ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮

ಶ್ರೀ ರಾಮಕೃಷ್ಣ ಪರಮಹಂಸರ

ಅವನಿಗಿದ್ದ ಅಭಿಲಾಷೆಯು ಹೆಚ್ಚಾಯಿತು. ಈ ಕೆಲಸದಲ್ಲಿದ್ದಾಗ ತಂದೆಸತ್ತ ದುಃಖವೂ ಬಹಳಮಟ್ಟಿಗೆ ಕಡಿಮೆ ಯಾಗುತ್ತಿದ್ದದರಿಂದಲೇ ಅವುಗಳಲ್ಲಿ ಹೆಚ್ಚು ಅಭ್ಯಾಸಕ್ಕೂ ಆಸಕ್ತಿಗೂ ಅವಕಾಶ ನಾಯಿತೆಂದು ತೋರುತ್ತದೆ.

ಗದಾಧರನ ವಿಚಿತ್ರವಾದ ಸ್ವಭಾವವು ಈ ಸಮಯದಲ್ಲಿ ಇನ್ನೊಂದು ವಿಧವಾಗಿ ಪ್ರಕಟವಾಯಿತು. ಕಾಮಾರಪು ಕುರದ ಹತ್ತಿರ ಜಗನ್ನಾಥಕ್ಕೆ ಹೋಗುವ ದಾರಿಯಿತ್ತು. ಇಲ್ಲಿ ಜಮೀನ್‌ದಾರನಾದ ಧರ್ಮದಾಸ ಲಾಹಾಬಾಬುವು ಒಂದುಛತ್ರವನ್ನು ಕಟ್ಟಿಸಿದ್ದನಾದ ಕಾರಣ ಅನೇಕ ಯಾತ್ರಿಕರೂ ಸಾಧುಸನ್ಯಾಸಿಗಳೂ ಇಲ್ಲಿ ಇಳಿದುಕೊಳ್ಳುತ್ತಿದ್ದರು. ಗದಾಧರನಿಗೆ ಸಂಸಾರವು ಅನಿತ್ಯವೆಂದು ಆಗಲೇ ಕಿವಿಗೆ ಬಿದ್ದಿತ್ತು. ತಂದೆಯ ಸಾವನ್ನು ನೋಡಿ ಅದು ಇನ್ನಷ್ಟು ಮುಂದಾಯಿತು. ಸಾಧು ಸಂಗದಿಂದಲೇ ಮನುಷ್ಯನು ಕೃತಾರ್ಥನಾಗಿ ರಾಂತಿಯನ್ನು ಪಡೆಯುವನೆಂದು ಪುರಾಣಗಳಲ್ಲಿ ಕೇಳಿದರಿಂದ ಈ ಸಾಧುಗಳನ್ನು ನೋಡುವ ಉದ್ದೇಶವಾಗಿ ಛತ್ರಕ್ಕೆ ಹೋಗಿ ಬರುತ್ತ ಅವರ ವೈರಾಗ್ಯ ಭಕ್ತಿ ಇವೆಲ್ಲವನ್ನು ಮೆಚ್ಚುತ್ತ ಬಂದನು. ಮೆಲ್ಲಗೆ ಅವರ ಸಹವಾಸವಾಯಿತು. ಅವರೂ ಇವನನ್ನು ಕಂಡು ಪ್ರೀತಿಸುತ್ತಾ ಅವನಿಗೆ ತಾವು ಮಾಡಿದ ತಿಂಡಿತೀರ್ಥಗಳನ್ನೂ ಕೊಡುತ್ತಾ ಇದ್ದರು. ಒಂದೊಂದು ದಿನ ಅವನು ಮೈಗೆಲ್ಲಾ ವಿಭೂತಿಯನ್ನು ಬಳಿದುಕೊಂಡು ಇಲ್ಲವೇ ನಾಮಗಳನ್ನಿಟ್ಟುಕೊಂಡು ಮನೆಗೆ ಬರುವನು, ಅಥವಾ ಉಟ್ಟ ಪಂಚೆಯನ್ನು ಹರಿದು ಕೊಪೀನವನ್ನು ಹಾಕಿಕೊಂಡು ಬಂದು “ ಅಮ್ಮಾ ಆ ಸಾಧು ನನಗೆ ಹೇಗೆಪಂಚೆ ಉಡಿಸಿದ್ದಾನೆ ನೋಡಿದೆಯಾ? " ಎಂದು ಕೇಳುವನು. ಇದನ್ನು ನೋಡಿ ಚಂದ್ರಾದೇವಿಗೆ ತನ್ನ ಮುದ್ದು ಮಗುವನ್ನು ಯಾವ ಬೈರಾಗಿಯು ಎಳೆದುಕೊಂಡು ಹೋಗಿ ಬಿಡುವನೋ ಎಂಬ ಚಿಂತೆಹತ್ತಿತು. ಈ ಸಮಯದಲ್ಲಿಯೇ ಒಂದುದಿನ ಆ ಊರಿನ