ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೂರನೆಯ ಅಧ್ಯಾಯ

ದಕ್ಷಿಣಲೇಶ್ವರದ ಕಾಳಿದೇವಸ್ಥಾನ.

ಕಲ್ಕತ್ತೆಯ ದಕ್ಷಿಣದಿಕ್ಕಿನಲ್ಲಿರುವ ಜಾನ್ಬಜಾರ್ ಎಂಬ ಗ್ರಾಮದಲ್ಲಿ ರಾಣಿರಾಸಮಣಿ ಎಂಬ ಒಬ್ಬ ಪ್ರಸಿದ್ಧಳಾದ ಶ್ರೀಮಂತಳು ವಾಸಮಾಡುತ್ತಿದ್ದಳು. ಆಕೆಯು ವಿಧವೆ. ಆದರೂ ಕಾರ್ಯಧಕ್ಷಳು; ಸಾಹಸಿ ; ಆದ್ದರಿಂದ ತನ್ನಗಂಡನು ಸ್ವರ್ಗಸ್ಥನಾದಂದಿನಿ೦ದ ಜರ್ಮಿದಾರಿಯ ಕಾರ್ಯಭಾಗಗಳನ್ನೆಲ್ಲ ತಾನೇ ಸ್ವಂತವಾಗಿನಡೆಸುತ್ತ ಬೇಕಾದಷ್ಟು ಐಶ್ವರ್ಯವನ್ನು ಗಳಿಸಿದ್ದಳು. ಸಂಪಾದನೆಮಾಡುವುದರಲ್ಲಿ ಹೇಗೆ ಶಕ್ತಿಯಿತ್ತೋ ಹಾಗೆಯೇ ಆಕೆಯಲ್ಲಿ ಕೈ ಬಿಟ್ಟು ಖರ್ಚುಮಾಡುವ ಔದಾರ್ಯವೂ ಇತ್ತು. ಬೆಸ್ತರ ಜಾತಿಯಲ್ಲಿ ಹುಟ್ಟಿದವಳಾದರೂ ಆಕೆಯು ತನ್ನ ಗುಣಕರ್ಮಗಳಿಂದ 'ರಾಣಿ' ಎಂಬ ಹೆಸರನ್ನು ಸಾರ್ಥಕಮಾಡಿಕೊಂಡಿದ್ದಳು. ಆಕೆಗೆ ಕಾಳಿಕಾ ದೇವಿಯಲ್ಲಿ ಬಹು ಭಕ್ತಿಯಿತ್ತು. ಕಾಶೀಕ್ಷೇತ್ರಕ್ಕೆ ಹೋಗಿ ವಿಶ್ವೇಶ್ವರನ ಮತ್ತು ಅನ್ನಪೂರ್ಣಾದೇವಿಯ ದರ್ಶನ ಸೇವೆಗಳನ್ನು ಮಾಡಬೇಕೆಂಬ ಆಶೆ ಬಹಳದಿನಗಳಿಂದ ಇತ್ತು. ಅದಕ್ಕಾಗಿ ಬಹಳ ಹಣವನ್ನು ಕೂಡಿಹಾಕಿದ್ದಳು. ಆದರೆ ಜರ್ಮೀಾದಾರಿಯ ಕೆಲಸವು ತನ್ನಕೊರಳಿಗೆ ಬಿದ್ದದ್ದರಿಂದ ಬಹುದಿನಗಳು ಕಾಶಿಗೆ ಹೋಗಲು ಸಮಯಸಿಕ್ಕಲಿಲ್ಲ. ಈ ಕಾಲದಲ್ಲಿ ಆಕೆಯ ಅಳಿಯನಾದ ಮಧುರಾನಾಥವಿಶ್ವಾಸನು ಜರ್ಮೀಾದಾರಿಯ ಆಡಳಿತಮಾಡುವುದರಲ್ಲಿ ಸಹಾಯಕನಾದ್ದರಿಂದ ಕಾಶೀಯಾತ್ರೆಗೆ ಹೊರಡಲು ಬೇಕಾದ ಸನ್ನಾಹಗಳನ್ನು ಮಾಡಿಕೊಂಡಳು. ಯಾತ್ರೆಗೆ ಹೊರಡಬೇಕೆಂದಿದ್ದದಿನದ ಹಿಂದಿನರಾತ್ರಿ ಸ್ವಪ್ನದಲ್ಲಿ ದೇವಿಯು ಆಕೆಗೆ ಪ್ರತ್ಯಕ್ಷಳಾಗಿ "ನೀನು ಕಾಶಿಗೆಹೋಗಬೇಕಾದ ಆವಶ್ಯಕವಿಲ್ಲ. ಬಾಗೀರಥಿಯತೀರದಲ್ಲಿ ಒಂದು