ಸದಸ್ಯ:VarijaaSri367

ವಿಕಿಸೋರ್ಸ್ದಿಂದ
ಕ್ರೈಸ್ಟ್ ಯೂನಿವರ್ಸಿಟಿ

ನಾನು ವಾರಿಜಾ ಶ್ರೀ. ನನ್ನ ಹುಟ್ಟೂರು ಬೆಂಗಳೂರು. ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಚಿನ್ಮಯ ಪಬ್ಲಿಕ್ ಶಾಲೆಯಲ್ಲಿ ಮುಗಿಸಿದ್ದೇನೆ ಹಾಗೂ ನನ್ನ ಪಿ.ಯು.ಸಿಯನ್ನು ಕೃಪಾನಿಧಿ ಕಾಲೇಜಿನಲ್ಲಿ ಓದಿದ್ದೇನೆ.ಈಗ ನನ್ನ ಪದವೆದರ ಶಿಕ್ಷನವನ್ನು ಕ್ರೈಸ್ಟ್ ಯೂನಿವರ್ಸಿಟಿ ಕಾಲೆಜಿನಲ್ಲಿ ಓದುತ್ತಿದ್ದೇನೆ. ನನಗೆ ನೃತ್ಯವೆಂದರೆ ಬಹಳ ಇಷ್ಟ.


ನನ್ನ ಶಾಲೆಯ ನೆನಪುಗಳು[ಸಂಪಾದಿಸಿ]

ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯಿಂದ ನಮ್ಮನ್ನು ಮಡಿಕೇರಿಗೆ ಪ್ರವಾಸಕ್ಕಾಗಿ ಕರೆದುಕೊಂಡು ಹೋಗಿದ್ದರು. ಅದು ೨ ದಿನದ ಪ್ರವಾಸ. ಅಲ್ಲಿ ನಾವು ನೋಡಿದ ಜಾಗಗಳಲ್ಲಿ ಅತ್ಯಂತ ಪ್ರಸಿದ್ಧ ಸ್ಥಳ "ತಲಕಾವೇರಿ". ಇದು ಕಾವೇರಿ ನದಿಯ ಉಗಮ ಸ್ಥಾನ. ತಲಕಾವೇರಿ ಕರ್ನಾಟಕದಕೊಡಗು ಜಿಲ್ಲೆಯಲ್ಲಿದೆ. ಈ ಸ್ಥಳವನ್ನು ಶರಪಂಜರ ಹಾಗೂ ಹುಲಿಯ ಹಾಲಿನ ಮೇವು ಚಿತ್ರಗಳಲ್ಲಿ ಚಿತ್ರೀಕರಿಸಲಾಗಿದೆ. thumb|ತಲಕಾವೆರಿಯಲ್ಲಿ ಕಾವೆರಿಯ ಉದ್ಭವ


ನನ್ನ ಮೆಚ್ಚಿನ ಕವಿ[ಸಂಪಾದಿಸಿ]

ನನಗೆ ಬಹಳ ಇಷ್ಟವಾದ ಕವಿ ಕುವೆಂಪುರವರು. ಕುವೆಂಪುರವರಿಗೆ ಅವರ ಪ್ರಸ್ಸಿದ್ಧ "ರಾಮಾಯಣ ದರ್ಶನಂ"ಎಂಬ ಕೃತಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನನಗೆ ಕನ್ನಡ ಬಹಳ ಇಷ್ಟವಾದ ಭಾಷೆ. ಹೊರದೇಶದವರು ಕನ್ನಡ ಮತನಾಡುವುದನ್ನು ಕಂಡರೆ ಅಭಿಮಾನ ಹೆಚ್ಚಾಗುತ್ತದೆ. ನಮ್ಮ ಮನೆಯಲ್ಲಿ ನಾವು ಹಬ್ಬಗಳನ್ನು ಆಚರಿಸಿ ಸಿಹಿ ತಿಂಡಿಗಳನ್ನು ಮಾಡಿ ತಿಂದು ಹಬ್ಬವನ್ನು ಯೆಶಸ್ವಿಗೊಳಿಸುತ್ತೇವೆ.

