ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಎಂಟನೆಯ ಪ್ರಕರಣ.
೪೫

ಮಾವ, ಚಿಕ್ಕಪ್ಪ, ದೊಡ್ಡಪ್ಪ ಮೊದಲಾದ ನಂಟರನ್ನು ಪ್ರೀತಿಯಿಂದ ಕಾಣುತ್ತೆ ಅವರ ಮನಸ್ಸಿಗೆ ನೋವನ್ನುಂಟುಮಾಡದಿರಬೇಕು. ದೂರ ಬಂಧುಗಳಾದವರಿಗೂ ಆಕಸ್ಮಿಕವಾಗಿ ಆವುದಾದರೊಂದು ಆವದವೋದವಿದಾಗ ನಾವು ಅವರಿಗೆ ಒಳ್ಳೆಯ ಮಾತುಗಳಿಂದಲೂ ಧನದಿಂದಲೂ ಕೈಲಾದ ಸಾಹಾಯ್ಯವನ್ನೂ ಮಾಡುತ್ತಿರಬೇಕು; ಹಾಗೆ ಮಾಡದ ಪಕ್ಷದಲ್ಲಿ ನಮಗೆ ಆವದವೊದವಿದಾಗ ಅವರೂ ತಕ್ಕಸಾಹಾಯ್ಯವನ್ನು ಮಾಡದಿದ್ದಾರು.

ಚಂದ್ರ - ಈಗ ನೀವು ತಿಳಿಸಿದವರು ಮಾತ್ರವಲ್ಲದೆ ಮತ್ತಾರಾದರೂ ಮುಖ್ಯ ಬಂಧುಗಳಿರುವರೇ?

ಗುರು - ಸತಿಪತಿಯರಿರುವರಾದರೂ ಅವರನ್ನು ಬಂಧುಗಳೆಂದು ಹೇಳುವುದಕ್ಕಿಂತ ಬೇರೆಬೇರೆದೇಹಗಳಾಗಿದ್ದರೂ ಅವರಿಬ್ಬರೂ ಒಂದೇ ಎಂದು ಹೇಳಬೇಕು. ಸತಿಯು ಪತಿಯ ಅರ್ಧಶರೀರವೆಂದು ಸಕಲಮತದವರೂ ಸಮ್ಮತಿಸುವರು. ಅವರು ತಂತಮ್ಮಲ್ಲಿ ಭೇದವನ್ನೆಣಿಸದೆ ಸಮಸ್ತ ಕಾರ್ಯಗಳಲ್ಲಿಯೂ ಒಂದಾಗಿ ಪ್ರವರ್ತಿಸಬೇಕು. ಒಂದು ಕುಟುಂಬಕ್ಕೆ ಇಬ್ಬರು ಯಜಮಾನರಾದರೆ ಸರಿಬಾರದಾದುದರಿಂದ, ಭಗವಂತನು ಪತಿಯನ್ನು ಯಜಮಾನನನ್ನಾಗಿಯೂ ಪತ್ನಿಯನ್ನು ಅವನಾಜ್ಞೆಗಧೀನಳಾಗಿರುವಂತೆಯೂ ಸೃಷ್ಟಿಸಿರುವನು. ಅರಸನಿಗಿಂತ ಪ್ರಜೆಗಳು ಒಂದುವೇಳೆ ಬುದ್ಧಿವಂತರಾಗಿದ್ದರೂ, ಆತನಿಗೆ ಅಧೀನರಾಗಿಯೇ ನಡೆದುಕೊಳ್ಳಬೇಕೆಂಬುದು ಹೇಗೆ ವಿಧಾಯಕವಾದುದೋ, ಹಾಗೆಯೇ ಪತ್ನಿಯು ಒಂದುವೇಳೆ ಪತಿಗಿ೦ತ ಬುದ್ದಿ ಶಾಲಿನಿಯಾಗಿಯೂ, ರೂಪವತಿಯಾಗಿಯೂ, ವಿದ್ಯಾಸಂಪನ್ನೆಯಾಗಿಯೂ ಇರುವಂತಹ ಸಂದರ್ಭದಲ್ಲಿಯೂ, ತನ್ನ ಪತಿಗೆ ಅಧೀನಳಾಗಿಯೇ ನಡೆದುಕೊಳ್ಳಬೇಕು. ಒಂದು ವೇಳೆ ಪುರುಷನು ಕೋಪಶೀಲನಾಗಿ ಅಕ್ರಮವಾಗಿ ಹೊಡೆದು ಬಯ್ದರೂ ಆತನಿಗಿದಿರಾಡದೆ ಸೈರಣೆಯನ್ನು ವಹಿಸಿ ಆತನನ್ನು ಯುಕ್ತರೀತಿಯಲ್ಲಿ ಅನುವರ್ತಿಸಬೇಕು. ಪತಿಯು ದುಡುಕಿ ಆವುದಾದರೊಂದು ಅಯುಕ್ತವಾದ ಕಾರ್ಯವನ್ನು ಮಾಡುತ್ತಿದ್ದರೂ ಕೋಪವು ಶಾಂತವಾದ ಬಳಿಕ ಒಳ್ಳೆಯ ಸಮಯದಲ್ಲಿ ಆತನಿಗೆ ಮೆಲ್ಲನೆ ಹಿತಬೋಧನೆಯನ್ನು ಮಾಡಿ ಒಳ್ಳೆಯ ಮಾರ್ಗಕ್ಕೆ ತಿರುಗುವಂತೆ ಮಾಡಬೇಕು. ಪತಿಯು ಹೊರಗೆ ಶ್ರಮಪಟ್ಟು ತಿರುಗಿ ಮನೆಗೆ ಬರುವ