ಪುಟ:ಚಂದ್ರಮತಿ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೪ ಚ೦ದ್ರಮತಿ, ವುದಕ್ಕೋಸುಗ ತನ್ನ ಜೊತೆಕಾಗೆಗಳನ್ನು ಕೂಗಿದುದನ್ನೂ ಕಂಡು ನನಗೆ ಆಶ್ಚರ್ಯವುಂಟಾಯಿತಾದುದರಿಂದ ನೋಡುತ್ತಿರುವೆನು. ಗುರು-ಆ ಕಾಗೆಯು ಬಂಧುಗಳ ವಿಷಯದಲ್ಲಿ ಮನುಷ್ಯರೂ ಹೀಗೆಯೇ ನಡೆದುಕೊಳ್ಳಬೇಕೆಂದು ಬುದ್ದಿಗಲಿಸುವುದು. ಬುದ್ದಿವಂತರಾ ದವರಿಗೆ ಭಗವತ್ಕೃಷ್ಟಿಯಲ್ಲಿರುವ ಪ್ರತ್ಯಲ್ಪವಸ್ತುವಿನಿಂದಲೂ ತಿಳಿದುಕೊಳ್ಳ ತಕ್ಕ ವಿಷಯಗಳೆಷ್ಟೊ ಕಾಣಿಸುವುವು. ಚಂದ್ರ-ಹಿಂದೆ ನೀವು ನಂಟರವಿಷಯದಲ್ಲಿ ನಡೆದುಕೊಳ್ಳಬೇಕಾದ ಧರ್ಮಗಳನ್ನು ಕುರಿತು ತಿಳಿಸುವೆನೆಂದು ಅಪ್ಪಣೆ ಕೊಡಿಸಿದ್ದಿರಲ್ಲವೇ ? ಈಗ ನನಗಾವಿಷಯವನ್ನು ಚೆನ್ನಾಗಿ ಬೋಧಿಸಬೇಕೆಂದು ಬೇಡಿಕೊಳ್ಳು, ವೆನು. ಗುರು-ನಾವು ಸಾಧಾರಣವಾಗಿ ನಂಟರೆಲ್ಲರ ವಿಷಯದಲ್ಲಿಯೂ ಪ್ರೀತಿಯುಳ್ಳವರಾಗಿ ಸಾಧ್ಯವಾದಷ್ಟು ಮಟ್ಟಿಗೂ ಅವರಿಗೆ ನಮ್ಮ ಕೈಲಾದ ಸಾಹಾಯ್ಯನನ್ನು ಯುಕ್ತ ಸಮಯಗಳಲ್ಲಿ ಮಾಡುತ್ತಿರಬೇಕು. ಅಶಕ್ತರಾಗಿ ಹುಟ್ಟ, ನಮಗಿ೦ತಹುದು ಬೇಕೆಂಬುದನ್ನಾದರೂ ಹೇಳಲಾರದೆ, ಅಳುವು ದೊ೦ದನ್ನುಳಿದು ಮತ್ಯಾವುದನ್ನೂ ಮಾಡಲಾರದಿರುವಂತಹ ಬಾಲ್ಯದಶಿ ಮೊದಲ್ಗೊಂಡು, ನಮ್ಮನ್ನು ಹಲವುಬಗೆಯಾಗಿ ಪೋಷಿಸಿ, ನಮ್ಮ ಇಂಗಿತ ವನ್ನರಿತು ಹಸಿವಾದಕಾಲದಲ್ಲಿ ಆಹಾರವನ್ನುಣಿಸಿ ನಮ್ಮ ಕಾಲಲ್ಲಿ ಮುಳ್ಳು ಚುಚ್ಚಿಕೊಂಡರೂ ತಾವು ನಿದ್ರಾಹಾರಗಳಿಲ್ಲದೆ ಪರಿತಪಿಸುತ್ತೆ ಚಿಕಿತ್ಸೆ ಮಾ ಡಿಸಿ, ನಮಗೆ ವಿದ್ಯಾ ಬುದ್ದಿಗಳನ್ನು ಕಲಿಸಿ, ಬೆಳಸಿ, ದೊಡ್ಡವರನ್ನಾಗಿ ಮಾಡಿದ ತಾಯ್ತಂದೆಗಳ ವಿಷಯದಲ್ಲಿ ನಾವು ಬಹು ಕೃತಜ್ಞತೆಯುಳ್ಳವ ರಾಗಿ, ಅವರಲ್ಲಿ ಅತಿಶಯವಾದ ಪ್ರೇಮವನ್ನೂ ಭಕ್ತಿಯನ್ನೂ ಇಟ್ಟು ನ್ಯಾಯ್ಯ ವಾದ ಅವರ ಆಜ್ಞೆಗಳನ್ನೆಲ್ಲಾ ಶಿರಸಾವಹಿಸಿ ನಡೆಯಿಸಬೇಕು. ಅವರು ವೃದ್ಧರಾದಾಗಲೂ, ಅಶಕ್ತರಾದಾಗಲೂ ಅವರಿಗೆ ಸಮಸ್ತೋಪಚಾರ ಗಳನ್ನೂ ಮಾಡುತ್ತೆ ಅವರನ್ನು ಪೋಷಿಸಬೇಕು. ಒಡಹುಟ್ಟಿ, ಒಡ ನುಂಡು, ಒಡನಾಡಿ, ಒಡವೆಳದು, ಒಡನೆನಿದ್ರಿಸುವ ಅಣ್ಣಂದಿರು, ತಮ್ಮ ದಿರು, ಅಕ್ಕ ತಂಗಿಯರು ಮೊದಲಾದವರನ್ನು ಅತಿಶಯವಾದ ಅನುರಾಗ ದಿಂದ ಗೌರವಿಸಿ ಕನಸಿನಲ್ಲಾದರೂ ಕಲಹವಾಡದೆ ಬಾಳಬೇಕು. ಅತ್ತೆ,