ನನ್ನ ಆಟ ಓಟಗಳು[ಸಂಪಾದಿಸಿ]

ನಾನು ಪ್ರತಿಬಾ ಕಾರಂಜಿಯ ಭಾವಗೀತೆ ಹಾಗೂ ಭಕ್ತಿಗೀತೆಗಳನ್ನು ಹಾಡಿ ಮೊದಲನೆಯ ಹಾಗೂ ಸಮಾಧಾನಕರ ಬಹುಮಾನವನ್ನು ಪಡೆದಿದ್ದೇನೆ. ನನಗೆ ಬ್ಯಾಡ್ಮಿಂಟನ್ ಬಹಳ ಇಷ್ಟ. ನಾನು ಶಾಲೆಯಲ್ಲಿ ಓದುತ್ತಿರುವಾಗ ಕ್ಲಸ್ಟರ್ ಲೆವೆಲ್ ಆಟದಲ್ಲಿ ಭಾಗವಹಿಸಿ ಗೆದ್ದಿದ್ದೇನೆ. ನನ್ನ ಶಾಲೆಯಲ್ಲಿ ನನ್ನ ಶಿಕ್ಷಕರು ನನ್ನನು ಸಲಹಿ ಒಳ್ಳೇ ದಾರಿಯನ್ನು ಕಂಡುಕೊಟ್ಟಿದ್ದಾರೆ. ನನ್ನ ಶಾಲೆಯ ಗೆಳೆಯರು ನನಗೆ ಎಣಿಸಲು ಆಗದಂತಹ ನೆನಪುಗಳನ್ನು ಕೊಟ್ಟಿದಾರೆ. ನನ್ನ ತಂದೆ ತಾಯಿ ನನ್ನ ವಿದ್ಯಾಭ್ಯಾಸಕ್ಕೆ ಏನು ಕೊರತೆಯಾಗದಂತೆ ಜವಾಬ್ದಾರಿ ವಹಿಸಿ ನೋಡಿಕೊಂಡಿದ್ದಾರೆ.

ನನ್ನ ಆಸಕ್ತಿ ಹಾಗೂ ನೆನಪುಗಳು[ಸಂಪಾದಿಸಿ]

ನನಗೆ ಹಾಡುವುದರಲ್ಲಿ ಬಹಳ ಆಸಕ್ತಿಯಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅರ್ಧ ಕಲಿಯುತಿದ್ದೇನೆ. ಈಗಲು ನಾನು ಅದನ್ನು ಮುಂದುವರೆಸುತ್ತಿದ್ದೇನೆ. ನಾನು ನನ್ನ ಅಜ್ಜಿ ಊರಿಗೆ ಹೋದಾಗ ಮಾವಿನ ತೋಪಿಗೆ ಹೋಗಿ ಅಲ್ಲಿನ ನೆರಳನ್ನು ಸವಿಯಲು ಬಹಳ ಇಚ್ಛಿಸುತ್ತೇನೆ. ನನ್ನ ಊರಿನಲ್ಲಿ ನನ್ನ ಬಾಲ್ಯದ ಗೆಳೆಯರು ಇದ್ದಾರೆ. ಅವರೊಡನೆ ನಾನು ಆಟವಾಡುತ್ತೇನೆ. ಸುತ್ತಲೂ ಇರುವ ತೋಟದಲ್ಲಿನ ತಂಪನ್ನು ಸವಿದು ಖುಷಿಪಡುತ್ತೇನೆ. ನನಗೆ ಬೇರೆ ಯಾವುದೇ ರಾಜ್ಯಕ್ಕಿಂತಲೂ ಕರ್ನಾಟಕವೇ ಬಹಳ ಪ್ರಿಯವಾದ ರಾಜ್ಯ. ತಾಯಿ ಭುವನೇಶ್ವರಿಯೇ ನಮ್ಮ ತಾಯಿ ಎಂದು ತಿಳಿದಿದ್ದೇನೆ. ನನಗೆ ತ್ಯಾಗರಾಜರ ಹಾಡುಗಳು ಬಹಳ ಇಷ್ಟ.