ನೆಮ್ಮದಿಗೆ ಅವಳು ಮನಸೋಲಿಲ್ಲ. ... ಒಂದು ದಿನ ಅಜ್ಜಿ ಬೀದಿಯುದ್ದಕ್ಕೂ ಗೋಳೋ ಎಂದು ಅಳುತ್ತ ಓಡಿ ಬಂದಳು. ಯಾಕೆ,ಏನು,ಎಂದು ಯಾರೂ ಕೇಳಬೇಕಾಗಿರಲಿಲ್ಲ. ಅಜ್ಜಿಗಿಂತ ಮುಂಚಿತವಾಗಿ ಆಸುದ್ದಿ ಪ್ರಸಾರವಾಗಿತ್ತು. ಅದು, ಮಠದ ವ್
ಆದಿ, ಮಠದ ವೃದ್ದಯತಿವರ್ಯರ ನಿಧನ, ಆ ನಿಧನದಿಂದ ಅಜ್ಜಿ ಯಷ್ಟೇ ಅಲ್ಲ, ಬಾಳೆಮಣಮ್ಪಿರಿನ ಎಷ್ಟೆಷ್ಟೋ ಜನ ದುಃಖಿತರಾಗಿದ್ದರು, ಸ್ವಾಮಿಗಳ ನಿಧನದಿ೦ದ, ಒಲ್ಲೆಯ ವ್ಯಕ್ತಿಯೊಬ್ಬರು ಕಣ್ಮರೆಯಾದ ಹಾಗಾಯಿತು.
ಹಾಗಾಯಿತೆಂದು ಸಂತುಷ್ಟರಾದವರೂ ಕೆಲವರಿದ್ದರು. ಆ ವೃದ್ದ ಸಾಮಿ ಇದಾಗ. ಧರ್ಮದ ಮತದ ಮರೆಯಲ್ಲಿ ಕುಹಕ ನಡೆಸುತ್ತಿದ್ದ ದುಷ್ಟರ ಹಾದಿ ಸುಗಮವಾಗಿರಲಿಲ್ಲ. ಬಲು ಎಚ್ಚರಿಕೆಯಿಂದ ಕಳ್ಳತನದಿಂದ ತಮ್ಮ ದುರ್ವಾಪಾರಗಳನ್ನು ಅವರು ನಡೆಸಬೇಕಾಗು ತ್ತಿತು, ಈ ಮುದುಕ ಶನಿ ಇನ್ನೂ ಇದೆಯಲಾ–ಎಂದು ಅವರು ಗೊಣಗುತ್ತಿದ್ದರು. ಅ೦ಥವರಿಗೆ ಈಗ ಸಂತೋಷವಾಯಿತು. ಅಜ್ಜಿ ಮಾತ್ರ ಸ್ವಾಮಿಗಳ ನಿಧನದಿಂದ ಧೃತಿಗೆಟ್ಟಳು. ಬಾಳೆಮಣJಣ್ಣರಿಗೆ ತಾನು ಬಂದು ನೆಲೆಸಿದ ಆರಂಭದಿಂದ ನಡುವೆ ಹಿಂತಿರುಗಿ ಹೋದವರೆಗೆ: ಬಳಿಕ ಮೊಮ್ಮಗಳೊಡನೆ ಬ೦ದ ದಿನದಿಂದ ಈವರೆಗೆ–ಆ ಸಾಮಿಗಳು ಆಡಿದ್ದ ಧೈರ್ಯ ತುಂಬಿಸುವ ನೂರು ಮಾತು ಗಳು ಅಜ್ಜಿಗೆ ನೆನಪಾದುವು. ಬಾಲವಿಧವೆಯಾದ ಮೊಮ್ಮಗುವನ್ನು ಬೆನ್ನಿಗೆ ಅಂಟಿಸಿಕೊಂಡು ಬಂದು, ಬಲು ಸುರಕ್ಷಿತವಾಗಿ ಅಜ್ಜಿ ಅದನ್ನು ಸಾಕಿ ಸಲಹಿದ್ದಳು. ಅದು ಬಲು ದೊಡ್ಡ ಜವಾಬಾರಿಯ ಕೆಲಸವಾಗಿತು, ಆ ಕೆಲಸವನ್ನು ನಿರ್ವಹಿಸಲು ಅಜ್ಜಿ ಸಮರ್ಥಳಾಗಿದ್ದರೆ, ಅದಕ್ಕೆ ಕಾರಣರು ಆ ಯತಿ. " ದೇವರಂಥಾ ಮನುಷ್ಯ...ದೇವರಂಥಾ ಮನುಷ್ಯ..! ಹೋಗಿಯೇ ಬಿಟ್ರು. ಈ ಚಂಡಾಲ ಲೋಕಾನ ಬಿಟ್ಟು ಹೊರಟೇ ಹೋದು." ల:ಯ ವ್ಯಥೆಯ ಪೂರ್ಣ ಅರಿವು ಬನಶಂಕರಿಗೆ ಆಗಲು ಬಹಳ ದಿನ ಹಿಡಿಯಲಿಲ್ಲ. ಆಕೆಯನ್ನು ಕುರಿತ ಕುತ್ತಿತ ಮಾತುಗಳು ಬಹಿರಂಗವಾಗಿ ನಿರ್ಭಯವಾಗಿ ಓಡಾಡಿದುವು. " ಏನು ಸುಬ್ಬಕಾ, ಸಾಮಿಗು ತೀರೋಂಡ್ರಲಾ---" ಎಂದು ಅಜ್ಜಿಯೊಡನೆಯೂ ಕೆಲವರು ವ್ಯಂಗೊಳ್ಳೋಕ್ತಿಯನಾಡಿದರು. ಆಜ್ಜಿ ಪ್ರತಿ ದಿನವೂ ಗೊಣಗಿದಳು, ಶಪಿಸಿದಳು, ದೇವರಿಗೆ ಮೊರೆ ಇಟ್ಟಳು. ದೇಹ ಬಡವಾಯಿತು, ಬೆನ್ನು ಮತ್ತಷ್ಟು ಬಾಗಿತು. ಉಳಿದಿದ್ದ ಎರಡು ಮೂರು ಹಲ್ಲುಗಳೂ ಉದುರಿಹೋದುವು. ಕಣ್ಣಗಳು ಮಸಕಾದುವು. " ಇನ್ನೇನಪಾ ಗತಿ? ಅಮ್ಮಿಗೆ ಯಾರಪಾ ದಿಕು ? " ಎನ್ನುವುದೇ ಅಜ್ಜಿಯ ದಿನ ನಿತ್ಯದ ಪಲ್ಲವಿಯಾಯಿತು. ಸುಂದರಮ್ಮನೇನೋ ಸಂತೈಸುವ ಮಾತನಾಡದಿರಲಿಲ್ಲ. " ನೀವು ಸುಮ್ನಿರಿ ಅಜ್ಜಿ...ಯಾಕೆ ಹೀಗೆ ಗೋಳಾಡ್ರಿಡ್ತೀರ? ಯಾರು ಏನಾಡಾರೋ ನೋಡೋಣ. ನಾವಿಲ್ವೆ?" ಅವರಿದ್ದರು. ಆ ಧೈರ್ಯವೊ ಅಥವಾ ಆತ್ಮವಿಶ್ವಾಸವೊ ಅಂತೂ ಬನಶಂಕರಿ ಎದೆ ಗುಂದಲಿಲ್ಲ, ತನ್ನ ಬಾಳಿನ ದೋಣಿಯ ಅಂಬಿಗಳೂ ಅವಳಾಗಿರಲಿಲ್ಲ, ಅವಳ ಕೈಯಲ್ಲಿ