ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೦ ವಿದ್ಯಾರ್ಥಿ ಕರಭೂಷಣ »

  • AA+

ವನ್ನೂ ಶಿಷ್ಯ ಪರಿಪಾಲನೆಯನ್ನೂ ಮಾಡಬಹುದೆಂದು ತೋರುತ್ತದೆ. ಚಾಣಕ್ಯನ ಚರಿತ್ರೆಯನ್ನೋದಿದರೆ, ಪ್ರಪಂಚವನ್ನು ಆಳಬೇಕೆಂದು ಅಪೇಕ್ಷೆ ಯುಳ್ಳವರು ನಿಸ್ಸಹಶಿಖಾಮಣಿಗಳಾಗಿಯೂ ವೈರಾಗ್ಯಚಕ್ರವರ್ತಿಗಳಾ ಗಿಯೂ ಇರಬೇಕೆಂದು ತೋರುತ್ತದೆ, ಭಗವದ್ಗೀತೆಯನ್ನೋದಿದರೆ, ಇಹ ಪರಸಾಧನೆಗಳಿಗೂ ದುಷ್ಟನಿಗ್ರಹ ಶಿಷ್ಯ ಪರಿಪಾಲನೆಗಳಿಗೂ ಯಾವಯಾನ ಸಂದರ್ಭಗಳಲ್ಲಿ ಹೇಗೆಹೇಗೆ ನಡೆದುಕೊಳ್ಳಬೇಕೋ ಅದು ಗೊತ್ತಾಗುತ್ತದೆ ಇದೇರೀತಿಯಲ್ಲಿ, ಪ್ರತಿಯೊಂದು ಉದ್ಭಂಧದಲ್ಲಿಯ, ನಮ್ಮ ಇಷ್ಟಾರ್ಥ ಪ್ರಾಪ್ತಿಗೆ ಸಾಧಕವಾದ ವಿಷಯಗಳು ವಿಲಕ್ಷಣವಾಗಿ ನಿರೂಪಿಸಲ್ಪಟ್ಟಿ ರುವುವು, ಅವುಗಳನ್ನೋದಿ ನರಾಲೋಚಿಸಿಗಕೂಡಲೆ, ಅವುಗಳನ್ನು ಅನುಷ್ಠಾನಕ್ಕೆ ತಂದು ಕೊಳ್ಳಬೇಕೆಂಬ ಅಭಿನಿವೇಶವುಂಟಾಗುತ್ತದೆ. ನಾವು, ಮಾಡತಕ್ಕ ಉದ್ಯೋಗಗಳಲ್ಲಿ ಈ ರೀತಿ ನಡೆಯಬೇಕೆಂದು ಸಂಕ ಮಾಡದೇನೆ ಆರೀತಿಯಲ್ಲಿ ನಡೆಯುವೆವು. ಆದುದರಿಂದ, ನಾವು ವ್ಯಾಸಂಗಮಾಡತಕ್ಕ ಪುಸ್ತಕಗಳನ್ನು ಮೊದಲೇ ನಿರ್ಣಯಿಸಿಕೊಂಡು ವ್ಯಾಸಂಗಮಾಡಬೇಕು. ಬುದ್ದಿ ವಿಕಲ್ಪವನ್ನುಂಟು ಮಾಡತಕ್ಕ ಗ್ರಂಧಗಳ ನ್ನೆಂದಿಗೂ ವ್ಯಾಸಂಗಮಾಡಬಾರದು, ಒಳ್ಳೆಯ ಕೆಲಸಗಳನ್ನು ಮಾಡು ವುದರಲ್ಲಿ ಅಪ್ರತಿಹತವಾದ ಆಸಕ್ತಿಯನ್ನು ಯಾವ ಗ್ರಂಧಗಳು ಉಂಟು ಮಾಡುವವೋ, ಅವುಗಳನ್ನು ವ್ಯಾಸಂಗಮಾಡಬೇಕು, ಇದನ್ನು ತಿಳಿದು ಕೊಳ್ಳುವುದು ಕಷ್ಟವಲ್ಲ, ಅನೇಕ ಗ್ರಂಧಗಳನ್ನೋದಿ ಅವುಗಳ ಸಾರಾಂಶ ವನ್ನು ತಿಳಿದುಕೊಂಡಿರತಕ್ಕ ಪಂಡಿತೋತ್ತಮರನೇಕರಿರುತ್ತಾರೆ. ಅಂಧ ವರನ್ನು ಕೇಳಿದರೆ, ಯಾವ ಗ್ರಂಧಗಳು ವ್ಯಾಸಂಗಕ್ಕೆ ಅರ್ಹಗಳೋ