಿಲ್ಲ ಈ ರೀತಿಯಲ್ಲಿ ನಿಷ್ಕರ್ಷೆಮಾಡಿಕೊಳ್ಳದಿರತಕ್ಕವರು, ಹಿಡಿದ ಕೆಲಸವನ್ನೆಂದಿಗೂ ಸಾಧಿಸಲಾರರು. ಲಾರ್ಡ್ ಕೈವನು ಆಟ ವಾಡುತ್ತಿದ್ದಾಗ, ಶತ್ರುಗಳು ಯುದ್ಧಕ್ಕೆ ಸನ್ನದ್ಧರಾಗಿ ಬಂದರೆಂದು ವರ್ತಮಾನ ಬಂದಿತು ಆಗ ಅವನು 66 ಅಯ್ಯೋ ! ಪಾಪ ! ದಣಿದು ಬಂದಿರುವರು ; ಸ್ವಲ್ಪ ವಿಶ್ರಮಿಸಿಕೊಳ್ಳಲಿ; ನಾನು ಈ ಆಟವನ್ನು ಪೂರ ಯಿಸಿ ಯುದ್ಧಕ್ಕೆ ಸೈನ್ಯವನ್ನು ಸಿದ್ದ ಮಾಡಿಕೊಂಡು ಹೊರಡುವೆನು ?' ಎಂದು ಹೇಳಿ, ಯುದ್ದದ ಪ್ರಸಕ್ತಿಯೇ ಇಲ್ಲದಿದ್ದರೆ ಹೇಗೋ-ಹಾಗೆ ಸಾವಧಾನವಾಗಿ ಆಟವನ್ನಾಡಿ ಪೂರಯಿಸಿ, ಅನಂತರ ಯುದ್ಧಕ್ಕೆ ಸನ್ನದ್ದ ನಾಗಿ ಹೊರಟನು. ಆಟದಲ್ಲಿ ಇವನು ಹೇಗೆ ಸಾವಧಾನವಾಗಿರುತಿದ್ದನೋ, ಹಾಗೆ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದಲ್ಲಿ ಸ್ವಸ್ಥಚಿತ್ತರಾಗಿರಬೇಕು. ವಿದ್ಯಾಭ್ಯಾಸವು ತಪಸ್ಸಿಗೆ ಸಮವಾದುದು, ಇವೆರಡಕ್ಕೂ ಮನಸ್ಸು ಐಕಾ
ಪುಟ:ವಿದ್ಯಾರ್ಥಿ ಕರಭೂಷಣ.djvu/೭೯
ಗೋಚರ